- ಸರಕಾರದ ಸಹಾಯಕ್ಕೆ ಕುಟುಂಬದ ಮನವಿ
- ಕಾಬುಲ್ ತಲುಪಲು ಹರ ಸಾಹಸ..!
- ಕನ್ನಡಿಗರಿಗೆ 080-22094498 ಹೆಲ್ಪ್ ಲೈನ್…
ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರಿಗೆ ಸಹಾಯವಾಣಿ!
NAMMUR EXPRESS EXCLUSIVE
ತೀರ್ಥಹಳ್ಳಿ: ಅಫ್ಘಾನಿಸ್ತಾನ ತಾಲೀಬಾನಿಗಳ ಕೈ ವಶವಾಗುತ್ತಿದ್ದಂತೆ, ಅಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿ ನೆಲೆಸಿದ್ದ ವಿದೇಶಿಗರು ದೇಶ ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕರ್ನಾಟಕದ ಅನೇಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದಾರೆ. ಈ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ಒಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಇದೀಗ ಅವರಿಗೆ ಭಾರತ ಸರಕಾರದ ನೆರವು ಬೇಕಿದೆ. ರಾಜ್ಯದ ಗೃಹ ಮಂತ್ರಿಗಳಾಗಿ ತೀರ್ಥಹಳ್ಳಿ ಶಾಸಕ ಆರಗ ಅವರು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ತೀರ್ಥಹಳ್ಳಿಯ ದೊಡ್ಡಮನೆ ಕೇರಿಯ ವಾಸಿಯಾಗಿರುವ ಫಾದರ್ ರಾಬರ್ಟ್ ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಪದವಿ ಪೂರೈಸಿ ಬಳಿಕ ಕ್ರೈಸ್ತ ಗುರುವಾಗಿ ಕೆಲಸ ಮಾಡಿದ್ದರು. ಮಂಗಳೂರು, ಬೆಂಗಳೂರು ಬಳಿಕ ಸಮಾಜ ಸೇವೆಯ ಕನಸು ಹೊತ್ತು ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಮಧ್ಯ ಅಫ್ಘಾನಿಸ್ತಾನದ ಬಾಮಿಯಾನ್ ಪ್ರಾಂತ್ಯದ ರಾಜಧಾನಿಯಾದ ಬಾಮಿಯಾನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಜೆಸ್ಯೂಟ್ ಸಮುದಾಯದ ಪಾದ್ರಿಯಾಗಿ ನಾಲ್ಕು ವರ್ಷಗಳ ದೀಕ್ಷೆ ಪಡೆದಿದ್ದರು. ನಂತರ ಬೆಂಗಳೂರಿನ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿದರು. ಇದಾದ ನಂತರ ಅಫ್ಘಾನಿಸ್ತಾನದಲ್ಲಿ ಕ್ರೈಸ್ತಗುರುವಾಗಿ ಸೇವೆ ಸಲ್ಲಿಸಲು ತೆರಳಿದ್ದರು. ಬದಲಾದ ಅಫ್ಘಾನಿಸ್ಥಾನ ಆಡಳಿತ ವ್ಯವಸ್ಥೆ ತಾಲೀಬಾನಿಗಳ ಕೈಗೆ ಹೋಗುತ್ತಿದ್ದಂತೆ ಅಲ್ಲಿಂದ ಭಾರತ ಮೂಲದವರು ಭಾರತಕ್ಕೆ ಬರಲು ಹರ ಸಾಹಸಪಡುತ್ತಿದ್ದಾರೆ.
ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರೋಡ್ರಿಗಸ್ ನಾನು ಇಲ್ಲಿ ಕಷ್ಟದಲ್ಲಿದ್ದೇನೆ. ಕಾಬುಲ್ ಏರ್ಪೋರ್ಟ್ ತಲುಪಲು ಸಾಧ್ಯ ಆಗುತ್ತಿಲ್ಲ. ನಮಗೆ ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮಕ್ಕೆ ಅವರು ಸಂದೇಶ ಕಳುಹಿಸಿದ್ದು,ನೆರವಿಗೆ ಮನವಿ ಮಾಡಿದ್ದಾರೆ.
ಅಫ್ಘನ್ ನಲ್ಲಿರುವ ಭಾರತಿಯರಿಗಾಗಿ ಪ್ರಾರ್ಥಿಸಿ ಎಂದು ಅಫ್ಘಾನಿಸ್ತಾನದಲ್ಲಿರುವ ಮಂಗಳೂರು ಮೂಲದ ಮತ್ತೋರ್ವ ಪಾದರ್ ಜರೋಮ್ ಸಿಕ್ವೇರಾ ಮನವಿ ಮಾಡಿದ್ದಾರೆ.
ಇತ್ತ ರಾಜ್ಯ ಸರ್ಕಾರ ಕೂಡ ಸಹಾಯವಾಣಿ ಆರಂಭಿಸಿದೆ.
080-22094498. Mobile: 9480800187.
Email: [email protected] ಸಂಪರ್ಕಿಸಲು ಕೋರಲಾಗಿದೆ.
ರಾಜ್ಯದ ನಿವಾಸಿಗಳ ಹೆಸರು, ಸಂಪರ್ಕ ಸಂಖ್ಯೆ, ವಿಳಾಸದ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಕುಟುಂಬದವರು ಪ್ರಸ್ತುತ ಇರುವಿಕೆ ಸ್ಥಳ, ಉದ್ಯೋಗ, ಯಾವ ಉದ್ದೇಶಕ್ಕೆಅಫ್ಘಾನಿಸ್ತಾನಕ್ಕೆ ಹೋಗಿದ್ದು, ಪಾಸ್ಪಾರ್ಟ್, ಮಾಹಿತಿ, ಬರಬೇಕಿದ್ದ ದಿನಾಂಕದ ಮಾಹಿತಿ ನೀಡಲು ಕೋರಲಾಗಿದೆ.