- ಹೂವು, ಹಣ್ಣು, ಅಂಗಡಿಗಳು ರಶ್
- ದೇಗುಲಗಳಲ್ಲಿ ವಿಶೇಷ ಪೂಜೆ ಇಲ್ಲ
- ತೀರ್ಥಹಳ್ಳಿ ಮಾರಿಕಾಂಬಾ, ಶೃಂಗೇರಿ, ಸಾಗರದಲ್ಲಿ ವಿಶೇಷ ಪೂಜೆ ಇಲ್ಲ
NAMMUR EXPRESS
ಮಲೆನಾಡು: ಹಿಂದೂಗಳ ಪವಿತ್ರ ಹಬ್ಬ ವರ ಮಹಾಲಕ್ಷ್ಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶುಭ ಶುಕ್ರವಾರ ಹಬ್ಬ ನಡೆಯಲಿದ್ದು ಕರೋನಾ ಹಿನ್ನೆಲೆ ಸರಳ ಹಬ್ಬಕ್ಕೆ ಎಲ್ಲಾ ಕಡೆ ಸಿದ್ಧತೆ ನಡೆದಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಹಬ್ಬ ಆಚರಣೆ ಮಾಡಲು ಸರ್ಕಾರ ಕರೆ ನೀಡಿದೆ.
ಮಾರುಕಟ್ಟೆಗಳಲ್ಲಿ ಜನವೋ ಜನ!: ಮಲೆನಾಡಿನ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಸಾಗರ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಮಲೆನಾಡಿನ ಎಲ್ಲಾ ಪಟ್ಟಣಗಳಲ್ಲೂ ಹಿಂದಿನ ದಿನವೇ ತಯಾರಿ ಕಂಡು ಬಂತು. ಹೂ, ಹಣ್ಣು ಅಂಗಡಿಗಳಲ್ಲಿ ಜನ ಹೆಚ್ಚಿತ್ತು. ಮಾರುಕಟ್ಟೆಗಳು ರಶ್ ಆಗಿದ್ದವು. ರಾಜಧಾನಿ ಬೆಂಗಳೂರಲ್ಲಿ ಕೂಡ ಜನರ ಓಡಾಟ ಹೆಚ್ಚಿತ್ತು.
ದೇಗುಲಗಳಲ್ಲಿ ವಿಶೇಷ ಪೂಜೆ ಇಲ್ಲ!: ಮಲೆನಾಡಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಇಲ್ಲ. ತೀರ್ಥಹಳ್ಳಿ ಮಾರಿಕಾಂಬಾ, ರಾಮೇಶ್ವರ, ಶೃಂಗೇರಿ, ಸಾಗರ, ಸಿಗಂದೂರು ಸೇರಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ವರ ಮಹಾಲಕ್ಷ್ಮಿ ಪೂಜೆ ಇರುವುದಿಲ್ಲ. ಶುಕ್ರವಾರದ ನಿತ್ಯ ಪೂಜೆ ಇರಲಿದೆ.
ತೀರ್ಥಹಳ್ಳಿ ಮಾರಿಕಾಂಬ ದೇವಾಲಯದಲ್ಲಿ ಸರ್ಕಾರಿ ನಿಯಮದಂತೆ ವಿಶೇಷ ಪೂಜೆ ಇರುವುದಿಲ್ಲ ಎಂದು ದೇವಸ್ಥಾನದ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.