- ಆ.20ರಿಂದ ಸುವರ್ಣಾದಲ್ಲಿ ಕಾರ್ಯಕ್ರಮ
- ಬಹುಮುಖ ಪ್ರತಿಭೆ ನಿಧಿ ಸುರೇಶ್ ಸ್ಪರ್ಧೆ
- ಮಲೆನಾಡ ಪ್ರತಿಭೆಗೆ ಬೆಂಬಲ, ಪ್ರೋತ್ಸಾಹವಿರಲಿ!
ತೀರ್ಥಹಳ್ಳಿ: ಮಲೆನಾಡು ಪ್ರತಿಭೆಗಳ ತವರೂರು. ಕಲೆ, ಸಾಹಿತ್ಯ, ನೃತ್ಯ, ಕ್ರೀಡೆ, ಸಿನಿಮಾ ಹೀಗೆ ಮಲೆನಾಡಿಗರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮೆರೆದಿದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ತೀರ್ಥಹಳ್ಳಿಯ ಬಹುಮುಖ ಪ್ರತಿಭೆ ನಿಧಿ ಸುರೇಶ್. ಸ್ಟಾರ್ ಸುವರ್ಣ ಚಾನಲ್ನಲ್ಲಿ ಆ.20ರಿಂದ ಪ್ರಸಾರವಾಗುವ ‘ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ನಿಧಿ ಸ್ಪರ್ಧಿಯಾಗಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಆ.20ರಂದು ಸಂಜೆ 6-30ಕ್ಕೆ ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ನಲ್ಲಿ ನಿಧಿ ಹಾಸ್ಯ ಕಲಾವಿದ ಜಗ್ಗಪ್ಪ ಜೊತೆ ” ರಗಡ್ ಅದಿನಿ ಬಾ ‘ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ತೀರ್ಥಹಳ್ಳಿಯ ಪ್ರಭಾವಿ ರಾಜಕೀಯ ಮುಖಂಡರಾದ ಅಮ್ರಪಾಲಿ ಸುರೇಶ್ ಮತ್ತು ಬಿ.ಎಲ್.ನಾಗಮಣಿ ಅವರ ಸುಪುತ್ರಿ ನಿಧಿ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿದ್ದಾರೆ. ನಿಧಿ ಸದ್ಯ ಜಯನಗರದ ಜೈನ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ. ನೃತ್ಯ ಕ್ಷೇತ್ರದಲ್ಲಿ ನಿಧಿ ಆಸಕ್ತಿ ಗುರುತಿಸಿದ ಪೋಷಕರು 4 ನೇ ವಯಸ್ಸಿನಿಂದಲೇ ನೃತ್ಯ ತರಬೇತಿಗೆ ಸೇರಿಸಿದ್ದರು. ಬೆಂಗಳೂರಿನ ಪ್ರಸಿದ್ಧ ತರಬೇತಿ ಸಂಸ್ಥೆ ಜೆನ್ನಿಸ್ ಸ್ಟೂಡಿಯೋ ದಲ್ಲಿ ಮಾಸ್ಟರ್ ಪ್ರವೀಣ್ ಅವರಿಂದ ತರಬೇತಿ ಪಡೆಯುತ್ತಿರುವ ನಿಧಿ, ಡ್ಯಾನ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯ ಮೋಡಿ ಮಾಡಲು ಸಿದ್ಧರಾಗಿದ್ದಾರೆ.
ಮೊದಲೇ ಹೇಳಿದಂತೆ ನಿಧಿ ಬಹುಮುಖ ಪ್ರತಿಭೆ. ಶಾಲಾದಿನಗಳಿಂದಲೂ ನೃತ್ಯ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಕರಾಟೆಯಲ್ಲಿ ಬ್ರೌನ್ ಮೆಡಲ್ ಪಡೆದಿರುವ ಈಕೆ, ರಾಷ್ಟ್ರಮಟ್ಟದ ಕರಾಟೆ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮಾಡೆಲಿಂಗ್ ನಲ್ಲೂ ಆಸಕ್ತಿ ಹೊಂದಿರುವ ನಿಧಿ, ಕಳೆದ ವರ್ಷ ನಡೆದ ಮಿಸ್ಟರ್ ಅಂಡ್ ಮಿಸ್ಸೆಸ್ ಏಷಿಯಾ ಗ್ಲಾಮರಸ್ 2020 ಸ್ಪರ್ಧೆಯ ಸೆಮಿಫೈನಲ್ ತಲುಪಿದ ಸಾಧಕಿ. 2019 ರಲ್ಲಿ ಸೌತ್ ಇಂಡಿಯಾ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ರಾಜ್ಯದ ಕೀರ್ತಿ ಪತಾಕೆ ರಾಷ್ಟಮಟ್ಟದಲ್ಲಿ ಹಾರಿಸಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ, ಚಿನ್ನಿ ಪ್ರಕಾಶ್, ರಕ್ಷಿತಾ ಪ್ರೇಮ್ ರಂತಹ ದಿಗ್ಗಜರ ಮುಂದೆ ನಿಧಿ ಪ್ರದರ್ಶನ ನೀಡುತ್ತಿದ್ದು, ಆಕೆಗೆ ಮಲೆನಾಡಿಗರ ಬೆಂಬಲ, ಪ್ರೋತ್ಸಾಹ, ಆಶಿರ್ವಾದ ಬಹಳಾ ಮುಖ್ಯ. ಮಲೆನಾಡಿನ ಹೆಮ್ಮೆಯ ಮಗಳು ನಿಧಿ ಸುರೇಶ್ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು NAMMUR EXPRESS ಹಾರೈಸುತ್ತದೆ. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.