- ಪತ್ನಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಲ್ಲಿದ್ದ ಕಿಮ್ಮನೆ
- ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು
- ಮತ್ತೆ ಅಖಾಡಕ್ಕೆ ಇಳಿಯಲು ಕಿಮ್ಮನೆ ಸಿದ್ಧ
- ಜಿಲ್ಲಾ ಸಂಘಟನೆಯತ್ತ ಮಂಜುನಾಥ ಗೌಡ?
NAMMUR EXPRESS
ತೀರ್ಥಹಳ್ಳಿ: ಕಾಂಗ್ರೆಸ್ ನಾಯಕ, ಮಾಜಿ ಶಿಕ್ಷಣ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಭಾನುವಾರ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿ ಅನಾರೋಗ್ಯ ಕಾರಣ ಬೆಂಗಳೂರಲ್ಲಿದ್ದ ಕಿಮ್ಮನೆ ರತ್ನಾಕರ್ ಅವರು ಕಳೆದ ಒಂದೆರಡು ತಿಂಗಳಿಂದ ರಾಜಕೀಯದಿಂದ ದೂರ ಆಗಿದ್ದರು. ಇದೀಗ ಪತ್ನಿ ಆರೋಗ್ಯ ಚೇತರಿಕೆಗೊಂಡಿದ್ದು, ತೀರ್ಥಹಳ್ಳಿಗೆ ಭಾನುವಾರ ಅಥವಾ ಸೋಮವಾರ ಆಗಮಿಸಲಿದ್ದಾರೆ ಎನ್ನಲಾಗಿದೆ.
ಕಿಮ್ಮನೆ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಅಭಿಮಾನಿಗಳಲ್ಲಿ ಮತ್ತೆ ಹುರುಪು ಬಂದಿದೆ. ಈಗಾಗಲೇ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಕ್ಷೇತ್ರದಲ್ಲಿದ್ದು ಇಬ್ಬರೂ ನಾಯಕರು ಅಭಿವೃದ್ಧಿ ಕಡೆ ಗಮನ ಕೊಡಲಿದ್ದಾರೆ. ಮತ್ತೊಂದು ಹೋರಾಟಕ್ಕೆ ಕಿಮ್ಮನೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಸಂಘಟನೆ ಕಡೆ ಮಂಜುನಾಥ ಗೌಡ?: ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ಸಂಘಟನೆ ಮಾಡಿದರೆ ಮತ್ತೊರ್ವ ನಾಯಕ ಮಂಜುನಾಥ ಗೌಡ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಧು ಬಂಗಾರಪ್ಪ ಜತೆ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಸಹಕಾರಿ ನಾಯಕರಾಗಿರುವ ಕಾರಣ ಎಲ್ಲಾ ತಾಲೂಕಲ್ಲಿ ತಮ್ಮದೇ ನಾಯಕತ್ವವನ್ನು ಮಂಜುನಾಥ ಗೌಡ ಹೊಂದಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.