- ವಾಯು ಸೇನೆ ವಿಮಾನದಲ್ಲಿ ದೆಹಲಿಗೆ
- 14 ದಿನಗಳ ಕ್ವಾರೈಟೈನ್ ಬಳಿಕ ತವರಿಗೆ
- ತೀರ್ಥಹಳ್ಳಿಯ ತವರು ಜನರಲ್ಲಿ ಸಂತಸ
NAMMUR EXPRESS
ಬೆಂಗಳೂರು: ಆಪಘನಿಸ್ಥಾನದಲ್ಲಿ ಉಗ್ರರ ಅಟ್ಟಹಾಸದ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ರಾಬರ್ಟ್ ರೋಡ್ರಿಗಸ್ ಭಾರತಕ್ಕೆ ಮರಳಿದ್ದಾರೆ.
ಭಾನುವಾರ ಅವರು ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯು ಸೇನೆ ವಿಮಾನದಲ್ಲಿ ಮೂವರು ಕನ್ನಡಿಗರೊಂದಿಗೆ 168 ಮಂದಿ ಭಾರತೀಯರ ಜತೆ ಬಂದಿಳಿದಿದ್ದಾರೆ.
ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ದೆಹಲಿಯ ಚಾವಲ್ಲಾ ಪ್ರದೇಶದಲ್ಲಿ ಸರಕಾರಿ ಕರೋನಾ ನಿಯಮ ಕಾರಣ 14 ದಿನ ಕ್ವಾರೈಟೈನ್ ಆಗಲಿದ್ದಾರೆ. ಇದೀಗ ಕುಟುಂಬದವರು, ಸ್ನೇಹಿತರಲ್ಲಿ ಸಂತಸ ಮೂಡಿದೆ.
ಮೂವರು ಕನ್ನಡಿಗ ಸಂಡೂರಿನ ಜಲಾಲ್, ಸಯ್ಯದ್, ತನ್ವಿನ್ ಜತೆ ರಾಬರ್ಟ್ ಬಂದಿಳಿದಿದ್ದಾರೆ.
ರಾಬರ್ಟ್ ತೀರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣ ಮುಗಿಸಿ ಮಂಗಳೂರು, ಬೆಂಗಳೂರು, ಪುನಾದಲ್ಲಿ ಕೆಲಸ ಮಾಡಿದ್ದರು. ಬಳಿಕ ಸಮಾಜ ಸೇವೆಗಾಗಿ ಆಫ್ಘನ್ ದೇಶಕ್ಕೆ ತೆರಳಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದಿತ್ತು.
ಆರಗ ಹೇಳಿದ್ದೇನು..?: ಆಪಘನಿಸ್ಥಾನದಲ್ಲಿ ಆರಾಜಕತೆ ಸೃಷ್ಟಿಯಾಗಿದ್ದು ಭಾರತೀಯರು ಸಿಲುಕಿದ್ದು ಅವರ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಕ್ರಮ ತೆಗೆದುಕೊಂಡಿದೆ. ರಾಜ್ಯದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ವಿಶೇಷ ಕ್ರಮ ತೆಗೆದುಕೊಂಡಿದೆ. ಇದೀಗ ಅದರ ಫಲವಾಗಿ 3 ಮಂದಿ ಕನ್ನಡಿಗರು ದೆಹಲಿಗೆ ಬಂದಿಳಿದಿದ್ದಾರೆ. ಇನ್ನು ಕನ್ನಡಿಗರ ರಕ್ಷಣೆಗೆ ವಿಶೇಷ ಕ್ರಮ ತೆಗೆದುಕೊಳ್ಳಲಾಗುವುದು.
- ಆರಗ ಜ್ಞಾನೇಂದ್ರ, ಗೃಹ ಸಚಿವರು
ಗೃಹ ಇಲಾಖೆಯ ವಿಶೇಷ ಟೀಂ!: ಆಪಘನಿಸ್ಥಾನದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ, ಗೃಹ ಇಲಾಖೆ ಎಡಿಜಿಪಿ ಉಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿತ್ತು. ತಾಲಿಬಾನಿನಲ್ಲಿ ಉಗ್ರರ ಹಿಡಿತದಲ್ಲಿದ್ದ ಕನ್ನಡಿಗರ ರಕ್ಷಣೆಗೆ ಹೆಲ್ಪ್ಲೈನ್ ಕೂಡ ಮಾಡಲಾಗಿತ್ತು. ಇಲ್ಲಿ ಅವರ ಕುಟುಂಬದವರಿಂದ ಮಾಹಿತಿ, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ವಿವರ ಪಡೆದು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಅಲ್ಲಿ ಆತಂಕದಲ್ಲಿದ್ದ ಕನ್ನಡಿಗರಿಗೆ ಸರ್ಕಾರ ಈ ಮೂಲಕ ಧೈರ್ಯ ತುಂಬಿದೆ. ಇನ್ನು ಅನೇಕರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.