- ಎಲ್ಲಾ ವಿಷಯದಲ್ಲೂ ರಾಜಕೀಯ ಬೇಕೇ..?
- ಹಳ್ಳಿ ನಾಯಕನ ಪ್ರಾಮಾಣಿಕ ಮಾತು ಎಡವಟ್ಟು
- ತಳಕು ಬಳಕು ರಾಜಕೀಯ ಗೊತ್ತಿಲ್ಲದ ನಾಯಕ
NAMMUR EXPRESS EDITORIAL
ಬೆಂಗಳೂರು: ಮೈಸೂರಲ್ಲಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣ ಇದೀಗ ರಾಜ್ಯವ್ಯಾಪಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಗೃಹ ಮಂತ್ರಿ, ಮಲೆನಾಡ ಹೆಮ್ಮೆಯ ನಾಯಕ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಎರಡು ಹೇಳಿಕೆ ಕೂಡ ಭಾರೀ ಸದ್ದು ಮಾಡಿವೆ.
ಒಂದು ಕತ್ತಲೆಯಲ್ಲಿ ಆ ಹುಡುಗಿ ಅಲ್ಲಿ ಏಕೆ ಹೋದಳು?, ಇನ್ನೊಂದು ಕಾಂಗ್ರೆಸ್ ಪಕ್ಷದವರು ನನ್ನ ರೇಪ್ ಮಾಡ್ತಾರೆ..!.
ಎರಡು ಹೇಳಿಕೆಗಳು ಗೊಂದಲದಿಂದ ಕೂಡಿದ್ದರೂ ವಾಸ್ತವತೆಗೆ ಹತ್ತಿರವಾಗಿದೆ.
ಹೇಳಿಕೆ 1. ಯಾವುದೇ ಮನೆಯ ಹೆಣ್ಣು ಮಕ್ಕಳು ಕೂಡ ರಾತ್ರಿ ನಿರ್ಜನ ಪ್ರದೇಶಕ್ಕೆ ಹೋಗುವುದು ತಪ್ಪು.ನಮ್ಮ ಹುಷಾರಲ್ಲಿ ನಾವಿರಬೇಕು ಎಂಬುದು ಅವರ ಮಾತಿನ ಅರ್ಥ. ಆದರೆ ಅದು ಅಂದಿನ ಪರಿಸ್ಥಿತಿಗೆ ತಪ್ಪು ಅನಿಸುತ್ತದೆ. ಆದರೆ ಎಲ್ಲಾ ಮನೆಗೆ ಓರ್ವ ಪೊಲೀಸ್ ಕೊಡಲು ಯಾವ ವ್ಯವಸ್ಥೆಗೂ ಸಾಧ್ಯವಿಲ್ಲ. ಪ್ರತಿ ಪ್ರಜೆಯೂ ತನ್ನ ಹುಷಾರಲ್ಲಿ ಇರಬೇಕು. ಮೊದಲೇ ಸಿಬ್ಬಂದಿ ಕೊರತೆ, ಕರೋನಾ ಹೊಡೆತಕ್ಕೆ ಸರಕಾರದ ಬಳಿಯೂ ಹಣವಿಲ್ಲ. ಈ ಹಂತಕ್ಕೆ ಅವರ ನೇರ ಹೇಳಿಕೆ ಮಾಧ್ಯಮ ವಲಯಕ್ಕೆ ಬಿಸಿ ಬಿಸಿ ಸರಕಾಗಿದೆ ಅಷ್ಟೇ!
ಹೇಳಿಕೆ 2. ಕಾಂಗ್ರೆಸ್ ಪಕ್ಷದವರು ನನ್ನ ರೇಪ್ ಮಾಡ್ತಾರೆ..ಈ ಹೇಳಿಕೆ ಮೈಸೂರಲ್ಲಿ ರೇಪ್ ಪ್ರಕರಣವನ್ನು ಕಾಂಗ್ರೆಸ್ ದಾಳವಾಗಿ ಬಳಸುತ್ತದೆ. ಆಗ ಗೃಹ ಮಂತ್ರಿಯಾಗಿರುವ ನನ್ನ ರೇಪ್ ಮಾಡಿದಷ್ಟು ಹಿಂಸೆ ಮಾಡುತ್ತಾರೆ ಎಂದಿದ್ದಾರೆ. ನಿಜ, ಯಾವುದೇ ಸರಕಾರ ಬಂದರೂ ಮನೆ, ಪಾರ್ಕ್, ಕಾಡು ಕಾಯಲು ಸಾಧ್ಯ ಇಲ್ಲ. ಆದರೆ ಪೊಲೀಸ್ ಹೆದರಿಕೆ ಜನರಿಗೆ ಕಡಿಮೆ ಆಗಬಾರದು ಅಷ್ಟೇ.
ಆರಗ ಜ್ಞಾನೇಂದ್ರ ಅವರು ಓರ್ವ ಹಳ್ಳಿಯ ನಾಯಕ. ರಾಜಕಾರಣದ ತಳಕು ಬಳಕು ಗೊತ್ತಿಲ್ಲ. ಅವರ ನೇರವಾದ ಮಾತು ಅವರಿಗೆ ಇರುಸು ಮುರುಸಾಗುತ್ತಿದೆ. ಪ್ರಾಮಾಣಿಕ ನಾಯಕನ ನೈಜ ಮಾತು ಅವರಿಗೆ ಸಂಕಟ ತರುತ್ತಿದೆ. ತೀರ್ಥಹಳ್ಳಿ ಅವರೇ ಆದ ಕಿಮ್ಮನೆ ರತ್ನಾಕರ್ ಕೂಡ ರಾಜ್ಯದಲ್ಲಿ ಸಚಿವರಾಗಿ ಉತ್ತಮ ಹೆಸರು ಪಡೆದಿದ್ದರು.
ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಎಲ್ಲಾ ವಿಚಾರಕ್ಕೂ ರಾಜಕೀಯ ಮಾಡಬಾರದು. ಪ್ರತಿ ಹಳ್ಳಿಯಲ್ಲೂ ಬೆಟ್ಟದಷ್ಟು ಕಾಣದ ಸಮಸ್ಯೆಗಳಿವೆ. ಪ್ರತಿ ಊರಲ್ಲೂ ಎಲ್ಲಾ ಪಕ್ಷದ ಅವಧಿಯಲ್ಲೂ ಅತ್ಯಾಚಾರ, ಕೊಲೆ ಆಗುತ್ತಿವೆ. ಆದರೆ ಅವರ ಮೇಲೆ ಇವರು, ಇವರ ಮೇಲೆ ಅವರು ರಾಜಕೀಯ ಮಾಡುತ್ತಾ ಕಾಲ ಕಳೆಯುವ ಬದಲು ಎಲ್ಲರೂ ಸೇರಿ ಅಭಿವೃದ್ಧಿ ಹಾದಿ ಹಿಡಿಯಬೇಕಿದೆ.
ಮೈಸೂರಲ್ಲಿ ಭೇಟಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೈಸೂರಲ್ಲಿ ಪೊಲೀಸ್ ಇಲಾಖೆ ಜತೆ ಸಭೆ ನಡೆಸಿದರು. ಬಳಿಕ ಮೈಸೂರಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳ ಬಂಧನದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ ಸುತ್ತೂರು ಮಠದ ಸುತ್ತೂರು ಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.