- ಎಲ್ಲಾ ಶಾಲೆಗಳಲ್ಲೂ ಸಿಹಿ ನೀಡಿ ಮಕ್ಕಳಿಗೆ ಸ್ವಾಗತ
- ಮೊದಲ ದಿನ ಆಟ ಆಡಿ ಪಾಠ: ಕರೋನಾ ಎಚ್ಚರಿಕೆ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆರರಿಂದ ಎಂಟನೇ ತರಗತಿಗೆ ಶಾಲೆ ಶುರುವಾಗಿದ್ದು, ಶಾಲೆಗಳಲ್ಲಿ ಸಂಭ್ರಮ ಕಂಡು ಬಂತು. ತೀರ್ಥಹಳ್ಳಿಯ ಎಲ್ಲಾ 80 ಶಾಲೆಗಳಲ್ಲಿ ಮೊದಲ ದಿನದಿಂದ ಮಕ್ಕಳು ಉತ್ಸಾಹದಿಂದ ಭಾಗಿಯಾದರು. ಅಧಿಕಾರಿಗಳು ಬೆಳಿಗ್ಗೆಯೇ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸ್ವಾಗತ ಕೋರಿದರು. ಶಿಕ್ಷಕರು ಮಕ್ಕಳಿಗೆ ಸ್ವಾಗತಿಸಿದರು. ಕೆಲವೆಡೆ ಮಕ್ಕಳಿಗೆ ಬೊಕ್ಕೆ, ಹೂವು, ಸಿಹಿ ಕೊಟ್ಟು ಹಬ್ಬದಂತೆ ಆಚರಣೆ ಮಾಡಲಾಯಿತು. ಎಲ್ಲಾ ಶಾಲೆಯಲ್ಲೂ ಕರೋನಾ ನಿಯಮ ಪಾಲನೆ ಮಾಡಲಾಯಿತು.
ಶಾಲೆಗಳನ್ನು ಸ್ವಚ್ಛ ಮಾಡಿ ಕೆಲವು ಶಾಲೆಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿ ಮಕ್ಕಳನ್ನು ಸ್ವಾಗತಿಸಲಾಯಿತು ಮಧ್ಯಾಹ್ನದವರೆಗೆ ಮಾತ್ರ ಶಾಲೆಗಳು ಇದ್ದು, ಮಕ್ಕಳು ಸಂಭ್ರಮದಿಂದ ತರಗತಿಗಳಲ್ಲಿ ಪಾಲ್ಗೊಂಡರು.
80 ಪ್ರಾಥಮಿಕ ಶಾಲೆ, 41 ಪ್ರೌಢ ಶಾಲೆಗಳಲ್ಲಿ ಮೊದಲ ದಿನ ಮಕ್ಕಳು ಹಾಜರಾದರು. ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇತ್ತು. 20ಕ್ಕೂ ಹೆಚ್ಚು ಅಧಿಕಾರಿಗಳು ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲಿಯೂ ಯಾವುದೇ ಕುಂದು ಕೊರತೆ ಕಾಣಲಿಲ್ಲ. ಆದರೆ ಹಲವೆಡೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.
ಸಾರಿಗೆ ಸಮಸ್ಯೆ!: ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೆಲವೆಡೆ ಬಸ್ ಸಮಸ್ಯೆಗಳ ಕಾರಣ ಮಕ್ಕಳು ಹಾಜರಾಗಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.10ಕ್ಕೂ ಹೆಚ್ಚು ಶಾಲೆ ಬೀಗ ತೆಗೆಯೋರ್ ಇಲ್ಲ: ತೀರ್ಥಹಳ್ಳಿ ತಾಲೂಕಿನ 40 ಶಾಲೆಗಳಲ್ಲಿ 32 ಶಿಕ್ಷಕರ ಕೊರತೆ ಇದೆ. ಈ ಕಾರಣಕ್ಕೆ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬೀಗ ತೆಗೆಯೋರು ಕೂಡ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.