ತೀರ್ಥಹಳ್ಳಿ ಆಟೋ ಚಾಲಕರೇ ಇನ್ಶೂರೆನ್ಸ್ ಕಡ್ಡಾಯ!
– ನಿರ್ಲಕ್ಷ್ಯ ಬೇಡ, ಇನ್ಶೂರೆನ್ಸ್ ಮಾಡದಿದ್ರೆ ದಂಡ ಖಚಿತ
* ಕಾನೂನು ನಿಯಮ ಪಾಲನೆ ನಮ್ಮ ಕರ್ತವ್ಯ: ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಅವರಿಂದ ಮನವಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಆಟೋ ರಿಕ್ಷಾ ಚಾಲಕರ ಇನ್ಶೂರೆನ್ಸ್ ಮಾಡಿಸದೆ ಆಟೋ ಚಾಲನೆ ಮಾಡುತ್ತಿದ್ದು ದಂಡ ಹಾಕಲಾಗುತ್ತಿದೆ. ಅಲ್ಲದೆ ಒಂದು ವೇಳೆ ಇನ್ಶೂರೆನ್ಸ್ ಇಲ್ಲದೆ ಇದ್ದರೆ ಆಟೋ ಚಾಲಕರ ಬದುಕಿಗೂ ತೊಂದರೆ ಆಗಲಿದೆ.
ಹೀಗಾಗಿ ಪ್ರತಿಯೊಬ್ಬರೂ ಇನ್ಶೂರೆನ್ಸ್ ಮಾಡಿಸಿಕೊಳ್ಳಬೇಕಿದೆ.
ವಿಮೆ ಬಗ್ಗೆ ಹಾಗೂ ಆಟೋ ಬಗ್ಗೆ ಚಾಲಕರ ಮತ್ತು ಮಾಲೀಕರ ನಿರ್ಲಕ್ಷ ಹೆಚ್ಚಾಗಿದ್ದು, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪು ಗುಡ್ಡೆ ರಾಘವೇಂದ್ರ, ಈ ಬಗ್ಗೆ ಜವಾಬ್ದಾರಿ ವಹಿಸಿ ಆಟೋ ಚಾಲಕರ ಪರ ನಿಂತು ಬಿಡಿಸುತ್ತಿದ್ದರು. ಆದರೆ ದಿನೇ ಪ್ರಕರಣ ಹೆಚ್ಚುತ್ತಿದೆ.
ಪೊಲೀಸರು ಕೂಡ ಯಾವುದೇ ರೀತಿಯ ಕ್ರಮ ವಹಿಸದೆ ಇನ್ಶೂರೆನ್ಸ್ ಬಗ್ಗೆ ತಿಳುವಳಿಕೆ ನೀಡಿ ಕಳುಹಿಸುತ್ತಿದ್ದರು. ಆಟೋ ರಿಕ್ಷಾ ಇನ್ಶೂರೆನ್ಸ್ ಭಾರತದ ಥ್ರೀ ವೀಲರ್ ವಾಹನವನ್ನು ಸಂರಕ್ಷಿಸಲು ಹಾಗೂ ಅದರ ಅಗತ್ಯಗಳಿಗೆ ಪೂರೈಸಲು ರಚಿಸಲಾದ ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಎಲ್ಲಾ ಆಟೋ ಮಾಲಕರಿಗೆ ಆರ್ಥಿಕ ರಕ್ಷಣೆ ಪಡೆಯಲು, ಕನಿಷ್ಠ ಪಕ್ಷ ಆಟೋ ರಿಕ್ಷಾ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತಗಳು, ಡಿಕ್ಕಿ, ನೈಸರ್ಗಿಕ ವಿಪತ್ತು, ಬೆಂಕಿ ಹಾಗೂ ಇತರ ದುರ್ಘಟನೆಗಳಿಂದ ಆದ ಸ್ವಂತ ಹಾನಿಗಳ ವಿಮೆ ಹಣ ಪಾವತಿ ಮಾಡಲು ಆಟೋ ರಿಕ್ಷಾ ಪಾಲಿಸಿಯನ್ನು ಹೊಂದಿರಬೇಕು. ಇನ್ನೂ ಮುಂದೆ ಇನ್ಶೂರೆನ್ಸ್ ಇಲ್ಲದೆ, ಸಮವಸ್ತ್ರ ಧರಿಸದೆ ರಿಕ್ಷಾ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ದಂಡ ಖಚಿತವಾಗಿದೆ.
ಸೊಪ್ಪುಗುಡ್ಡೆ ರಾಘವೇಂದ್ರ ಮನವಿ
ರಿಕ್ಷಾ ಚಾಲಕರು ಈ ಬಗ್ಗೆ ನಿರ್ಲಕ್ಷ್ಯ ತೋರದೆ ಜವಾಬ್ದಾರಿಯುತವಾಗಿ ನಿಯಮ ಪಾಲಿಸುವುದು ಕರ್ತವ್ಯವಾಗಿದೆ.
ಯಾವುದೇ ರೀತಿಯ ನಿಯಮವನ್ನು ಉಲ್ಲಂಘಿಸದೆ ಭಾರತೀಯ ಕಾನೂನು ಕ್ರಮವನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕಾಗಿ ಈ ಮೂಲಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮನವಿ ಮಾಡಿದ್ದಾರೆ.