Categories
ಚಿಕ್ಕಮಗಳೂರು

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ!

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ!

– ಪ್ರವಾಸಿಗರ ಹುಚ್ಚಾಟ, ಪ್ರಶ್ನೆ ಮಾಡಿದಕ್ಕೆ ಧಮ್ಕಿ!
– ಮದ್ಯವಿದ್ದ ಕಾರು ಪೊಲೀಸರ ವಶ!

NAMMUR EXPRESS NEWS
ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿರುವಾಗ ಕೆಲ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಾರೆ. ಮುಳ್ಳಯ್ಯನಗಿರಿ ಭಾಗದಲ್ಲಿ ಮದ್ಯಪಾನ ನಿಷೇಧ ಮಾಡಿದ್ದರೂ ಬೆಂಗಳೂರು ಮೂಲದ ಪ್ರವಾಸಿಗರಿಂದ ಎಣ್ಣೆ ಪಾರ್ಟಿ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಪ್ರವಾಸಿ ಮಿತ್ರ ಪಡೆಯ ಸದಸ್ಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಕದ್ದು ಮುಚ್ಚಿ ಡ್ರಿಂಕ್ಸ್ ತಂದು ಪಾರ್ಟಿ ಮಾಡುತ್ತಿದ್ದರು. ಇವರಿಂದಾಗಿ ಇನ್ನುಳಿದ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಿದೆ. ಸದ್ಯ ಮದ್ಯವಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.