ಪ್ರಸಿದ್ಧ ಕುಂದಾದ್ರಿ ಬೆಟ್ಟಕ್ಕೆ ಸಚಿವ ಸುಧಾಕರ್ ಭೇಟಿ
* ಕ್ಷೇತ್ರದ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಸಚಿವ
* ಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ ಆಡಳಿತ ಮಂಡಳಿ
NAMMUR EXPRESS NEWS
ತೀರ್ಥಹಳ್ಳಿ: ಪ್ರಸಿದ್ಧ ಜೈನ ಕ್ಷೇತ್ರ ತೀರ್ಥಹಳ್ಳಿ ತಾಲೂಕಿನ ಕುಂದಾದ್ರಿ ಬೆಟ್ಟಕ್ಕೆ ದಿ.17 ರಾಜ್ಯ ಸರ್ಕಾರದ ಸಚಿವರಾದ ಡಿ.ಸುಧಾಕರ್ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಪಾರಂಪರಿಕ ಇತಿಹಾಸದ ಬಗ್ಗೆ ಮಾಹಿತಿ ಪಡೆದರು .ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರಲ್ಲಿ ಚರ್ಚಿಸಿ ಆಡಳಿತ ಮಂಡಳಿ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೊನ್ನೇತಾಳು ಗ್ರಾಮಪಂಚಾಯ್ತಿ ಸದಸ್ಯರಾದ ರಾಘವೇಂದ್ರ ಕುಂದಾದ್ರಿ, ಅರ್ಚಕರಾದ ಶಾಂತಿನಾಥ ಜೈನ್, ಹೊಂಬುಜ ಮಠದ ದೇವೇಂದ್ರಪ್ಪ,ಮತ್ತು ಹುಂಬಜ ಮಠದ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.
ಕುಂದಾದ್ರಿ ಅಭಿವೃದ್ಧಿಗೆ ಪ್ಲಾನ್
ರಾಜ್ಯದ ಪ್ರಮುಖ ಐತಿಹಾಸಿಕ ದೇವಾಲಯ ಹಾಗೂ ಬೆಟ್ಟ ಇರುವ ಕುಂದಾದ್ರಿ ಅಭಿವೃದ್ಧಿಗೆ ಸರ್ಕಾರದ ಅನುದಾನ ಕೊಡಿಸುವುದಾಗಿ ಈ ವೇಳೆ ಸಚಿವರು ಭರವಸೆ ನೀಡಿದರು.