- ಪಕ್ಷಾತೀತ ಹೋರಾಟಕ್ಕೆ ಸಜ್ಜು: ಪೂರ್ವಭಾವಿ ಸಭೆ
- ಏ.18ಕ್ಕೆ ಶೃಂಗೇರಿಯಲ್ಲಿ ಸಭೆ: ಸಹಿ ಸಂಗ್ರಹ ಸಿದ್ಧತೆ
- ಮಲೆನಾಡು ಜನಪರ ಒಕ್ಕೂಟದ ಆಯೋಜನೆ
NAMMUR EXPRESS NEWS
ಮಲೆನಾಡು ಹೊರಗಿನವರಿಗೆ ನೋಡಲು ಚಂದ. ಆದರೆ ಮಲೆನಾಡಿನ ಮಡಿಲಿನಲ್ಲಿ ಬದುಕು ನಡೆಸುತ್ತಿರುವ ಮಲೆನಾಡ ಮಕ್ಕಳ ಕಷ್ಟಗಳು ಹೇಳತೀರದಾಗಿದೆ. ಕೆಲವೊಂದು ಸಮಸ್ಯೆಗಳು ತಕ್ಷಣಕ್ಕೆ ಹೊಳೆದರೆ ಇನ್ನುಳಿದ ಭೀಕರ ಸಮಸ್ಯೆಗಳು ಮುಂದಿನ ದಿನಗಳಲ್ಲಿ ನಮ್ಮ ಕಾಲಕ್ಕೂ ಅಥವಾ ನಮ್ಮ ಮಕ್ಕಳ ಕಾಲಕ್ಕೂ ನಮ್ಮನ್ನು ತಬ್ಬಲಿ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ನಮಗೆ ಬಂದೊದಗಿರುವ ಹಾಗೂ ಮುಂದೆ ಬರಲಿರುವ ಸಮಸ್ಯೆಗಳ ಬಗ್ಗೆ ನಾವು ನೀವು ಅರಿತುಕೊಂಡು – ಒಬ್ಬ ಮಲೆನಾಡಿಗನಾಗಿ ಹಾಗೂ ಪಕ್ಷಾತೀತವಾಗಿ ಒಗ್ಗಟಾಗಿ ಒಂದು ಆಂದೋಲನವನ್ನೇ ರೂಪಿಸಬೇಕಿದೆ. ಈ ಮಲೆನಾಡ ನೆಲ ಹೋರಾಟದ ನೆಲವಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮನ್ನ ಆಳುವವರಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆಂದೋಲನದ ಮೂಲಕ ಕಣ್ಣು ತೆರೆಸಬೇಕಾಗಿದೆ.
ಈಗಾಗಲೇ “ಸಹಿ ಸಂಗ್ರಹ” ದ ಆಂದೋಲನವನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ “ಮಲೆನಾಡಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮುಷ್ಕರ ಹೂಡುವ ಕುರಿತು” ಚರ್ಚಿಸಲು ಪೂರ್ವಭಾವಿ ಸಭೆಯನ್ನು 18-4-2022 ರ ಸೋಮವಾರ, ಸಂಜೆ: 4.30ಕ್ಕೆ ಸರಿಯಾಗಿ ಶೃಂಗೇರಿಯ ಹೋಟೆಲ್ ಶಾರದಾ ಕಂಫರ್ಟ್ನ ಸಭಾಂಗಣದಲ್ಲಿ ಸಭೆ ಕರೆದಿದ್ದು, ತಾವುಗಳು ಈ ಸಭೆಗೆ ಆಗಮಿಸಿ ಸೂಕ್ತವಾದ ಸಲಹೆ-ಸಹಕಾರಗಳನ್ನು ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಎಲ್ಲಾ ಮಲೆನಾಡಿಗರ ಪರವಾಗಿ: ಮಲೆನಾಡು ಜನಪರ ಒಕ್ಕೂಟ
9480070279 | 9480070163 | 9448241148
[email protected]
[email protected]