- ಹಲವೆಡೆ ಭಾರೀ ಮಳೆಗೆ ಮರ ಧರೆಗೆ: ವಿದ್ಯುತ್ ಇಲ್ಲ
- ಮಲೆನಾಡಿನ ಅನೇಕ ಕಡೆ ನೆಟ್ವರ್ಕ್ ಇಲ್ಲ
NAMMUR EXPRESS NEWS
ಮಲೆನಾಡು/ಬೆಂಗಳೂರು: ಅಕಾಲಿಕ ಮಳೆಗೆ ಜನಜೀವನ ತತ್ತರಗೊಂಡಿದೆ. ಮಲೆನಾಡಿನಲ್ಲಿ ಪ್ರತಿ ದಿನವೂ ಮಳೆ ಅಬ್ಬರ ಹೆಚ್ಚಾಗಿದೆ. ಒಂದು ಕಡೆ ಮಳೆಯಿಂದ ದುರಂತ ಸಂಭವಿಸಿದರೆ ಮತ್ತೊಂದು ಕಡೆ ಅಡಿಕೆಗೆ ಕೊಳೆ ಬರುವ ಆತಂಕ ಎದುರಾಗಿದೆ. ಕಳೆದ ಎರಡು ದಿನದಿಂದ ಬಿರುಗಾಳಿಗೆ ಮನೆಯ ಮೇಲೆ ಉರುಳಿದ ತೆಂಗಿನ ಮರ ಉರುಳಿವೆ. ಯಾವುದೇ ಪ್ರಾಣಪಾಯ ಆದ ಬಗ್ಗೆ ವರದಿ ಆಗಿಲ್ಲ.
ನರಸಿಂಹರಾಜಪುರ ತಾಲೂಕು ಉಂಬಳೇಬೈಲು ಗ್ರಾಮದ ಕಣಗಲಸರ ಕ್ಯಾಂಪ್ ನ ಉಪೇಂದ್ರ ರವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.
ಬಿರುಗಾಳಿ ಸಹಿತ ಭಾರಿ ಮಳೆ, ಸಿಡಿಲು ಬಡಿದು 14 ಕುರಿ, ಕುದುರೆ ಸಾವು: ಹುಬ್ಬಳ್ಳಿ ಸೇರಿ ಧಾರವಾಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಕುಂದಗೋಳ ತಾಲೂಕಿನಲ್ಲಿ ಸಿಡಿಲಿಗೆ 14 ಕುರಿ, ಒಂದು ಕುದುರೆ ಬಲಿಯಾಗಿವೆ.
ಉತ್ತರ ಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ಭಾಗದಲ್ಲೂ ಅಕಾಲಿಕ ಮಳೆಯಾಗುತ್ತಿದೆ.
ಅಡಿಕೆಗೆ ರೋಗ ಭೀತಿ..!?
ಅಕಾಲಿಕ ಮಳೆ ಕಾರಣ ಅಡಿಕೆಗೆ ರೋಗ ಭೀತಿ ಉಂಟಾಗಿದೆ. ಎಲ್ಲರೂ ಔಷಧಿ ಹೊಡೆಯಲು ಶುರು ಮಾಡಿದ್ದಾರೆ. ಇನ್ನು ಅಡಿಕೆ ಕಾಯಿ ಹಲವೆಡೆ ಉದುರುತ್ತಿದೆ.