- ಇಂಡಿಕೇಟರ್ ಇಲ್ಲದಿದ್ದರೆ ₹500 ದಂಡ
- ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ
NAMMUR EXPRESS NEWS
ನಾಗರಿಕರೆ ದ್ವಿಚಕ್ರವಾಹನಗಳನ್ನು ಮನೆಯಿಂದ ಹೊರ ತೆಗೆಯುವ ಮುನ್ನ ಜಾಗ್ರತೆ ಇರಲಿ, ನಿಮ್ಮ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ ₹500 ದಂಡ ತರಬೇಕಾಗುತ್ತದೆ.
ನಗರದ ವ್ಯಾಪ್ತಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೊಲೀಸರು, ಈಗ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ್ ದೀಪಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದಾರೆ. ಮುಂದಿನ ವಾರದಿಂದ ಈ ನಿಯಮ ಜಾರಿಗೆ ಬರಲಿದೆ ಈ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಹೆಚ್ಚಿನದಾಗಿ ದ್ವಿಚಕ್ರವಾಹನಗಳೇ ತುತ್ತಾಗುತ್ತಿದ್ದು ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ ಎಂಬುದು ಅಪಘಾತಗಳ ವಿಮರ್ಶೆಯಿಂದ ಗೊತ್ತಾಗಿದೆ. ಈ ದ್ವಿಚಕ್ರ ವಾಹನಗಳ ಅಪಘಾತಗಳ ಪೈಕಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ, ಸೈಡ್ ಮಿರರ್ ಗಳನ್ನು ಅಳವಡಿಸಿಕೊಳ್ಳದೆ ಹಾಗೂ ಇಂಡಿಕೇಟರ್ ದೀಪಗಳನ್ನು ಬಳಸದೆ ಅಡ್ಡಾದಿಡ್ಡಿಯಾಗಿ ಚಲಾಯಿಸುವುದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ ಈ ಹಿನ್ನೆಲೆಯಲ್ಲಿ ಸೈಡ್ ಮಿರರ್ ಮತ್ತು ಇಂಡಿಕೇಟರ್ ದೀಪಗಳ ಬಳಸದಿರುವ ದ್ವಿಚಕ್ರವಾಹನಗಳ ವಿರುದ್ಧ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಜಂಟಿ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.