- ಮಂಗಳವಾರದಿಂದ ಮೂರು ತಂಡಗಳ ಪ್ರವಾಸ
NAMMUR EXPRESS NEWS
ಮುಂಬರುವ ಚುನಾವಣೆಗೆ ಮತ್ತು ಪಕ್ಷ ಸಂಘಟನೆಗಾಗಿ ಮಂಗಳವಾರದಿಂದ 13 ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ಬಿಜೆಪಿ ಪ್ರಕಟಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ,
ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಈ ತಂಡದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು ಸಂಸದರು ಶಾಸಕರು ಸೇರಿದಂತೆ ಇನ್ನಿತರ ನಾಯಕರು ಇರಲಿದ್ದು ಹತ್ತು ವಿಭಾಗಗಳಲ್ಲಿ ಪ್ರವಾಸ ನಡೆಸಿ ಜಿಲ್ಲಾಮಟ್ಟದ ಕೋರ್ ಕಮಿಟಿ ಸಭೆ ಪದಾಧಿಕಾರಿಗಳ ಸಭೆ ಜಿಲ್ಲಾ ಪ್ರಮುಖರೊಂದಿಗೆ ಸಮಾಲೋಚನೆಯನ್ನು ನಡೆಸಲಿದ್ದಾರೆ. ಅಲ್ಲಲ್ಲಿ ಸಮಾವೇಶ ಆಯೋಜಿಸುವ ಮೂಲಕ ಪಕ್ಷ ಸಂಘಟನೆಗೆ ತಯಾರಿ ನಡೆಸಲಾಗಿದೆ. ಎ.16.17 ರಂದು ವಿಜಯನಗರದಲ್ಲಿ ನಡೆಯಲಿರುವ ಪಕ್ಷದ ಕಾರ್ಯ ಕಾರಿನಲ್ಲಿ ಎಲ್ಲಾ ನಾಯಕರು ಸಮಾವೇಶಗೊಳ್ಳಲಿದ್ದಾರೆ.
ತಂಡ-1
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉಪಾಧ್ಯಕ್ಷರಾದ ಪ್ರತಾಪ್ ಸಿಂಹ, ತೇಜಸ್ವಿನಿ ಅನಂತಕುಮಾರ್, ಎಂ ರಾಜೇಂದ್ರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಚಿವರಾದ ಕೆಎಸ್ ಈಶ್ವರಪ್ಪ ವಿ ಸೋಮಣ್ಣ ತಂಡದ ಸಂಯೋಜಕರಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಮುನಿರಾಜು ಗೌಡ ಇರಲಿದ್ದಾರೆ. ಎ.12 ಮತ್ತು 13ರಂದು ಮೈಸೂರು ವಿಭಾಗ ಎ.19 ಮತ್ತು 20 ರಂದು ಬಳ್ಳಾರಿ ವಿಭಾಗ, ಎ.21 ಮತ್ತು 22ರಂದು ಧಾರವಾಡ ವಿಭಾಗ, ಎ.23 ಹಾಗೂ 24ರಂದು ಬೆಂಗಳೂರು ನಗರ ವಿಭಾಗದಲ್ಲಿ ಪ್ರವಾಸ ನಡೆಯಲಿದೆ.
ತಂಡ – 2
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸೀಟಿ ರವಿ ರಾಜ್ಯ ಉಪಾಧ್ಯಕ್ಷರಾದ ಮಾಲಿಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಎಂ ಬಿ ನಂದೀಶ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ರಾಜ್ಯ ಕಾರ್ಯದರ್ಶಿ ಕೆ ಎಸ್ ನವೀನ್ ಸಂಯೋಜಕರಾಗಿ ಇರಲಿದ್ದಾರೆ.
ತಂಡ -3
ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಡಿವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಡಾ. ಸಿ ಎನ್ ಅಶ್ವಥನಾರಾಯಣ, ಬಿ ಶ್ರೀರಾಮುಲು ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಿ, ವಿಜಯೇಂದ್ರ, ನಯನ ಗಣೇಶ್, ಲಕ್ಷ್ಮಣ ಸವದಿ ತಂಡದಲ್ಲಿ ಇರಲಿದ್ದು ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಅವರು ಸಂಯೋಜಿಸಲಿದ್ದಾರೆ.