ಚನ್ನಪಟ್ಟಣದಲ್ಲಿ ಕಿಮ್ಮನೆ ಕಮಾಲ್: ಹೇಳಿದ್ದು ನಿಜವಾಯ್ತು!
– ಸಚಿವರು, ಮುಖಂಡರ ಜತೆ ಪ್ರಚಾರ ಮಾಡಿದ್ದ ಕಿಮ್ಮನೆ
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಈ ಬಾರಿ ತಮ್ಮ ತಂಡದೊಂದಿಗೆ ವಿಶೇಷ ಪ್ರಚಾರ ಮಾಡಿದ್ದರು. ಸಚಿವರು, ಶಾಸಕರ ಜತೆ ತೆರಳಿ ಮನೆ ಮನೆ ಪ್ರಚಾರ ಮಾಡಿದ್ದರು. ಜತೆಗೆ ಮಾಧ್ಯಮಗಳ ಜತೆ ಮಾತನಾಡಿ ಈ ಚುನಾವಣೆಯಲ್ಲಿ ಯೋಗೇಶ್ವರ್ ಅವರು 25 ಸಾವಿರ ಲೀಡ್ ಪಡೆಯಲಿದ್ದಾರೆ ಎಂದಿದ್ದರು. ಇದೀಗ ಯೋಗೇಶ್ವರ್ ಅವರು 25, 357 ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಅಧಿಕಾರ: ತೀರ್ಥಹಳ್ಳಿಯಲ್ಲಿ ವಿಜಯೋತ್ಸವ
– ಪಟಾಕಿ ಹೊಡೆದು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಮಹಾರಾಷ್ಟ್ರದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಐತಿಹಾಸಿಕ ದಿಗ್ವಿಜಯ ದಾಖಲಿಸಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ಯುವ ಘಟಕದ ತಾಲೂಕು ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಪ್ರಮುಖರಾದ ಪೂರ್ಣೇಶ್ ಪೂಜಾರಿ, ಪ್ರಸನ್ನ ಅಂದಗೆರೆ, ಸಂತೋಷ್ ಬಾಳೆಬೈಲು ಇತರರು ಇದ್ದರು.