- ಸ್ಥಳಿಯರಿಂದ ಧರ್ಮದೇಟು: ಪೊಲೀಸರ ರಕ್ಷಣೆ
- ಆನೇಕಲ್ ಬಳಿ ನಡೆದ ಘಟನೆ: ಊಟಕ್ಕಾಗಿ ವೇಷ
- ದೇಶದ ನಿರುದ್ಯೋಗ ಸಮಸ್ಯೆ ಅನಾವರಣ…!
NAMMUR EXPRESS NEWS
ಆನೇಕಲ್: ಆತ ಅಲ್ಪ ಸ್ವಲ್ಪ ಓದಿದ್ದ.. ಬಾಗಲಕೋಟೆಯಿಂದ ರೈಲು ಹತ್ತಿ ಬೆಂಗಳೂರಲ್ಲಿ ಕೆಲಸ ಹುಡುಕಿ ಬಂದಿದ್ದ.. ಆದರೆ ರಾಜಧಾನಿಯಲ್ಲಿ ಎಷ್ಟು ಅಲೆದಾಟ ನಡೆಸಿದರೂ ಕೆಲಸ ಸಿಗಲಿಲ್ಲ. ಹೊಟ್ಟೆಪಾಡಿಗೆ ದಾರಿ ಕಾಣದೆ ಕೊನೆಗೆ ಆನೇಕಲ್ ಬಳಿ ಸೀರೆ ಉಟ್ಟು ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ. ಈತನ ಮುಖವಾಡ ಯಾರಿಗೋ ಗೊತ್ತಾಗಿದೆ.
ಹೀಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಸೀರೆಯುಟ್ಟ ಯುವಕನನ್ನು ನೋಡಿ ಹಿಡಿದು ಕಟ್ಟಿಹಾಕಿದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ ಆರ್ ಆರ್ ಬಡಾವಣೆಯ ನಿವಾಸಿಗಳು ಆತನಿಗೆ ಧರ್ಮದೇಟು ನೀಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ರಕ್ಷಣೆ ಮಾಡಿದ್ದಾರೆ. ಆತ ಪೊಲೀಸರ ಬಳಿಯೂ ಊಟಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದಿದ್ದಾನೆ.
ಏನಿದು ಘಟನೆ?: ಬಾಗಲಕೋಟೆ ಮೂಲದ ಯುವಕ ಸೀರೆ ಕುಪ್ಪಸ ತೊಟ್ಟು ಮಂಗಳವಾರ ರಾತ್ರಿ ಬಡಾವಣೆ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ. ಯುವಕನ ಹಾವಭಾವ ನೋಡಿ ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪ್ರಶ್ನಿಸಲು ಹೋದಾಗ ಪರಾರಿಯಾಗಲು ಯತ್ನಿಸಿದ. ಬಳಿಕ ಸ್ಥಳೀಯರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಯುವಕನ ಬಗ್ಗೆ ಆನೇಕಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮೊದಲ ಅಧ್ಯತೆ ಆಗಲಿ..!
ಬೆಂಗಳೂರಿಗೆ ಕೆಲಸ ಅರಸಿ ಕೆಲದಿನಗಳ ಹಿಂದೆ ಬಾಗಲಕೋಟೆಯಿಂದ ಬಂದಿದ್ದೆ. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದು ಕೆಲದಿನಗಳಿಂದ ಕೆಲಸ ಇಲ್ಲದೆ ಅಲೆದಾಟ ನಡೆಸಿದೆ. ಎಲ್ಲಿಯೂ ಕೆಲಸ ಸಿಗದೆ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದೆ. ವಾಪಾಸ್ ಊರಿಗೆ ಹೋಗಲು ಆಗಲಿಲ್ಲ.. ಇಲ್ಲಿ ಕೆಲಸ ಸಿಗಲೂ ಇಲ್ಲ ಎಂದಿದ್ದಾನೆ.