ಉಡುಪಿ: ನ.28ಕ್ಕೆ ಸಾಸ್ತಾನದಲ್ಲಿ ಮರಣ ಡೋಲು ಭಾರಿಸಿ ಹೋರಾಟ!
– ಸಾಲಿಗ್ರಾಮದಲ್ಲಿ ಹೆದ್ದಾರಿ ಅಸಮರ್ಪಕ ನಿರ್ವಹಣೆ ವಿರುದ್ಧ ಪ್ರತಿಭಟನೆ
– ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನದ ಆಯೋಜನೆ
– ಅವಾಂತರ ನೋಡಿಯೂ ಸತ್ತಂತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು?
NAMMUR EXPRESS NEWS
ಉಡುಪಿ: ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನ ಇವರ ನೇತೃತ್ವದಲ್ಲಿ ನ. 28, ಗುರುವಾರ, ಬೆಳಗ್ಗೆ 9.30ರಿಂದ (ಅನಿರ್ದಿಷ್ಟಾವಧಿ)ಸಾಲಿಗ್ರಾಮ ಚಿತ್ರಪಾಡಿ ಮಾರಿಗುಡಿ ಬಳಿ ಕೆ.ಕೆ.ಆರ್ ಕಂಪೆನಿಯ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ನಿರ್ವಹಣೆ ವಿರುದ್ಧ ‘ಬೃಹತ್ ಪ್ರತಿಭಟನೆ’ ಆಯೋಜಿಸಲಾಗಿದೆ. ಹೆದ್ದಾರಿಯಲ್ಲಿ ಮರಣ ಗುಂಡಿಗಳು, ಸ್ಥಳೀಯ ಶಾಲೆ ಮತ್ತು ಖಾಸಗಿ ಸಂಸ್ಥೆ ವಾಹನಗಳಿಗೆ ಶುಲ್ಕ, ಪಾದಾಚಾರಿ ಮಾರ್ಗದಲ್ಲಿ ಇಂಗು ಗುಂಡಿಗಳು ದಾರಿದೀಪ ನಿರ್ವಹಣೆಯಲ್ಲಿ, ಚರಂಡಿಗಳ ನಿರ್ಮಾಣದಲ್ಲಿ ವಿಫಲತೆ, ಟೋಲ್ನಲ್ಲಿ ಭಾರಿ ಗಾತ್ರದ ಟ್ರಕ್ಗಳ ನಿಲುಗಡೆ, ಪುನರ್ ನಿರ್ಮಿಸದ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳು, ಹೆದ್ದಾರಿ ಪಕ್ಕ ಬೆಳೆದ ಹುಲ್ಲು ಪೊದೆಗಳು, ಟೋಲ್ ಸಂಗ್ರಹ ವಿರುದ್ಧ ಹೋರಾಟಕ್ಕೆ ಸ್ಥಳೀಯರು ಸಜ್ಜಾಗಿದ್ದಾರೆ. ಸರ್ವಿಸ್ ರಸ್ತೆ ನಿರ್ಮಿಸದೆ ಜನರಿಗೆ ತೊಂದರೆ ಆಗಿದೆ. ಅವಾಂತರ ನೋಡಿಯೂ ಸತ್ತಂತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಮತ್ತು ಜನರ ಸಮಸ್ಯೆಗಳಿಗೆ ಉಡಾಫೆ, ಉದ್ಧಟತನ ತೋರುತ್ತಿರುವ ಕೆ.ಕೆ.ಆರ್ ಕಂಪೆನಿ ವಿರುದ್ಧ ಮರಣ ಡೋಲು ಭಾರಿಸುವ ಮೂಲಕ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ನಮ್ಮ ಹಕ್ಕಿಗಾಗಿ, ಸಹಸ್ರ ಸಂಖ್ಯೆಯಲ್ಲಿ ಸೇರೋಣ ಎಂದು ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನ ವಿನಂತಿಸಿಕೊಳ್ಳಲಾಗಿದೆ.