ತೀರ್ಥಹಳ್ಳಿಯಲ್ಲಿ ನ.29ಕ್ಕೆ ಶ್ರೀಹರಿ ಲೀಲಾಮೃತ ಯಕ್ಷಗಾನ
– ರಾಜಕೀಯ ಹೊರತುಪಡಿಸಿ ಸಾಂಸ್ಕೃತಿಕ, ಧಾರ್ಮಿಕ, ವಿಶೇಷ ಕಾರ್ಯಕ್ರಮಗಳಿಗೆ ಒತ್ತು
– ತೀರ್ಥಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ನ. 29ಕ್ಕೆ ಸಂಜೆ 6ಕ್ಕೆ ಸಂಸ್ಕೃತಿ ಮಂದಿರ ಅವರಣದಲ್ಲಿ ತೀರ್ಥಹಳ್ಳಿಯಲ್ಲಿ ಕಾಲಮಿತಿ ಯಕ್ಷಗಾನ ಶ್ರೀಹರಿ ಲೀಲಾಮೃತ ಅದ್ದೂರಿ ಯಕ್ಷಗಾನ ಬಯಲಾಟ ನಡೆಯಲಿದೆ.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು ಡಾ.ಆರ್ ಎಂ ಮಂಜುನಾಥ ಗೌಡ ಅವರು ನಿವಾಸದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಹರಿ ಲೀಲಾಮೃತ ಯಕ್ಷಗಾನವನ್ನು ಆಯೋಜಿಸಲಾಗಿದೆ ಹಾಗೂ ಇದರ ಸಂಪೂರ್ಣ ಅಧ್ಯಕ್ಷತೆ ಮತ್ತು ಸಂಚಾಲಕರು ಮಧುಸೂದನ್ ಅವರು ಎಂದು ತಿಳಿಸಿದರು.
ರಾಜಕೀಯ ಬಿಟ್ಟು ಕಲಾ ಸೇವೆ ಮಾಡೋಣ
ಇದೊಂದು ಅಪರೂಪದ ಕಾರ್ಯಕ್ರಮ. ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ ಎಂದರೆ ದೃವತಾರೆ ಇದ್ದಂತೆ ಈ ಯಕ್ಷಗಾನ ಬಯಲಾಟ 6 ಗಂಟೆಗೆ ಪ್ರಾರಂಭವಾಗಿ 10 ಗಂಟೆಯ ವೇಳೆಗೆ ಮುಕ್ತಾಯಾವಾಗಲಿದೆ. ದಶಾವತಾರದಲ್ಲಿ ಒಂದು ಅವತಾರ ವರಹಾವತಾರ ಈ ಮೂಲಕ ವಿಶೇಷವಾದ ಯಕ್ಷಗಾನ ಕಲೆಯನ್ನು ಜನರ ಮುಂದೆ ಪ್ರಸ್ತುತ ಮಾಡುವ ಕಾರ್ಯಕ್ರಮ ಇದಾಗಿದ್ದು, ರಾಜಕೀಯವನ್ನು ಹೊರತುಪಡಿಸಿ ಸಾಂಸ್ಕೃತಿಕ, ಧಾರ್ಮಿಕ, ವಿಶೇಷ ಸಾಹಿತ್ಯವಾಗಿಯೂ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.
ಇದೊಂದು ವಿಶೇಷವಾದ ಅನುಭವ. ಜೀವನದಲ್ಲಿ ಬರೀ ರಾಜಕೀಯಗಳ ಮಧ್ಯೆ, ನಮ್ಮಲ್ಲಿರುವ ಸಾಂಸ್ಕೃತಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಹಾಗೂ ಜನರನ್ನು ಈ ಮೂಲಕ ಬೆಸೆಯುವ ಕಾರ್ಯವು ಇದಾಗಿದೆ. ಎಲ್ಲರೂ ಆಗಮಿಸಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಇದೊಂದು ರಾಜಕೀಯ ಹೊರತುಪಡಿಸಿ ಪೂರ್ತಿ ಸಾಂಸ್ಕೃತಿಕ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ತೀರ್ಥಹಳ್ಳಿಯ ಎಲ್ಲಾ ಯಕ್ಷಗಾನ ಅಭಿಮಾನಿಗಳು ಆಸಕ್ತರು ಜೊತೆಗೆ ಯುವಕರು ಭಾಗವಹಿಸಿ ಈ ಮಣ್ಣಲ್ಲಿ ಏನೋ ವಿಶೇಷತೆ ಇದೆ ಎಂಬುದನ್ನು ತೋರಿಸಬೇಕು ಎಂದು ಈ ಮೂಲಕ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ ಎಂದು ಹೇಳಿದ್ದಾರೆ
ಯಕ್ಷಗಾನದಲ್ಲಿ ಸದಾ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆ
ಕಾರ್ಯಕ್ರಮದಲ್ಲಿ ಯಕ್ಷಗಾನದಲ್ಲಿ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಗುತ್ತದೆ. ಪಟ್ಲ ಸತೀಶ್ ಶೆಟ್ಟಿ, ಎಂ.ಕೆ. ರಮೇಶ್ ಆಚಾರ್ಯ,ಕುಕ್ಕೊಡ್ತಿ ಕೃಷ್ಣಮೂರ್ತಿ, ಮಂಜುನಾಥಗೌಡ, ಗುಡ್ಡಕೇರಿ ಮೂರ್ತಿ ಗೌಡ, ಮತ್ತು ಸಹ್ಯಾದ್ರಿ ಗಣಪತಿ, ನಿರ್ದೇಶಕರು ಕಾಳಿಂಗ ಫೌಂಡೇಶನ್ ಗುಡ್ಡಕೇರಿ ಹಾಗೂ ಕಾಳಿಂಗ ಸರ್ಪದ ಬಗ್ಗೆ ಅಧ್ಯಯನಕಾರ ಡಾ. ಪಿ,ಗೌರಿಶಂಕರ್,ಇವರುಗಳಿಗೆ ಗೌರವ ಸಮರ್ಪಣ ಸಭಾ ಕಾರ್ಯಕ್ರಮವಿರುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆ ಹೇಗಿದೆ?
• ದೊಂದಿಯ ಬೆಳಕಿನಲ್ಲಿ ಸಭೆಯ ಮಧ್ಯದಿಂದ ಆಕರ್ಷಕ ರಂಗ ಪ್ರವೇಶದ ಹಲವು ಅದ್ಭುತ ಪಾತ್ರಗಳಿರುವ ಅಪರೂಪದ ಪೌರಾಣಿಕ ಪ್ರಸಂಗ
• ಅಸುರ ಹಿರಣ್ಯಾಕ್ಷನ ಸಂಹಾರಕ್ಕೆ ಶ್ರೀಹರಿಯ ಸಿಡಿಲಬ್ಬರದ ವರಾಹಾವತಾರ
• ಆರ್ಭಟದ ತೆಂಕಿನ ಗಜೇಂದ್ರ ಮತ್ತು ಮಕರಿಯ ಅಬ್ಬರದ ರಂಗ ಪ್ರವೇಶ ಹಾಗೂ ಗರುಡನ ಆಕರ್ಷಕ ವೇಷ ಭೂಷಣ
* ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಪ್ರಧಾನ ಭಾಗವತಿಕೆಯ ಇಂಪಿನೊಂದಿಗೆ, ಅಬ್ಬರದ ಚಂಡೆ ಮನಸೆಳೆಯುವ ಮದ್ದಳೆಯ ಅಪೂರ್ವ ಹಿಮ್ಮೇಳದ ಸಂಗಮ.
•ತೆಂಕಿನ ಪ್ರಖ್ಯಾತ ಕಲಾವಿದರ ಭರ್ಜರಿ ಮುಮ್ಮೇಳ, ಮೋಹಕ ಸ್ತ್ರೀವೇಷ, ನಕ್ಕು ನಲಿಸುವ ವಿದೂಷಕರು, ಗತ್ತು ಗಾಂಭೀರ್ಯದ ರಾಜವೇಷ,
* ಕಣ್ಮನ ತಣಿಸುವ ಕುಣಿತ, ಹುಬ್ಬೇರಿಸುವ ಗಿರ್ಕಿ ಇತ್ಯಾದಿಗಳನ್ನೊಳಗೊಂಡ ಅಪರೂಪದ ಕಥಾನಕ.
ಪತ್ರಿಕಾಗೋಷ್ಠಿಯಲ್ಲಿ ಗಣ್ಯರ ದಂಡು
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಕೆಸ್ತೂರು ಮಂಜುನಾಥ್, ಮಾಜಿ ಜಿಲ್ಲಾ ಪರಿಷತ್ ಸದಸ್ಯರು ಹಾರೋಗಳಿಗೆ ಪದ್ಮನಾಭ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಜೀನಾ ವಿಕ್ಟರ್, ,ಜಿಲ್ಲಾ ಪರಿಷತ್ ಮಾಜಿ ಸದಸ್ಯ ಡಾ. ಸುಂದ್ರೇಶ್, ಪ. ಪಂಚಾಯತ್ ಉಪಾಧ್ಯಕ್ಷರು ಗೀತಾ ರಮೇಶ್, ಸದಸ್ಯರಾದ ಶಬನಮ್, ರತ್ನಾಕರ್ ಶೆಟ್ಟಿ ( ದತ್ತಣ್ಣ ), ವಿಲಿಯಮ್ ಮಾರ್ಟಿಸ್, ರಾಘವೇಂದ್ರ ಶೆಟ್ಟಿ, ಈಡಿಗ ಸಮಾಜದ ಅಧ್ಯಕ್ಷರಾದ ರಾಮಚಂದ್ರ ಮಟ್ಟಿನ ಮನೆ, ಕಿರಣ್ ಕಟ್ಟೆಹಕ್ಲು, ಸಚಿನ್ ಗರ್ತಿಕೆರೆ, ಶ್ರೀಕಾಂತ್, ನಾಗರಾಜ್ ಕುರುವಳ್ಳಿ, ಕಾರ್ತಿಕ್ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.