ವಾಹನ ಸವಾರರಿಗೆ ಗುಡ್ ನ್ಯೂಸ್
– HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ
– ಡಿಸೆಂಬರ್ 31 ರವರೆಗೂ ಅವಕಾಶ ಕಲ್ಪಿಸಿದ ರಾಜ್ಯ ಸರಕಾರ
NAMMUR EXPRESS NEWS
ಬೆಂಗಳೂರು : ಹಳೆಯ ನಂಬರ್ ಪ್ಲೇಟ್ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಕರ್ನಾಟಕ ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡಿದೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ಸರ್ಕಾರ ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಡಿಸೆಂಬರ್ 31ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಿಸಿದೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 30 ಕೊನೆ ದಿನಾಂಕವಾಗಿತ್ತು. ಇದೀಗ ಸಾರಿಗೆ ಇಲಾಖೆ ಈ ವರ್ಷದ ಕೊನೆಯ (ಡಿಸೆಂಬರ್ 31) ದಿನದ ವರೆಗೆ ಗಡುವು ನೀಡಿದೆ. ದ್ವಿಚಕ್ರ ವಾಹನಗಳು, ಆಟೋ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ರಾಜ್ಯದ ಎಲ್ಲಾ ವಾಹನಗಳಿಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಗೊಳಿಸಲಾಗಿದೆ. ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯಾವಾಗಿ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಕರ್ನಾಟಕದಲ್ಲಿರುವ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳು, ಕೇವಲ 55 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಹೀಗಾಗಿ 01-04-2019 ರ ಹಿಂದಿನ ಎಲ್ಲಾ ವಾಹನಗಳು ಡಿಸೆಂಬರ್ 31ರೊಳಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಈ ಮೂಲಕ ಐದನೇ ಬಾರಿಗೆ ಗಡವು ವಿಸ್ತರಿಸಿದೆ.