ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಜೆ ಘೋಷಣೆ
– ಪೆಂಗಲ್ ಚಂಡಮಾರುತ ಹಿನ್ನೆಲೆ: ಜಿಲ್ಲಾಧಿಕಾರಿಗಳ ಘೋಷಣೆ
– ಎಲ್ಲಾ ತಾಲೂಕಿನ ಶಾಲೆ, ಕಾಲೇಜಿಗೆ ರಜೆ
NAMMUR EXPRESS NEWS
ಚಿಕ್ಕಮಗಳೂರು: ಪೆಂಗಲ್ ಚಂಡಮಾರುತ ಹಿನ್ನೆಲೆ ಕಾಫಿನಾಡಲ್ಲಿ ಭಾರೀ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 03:12:2024 ರ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.