ಕರಾವಳಿ ಟಾಪ್ ನ್ಯೂಸ್
– ಉಪ್ಪಿನಂಗಡಿ: ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ!
– ಮಂಗಳೂರು: ಜೈಲಿನೊಳಗೆ ನಿಷೇಧಿತ ವಸ್ತು ಪತ್ತೆ, ಅಧೀಕ್ಷಕ ಅಮಾನತು!
– ಕದ್ರಿ ದೇವಾಲಯ ಅರ್ಚಕ ಅಮಾನತು,ಪೋಕ್ಸೋ ಪ್ರಕರಣ ದಾಖಲು
NAMMUR EXPRESS NEWS
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿಯ ಗ್ರಾಮ ಪಂಚಾಯತ್ ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕನೋರ್ವನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಡಿ. 4ರಂದು ಬೆಳಕಿಗೆ ಬಂದಿದೆ.
ಕೆಲವು ಸಮಯಗಳ ಹಿಂದೆ ಸ್ಥಳೀಯ ಬಾರ್ ಆ್ಯಂಡ್ ರೆಸ್ಟೋರೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾದ ಹಾಗೂ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯ ದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ದೀಪಕ್ ಬೆಂಗರ (34) ಕೊಲೆಗೀಡಾದವರು. ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಲೆಯ ಭಾಗವನ್ನು ಕಲ್ಲಿನಂತಹ ಭಾರವಾದ ವಸ್ತುವಿನ ಸಹಾಯದಿಂದ ಜಜ್ಜಿ ಕೊಲೆಗೈದಂತೆ ಕಂಡುಬಂದಿದೆ. ದೇಹದಲ್ಲಿ ಟೀ ಶರ್ಟ್ ಮಾತ್ರ ಇತ್ತು.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
* ಮಂಗಳೂರು: ಜೈಲಿನೊಳಗೆ ನಿಷೇಧಿತ ವಸ್ತು ಪತ್ತೆ, ಅಧೀಕ್ಷಕ ಅಮಾನತು!
ಮಂಗಳೂರು: ಕರ್ತವ್ಯ ಲೋಪವೆಸಗಿದ ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮುಂದಿನ ಆದೇಶದ ತನಕ ಅಮಾನತುಗೊಳಿಸಿ ಡಿ. 4 ರಂದು ಆದೇಶ ಹೊರಡಿಸಲಾಗಿದೆ.ಇತ್ತೀಚೆಗೆ ಪೊಲೀಸರು ಕಾರಾಗೃಹಕ್ಕೆ ದಾಳಿ ನಡೆಸಿದಾಗ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧಿಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅ ಧೀಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ತಿಳಿಸಿದ್ದಾರೆ.
* ಕದ್ರಿ ದೇವಾಲಯ ಅರ್ಚಕ ಅಮಾನತು,ಪೋಕ್ಸೋ ಪ್ರಕರಣ ದಾಖಲು!
ಮಂಗಳೂರು: ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಗಣಪತಿ ಗುಡಿಯ ಅರ್ಚಕ ಶಂಕರ ಅಲೆವೂರಾಯನನ್ನು ಅಮಾನತು ಗೊಳಿಸಲಾಗಿದೆ. ಈತ 2021ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಇತ್ತೀಚೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಹಿನ್ನೆಲೆಯಲ್ಲಿಅಮಾನತು ಮಾಡಲಾಗಿದೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿಯವರು ತಿಳಿಸಿದ್ದಾರೆ.