ಕಾರ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಹಳೆ..!
– ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಟ್ಟಲು ಕಂಕಣ
– ಕನ್ನಡ ಸೇವೆ, ಸಮಾಜ ಸೇವಕರಿಗೆ ಸನ್ಮಾನದ ಗೌರವ
– ಪುಸ್ತಕ ಬಿಡುಗಡೆ: ಕಾರ್ಯಕ್ರಮದ ವಿಶೇಷ ವರದಿ ಇಲ್ಲಿದೆ ನೋಡಿ…
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಕಾರ್ಕಳ
ಕಾರ್ಕಳ: ಜನಪದರ ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ, ಸಾಹಿತ್ಯದ ಆಶಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಮುಂದಿನ ಪೀಳಿಗೆಗೆ ಕಟ್ಟಿ ಕೊಡುವುದಾಗಿದೆ ಎಂದು ಜನಪದ ವಿದ್ವಾಂಸ ಕೆ.ಗುಣಪಾಲ ಕಡಂಬ ಹೇಳಿದರು.
ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆದ ಇಪ್ಪತ್ತನೆಯ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಕರ, ಜನಪದರ ಬದುಕು ಹಸನಾಗಬೇಕು. ನಲಿವಿನ ಸಾಹಿತ್ಯ ಅವರಿಂದ ಹೊರಹೊಮ್ಮಬೇಕು ಹಾಗೇ ಆಗಬೇಕಾದರೆ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎಂದರು. ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಸಾಹಿತ್ಯ ಬದುಕಿನ ಬುತ್ತಿ ಕಟ್ಟಿ ಕೊಡುತ್ತದೆ. ವಿದ್ಯಾರ್ಥಿಗಳೆ ಸಾಹಿತ್ಯದ ಬದುಕನ್ನು ಪಾವನವಾಗಿಸಿ ಎಂದರು. ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನಗನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ ಅವರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, , ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ, , ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ. ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್,ಶಾಲ ಮುಖ್ಯ ಶಿಕ್ಷಕ ನರಸಿಂಹ ನಾಯಕ್, ಪ್ರಾಂಶುಪಾಲ ಬೇಬಿ ಈಶ್ವರ ಮಂಗಲ ,ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ , ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಶಾಂತಿ ರಾಜ್ ಜೈನ್ , ಶಿರ್ಲಾಲು ಗ್ರಾ.ಪಂ ಅಧ್ಯಕ್ಷ ಶೋಭ, ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್, ಕಂಬಳ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಮುನಿರಾಜ್ ರೆಂಜಾಳ ಉಪಸ್ಥಿತರಿದ್ದರು .
ಪುಸ್ತಕ ಬಿಡುಗಡೆ: ಸಾಧಕರಿಗೆ ಸನ್ಮಾನ
ಆರ್. ರಮೇಶ್ ಪ್ರಭು ಬರೆದ ‘ಹೊಂಗನಸು’, ಎಚ್ ವಿಧಾತ್ರಿ ರವಿಶಂಕರ್ ಅವರ ‘ನಕ್ಷತ್ರ ಪಟಲ’ , ಶೈಲಜಾ ಹೆಗ್ಡೆ ಬರೆದ ‘ಭಾವ ಲಹರಿ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ವಿನಾಯಕ ನಾಯ್ಕಕಂಬಳ ಓಟಗಾರ ಶ್ರೀನಿವಾಸ ಗೌಡ ,ಕಂಬಳ ಕೋಣಗಳ ಯಜಮಾನ ಶ್ರೀಕಾಂತ್ ಭಟ್ ನಂದಳಿಕೆ ಮಿಜಾರು ಶಕ್ತಿಪ್ರಸಾದ್ ಶೆಟ್ಟಿ ,ವರ್ಣಚಿತ್ರ ಕಲಾವಿದ ಗಂಜೀಫಾ ರಘುಪತಿ ಭಟ್ , ೧೦ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವಿನಮ್ರ ಆಚಾರ್ಯ , ಕರುನಾಡ ಸಿರಿ ಪ್ರಶಸ್ತಿ ವಿಜೇತ ಕನ್ನಡ ಶಾಲೆ ಕಲ್ಯಾಸ.ಪ್ರ.ಶಾಲೆ ಮುಖ್ಯ ಶಿಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ರಂಗು
ಕನ್ನಡ ಸಾಹಿತ್ಯ ಅಭಿರುಚಿ ಶ್ರೀಮಂತವಾಗಿರುತ್ತದೆಯೋ ಅಲ್ಲಿ ಭಾರತೀಯ ಸಂಸ್ಕೃತಿ ಅಡಗಿರುತ್ತದೆ ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧದೆ. ಒಂದನ್ನೊಂದು ಬಿಟ್ಟು ಇರಲು ಸಾಧ್ಯವಿಲ್ಲ ಎಂದರು. ಶಿರ್ಲಾಲು ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ,ಸಮ್ಮೇಳನಾಧ್ಯಕ್ಷ ಕೆ. ಗುಣಪಾಲ ಕಡಂಬ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ,
, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಬಜಗೋಳಿ , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್,ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ, ಕ್ರಿಯೇಟಿವ್ ಕಾಲೇಜ್ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್. ಎಂ ಸಿ ಎಫ್ ನ ಕೀರ್ತನ್ ಕುಮಾರ್ , ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ , ಶಾಂತಿ ರಾಜ್ ಜೈನ್ ಉಪಸ್ಥಿತರಿದ್ದರು.
ಎಲ್ಲಾ ಕ್ಷೇತ್ರದ ಸಾಧಕರಿಗೆ ಗೌರವ
ವೈಜ್ಞಾನಿಕ/ಬಾಹ್ಯಾಕಾಶ – ಜನಾರ್ದನ ಇಡ್ಯಾ , ಕೃಷಿ-ಧರಣೇಂದ್ರ ಜೈನ್ ಶಿರ್ಲಾಲು, ಜಾನಪದ ಕ್ಷೇತ್ರ-ಸುಶೀಲ ಪಾಣಾರ, ಶಿರ್ಲಾಲು, ನಾಟಿವೈದ್ಯ ವಿಠಲ ಶೆಟ್ಟಿ, ಶಿರ್ಲಾಲು, ಸಂಕೀರ್ಣ – ಸಿಲ್ವೆಸ್ಟರ್ ಡಿಮೆಲ್ಲೊ , ಸಂಘಟನೆ- ಸಮದ್ ಖಾನ್ , ಪತ್ರಿಕಾ ರಂಗ- ಮೊಹಮ್ಮದ್ ಶರೀಫ್, ಸಾಹಿತ್ಯ ರೇಷ್ಮಾ ಗೊರೂರು, ಸಮಾಜಸೇವೆ ಅವಿನಾಶ್ ಜಿ. ಶೆಟ್ಟಿ,ಸಾಹಿತ್ಯ ಸೇವೆಗಾಗಿ ಕ್ರಿಯೇಟಿವ್ ಪುಸ್ತಕ ಮನೆಯ ಅಶ್ವಥ್ ಎಸ್ ಎಲ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಅರುಣ್ ಕುಮಾರ್ ಸ್ವಾಗತಿಸಿದರು. ಸುಧಾಕರ ಪೊಸ್ರಾಲ್ ಧನ್ಯವಾದವಿತ್ತರು
ಅದ್ದೂರಿ ಕಲಾ ತಂಡಗಳ ಮೆರವಣಿಗೆ
ಶಿರ್ಲಾಲು ಭಗವಾನ್ ಅನಂತನಾಥ ಸ್ವಾಮಿ ಬಸದಿಯಲ್ಲಿ ಕರ್ನಾಟಕ ಬ್ಯಾಂಕ್ ಶಿರ್ಲಾಲು ಇದರ ಶಾಖಾ ಪ್ರಬಂಧಕ ಉದಯ ಶಂಕರ್ ಸಮ್ಮೇಳನದ ಪುರಮೆರವಣಿಗೆಗೆ ಚಾಲನೆ ನೀಡಿದರು. ಹುಲಿಕುಣಿತ, ಮಕ್ಕಳ ಬ್ಯಾಂಡ್ ಸೆಟ್, ಕೇರಳ ಚಂಡೆ, ತಟ್ಟಿರಾಯಗಳು, ಕೀಲುಕುದುರೆ, ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆ ಗಮನ ಸೆಳೆಯಿತು. ನಂದಳಿಕೆ ಶ್ರೀಕಾಂತ್ ಭಟ್ ಅವರ ಪಾಂಡು ಕೋಣವನ್ನು ವಿಶೇಷ ಅಲಂಕಾರಗೊಳಿಸಿ ಸನ್ಮಾನಿಸಲಾಯಿತು.