ಶೃಂಗೇರಿಯಲ್ಲಿ ಜಿಲ್ಲಾ ಕನ್ನಡ ಜಾನಪದ ಸಾಹಿತ್ಯ ಸಮ್ಮೇಳನ
– ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ: ಜನವರಿಯಲ್ಲಿ ಸಮ್ಮೇಳನ
– ಸದಸ್ಯರಿಂದ ಸಲಹೆ ಸೂಚನೆ, ಹಲವು ವಿಷಯ ಚರ್ಚೆ
NAMMUR EXPRESS NEWS
ಶೃಂಗೇರಿ: ಕನ್ನಡ ಜಾನಪದ ಪರಿಷತ್ನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಶೃಂಗೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಓಟಿತೋಟ ರತ್ನಾಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶೃಂಗೇರಿ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ ಸೇರಿದಂತೆ ತಾಲೂಕಿನ ಪರಿಷತ್ನ ಎಲ್ಲಾ ಪದಾಧಿಕಾರಿಗಳು,ಪ್ರಮುಖರು ಉಪಸ್ಥಿತರಿದ್ದರು. ಈ ಬಾರಿಯ ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಮ್ಮೇಳನವನ್ನು 2025 ರ ಜನವರಿಯಲ್ಲಿ ಶೃಂಗೇರಿಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಥಾಮಿಕ ಶಾಲೆ,ಮೆಣಸೆ ಇಲ್ಲಿ ನಡೆಸಲು ತೀರ್ಮಾನಿಲಾಯಿತು, ಇದರಂತೆ ಸೇರಿದ್ದ ಪದಾಧಿಕಾರಿಗಳಿಂದ ಅನೇಕ ಸಲಹೆ,ಸೂಚನೆಗಳನ್ನು ಪಡೆಯಲಾಗಿ ಚರ್ಚಿಸಲಾಯಿತು. ಅದ್ದೂರಿಯಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಸಮ್ಮೇಳನವನ್ನು ನಡೆಸಲು ಜಿಲ್ಲಾಧ್ಯಕ್ಷ ಓಟಿತೋಟ ರತ್ನಕಾರ್ರವರು ತಿಳಿಸಿ ವ್ಯವಸ್ಥಿತವಾಗಿ ನಡೆಸಲು ಸಲಹೆ ಸೂಚನೆಗಳನ್ನು ನೀಡಿದರು. ಮುಂದಿನ ಸಭೆಯಲ್ಲಿ ಸಮ್ಮೇಳನದ ದಿನಾಂಕ,ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ತಿಳಿಸಲಾಗುವುದು ಎಂದು ತಿಳಿಸಿದರು.