- ದೂರವಾಣಿ ಭತ್ಯೆ 20 ಸಾವಿರ ರೂ.: ಎಷ್ಟೆಷ್ಟು ಹಣ
- ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ ಸಾರ್..!
NAMMUR EXPRESS NEWS
ಬೆಂಗಳೂರು: ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಗೊಂಡಿದ್ದು, ಇದೇ ಏಪ್ರಿಲ್ ನಿಂದ ಮಾಸಿಕ ವೇತನ 2,05,000 ರೂ.ಗೆ ಎರಿಕೆ ಆಗಿದೆ. ಅದರಲ್ಲಿ ದೂರವಾಣಿ ಭತ್ಯೆ 20 ಸಾವಿರ ರೂ. ನೀಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಂತೆಯೇ, ಅಂಚೆ ವೆಚ್ಚ ತಿಂಗಳಿಗೆ 5 ಸಾವಿರ ರೂ. ನೀಡಲಾ ಗುತ್ತಿರುವುದೂ ಚರ್ಚೆಗೆ ಗ್ರಾಸವಾಗಿದೆ.
ಶಾಸಕರಿಗೆ ಮೂಲ ವೇತನ 40 ಸಾವಿರ ರೂ.. ಕ್ಷೇತ್ರ ಭತ್ಯೆಯಾಗಿ 60 ಸಾವಿರ ರೂ., ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆಯಾಗಿ 50 ಸಾವಿರ ರೂ. ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ಭತ್ಯೆ ಯಾಗಿ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ದೂರವಾಣಿ ವೆಚ್ಚ 20 ಸಾವಿರ ರೂ. ಇದೆ.
ಶಾಸಕರಿಗೆ ಯಾವ ಭತ್ಯೆ ಎಷ್ಟು?
ಏಪ್ರಿಲ್-2022 ರಿಂದ ಜಾರಿಗೆ ಬರುವಂತೆ ಮಾಹೆಯಾನ ಪಾವತಿಸಲಾಗುತ್ತಿರುವ ವೇತನ/ಭತ್ಯೆಗಳ ವಿವರವು ಈ ಕೆಳಕಂಡಂತಿವೆ. ಮಾನ್ಯ ಶಾಸಕರುಗಳಿಗೆ ಮಾಹೆಯಾನ ಪಾವತಿಸಲಾಗುವ ವೇತನ/ಭತ್ಯೆಗಳ ವಿವರ.
ವಿವರ – ಮೊತ್ತ
ವೇತನ – ರೂ 40,000/-
ಕ್ಷೇತ್ರ ಭತ್ಯೆ – ರೂ.60,000/-
ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆ – ರೂ.60,000
ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ವೇತನ – ರೂ.20,000
ಅಂಚೆ ವೆಚ್ಚ – ರೂ.5,000/-
ದೂರವಾಣಿ ವೆಚ್ಚ – ರೂ.20,000/-
ಒಟ್ಟು ಮೊತ್ತ – ರೂ.2,05,000/-
ಮೇಲ್ಮನೆಗೆ ನಾಮಪತ್ರ ಸಲ್ಲಿಕೆ ಶುರು
ವಿಧಾನಸಭೆಯಿಂದ ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ನಡೆಯುವ ದೈವಾರ್ಷಿಕ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಯಾವುದೇ ನಾಮಪತ್ರ ಮೊದಲದಿನ ಸಲ್ಲಿಕೆಯಾಗಿಲ್ಲ. ಮೇ 24ರವರೆಗೂ ಅವಕಾಶವಿದ್ದು, ಜೂನ್ 3ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪಕ್ರಿಯೆ ಆರಂಭವಾಗಿದೆಯಾದರೂ ರಾಜಕೀಯ ಪಕ್ಷಗಳು ತಂತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭಿಸಿವೆ. ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನ ಗೆಲ್ಲಬಹುದಾಗಿದೆ. ಮೇ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆಯಲು ಮೇ 27 ಕೊನೆಯ ದಿನವಾಗಿದೆ.