ನೆನಪಿನ ಪುಟಕ್ಕೆ ಜಾರಿದ ನಾಯಕನ ಮದುವೆ ಪ್ರಿಂಟ್ ವೈರಲ್!
– ವೈರಲ್ ಆಗುತ್ತಿದೆ ಎಸ್ ಎಂ ಕೃಷ್ಣರವರ ಮದುವೆ ಆಮಂತ್ರಣ
– ಅಗಲಿದ ನಾಯಕನ ನೆನಪು ಮಾಡುತ್ತಿರುವ ಅಭಿಮಾನಿ ಬಳಗ
NAMMUR EXPRESS NEWS
ಬೆಂಗಳೂರು: ಮಾಜಿ ವಿದೇಶಾಂಗ ಸಚಿವ,ಕರ್ನಾಟಕದ ಮಾಜಿ ಸಿ.ಎಂ,ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು ಹೀಗೆ ಹತ್ತು ಹಲವು ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಮಂಡ್ಯದ, ಮಗ ಮಲೆನಾಡ ತೀರ್ಥಹಳ್ಳಿಯ ಅಳಿಯ ಎಸ್.ಎಂ ಕೃಷ್ಣರವರು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ನಾಯಕನ ಅಗಲಿಕೆಯಿಂದ ರಾಜ್ಯಾ,ದೇಶಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆಗೆ ರಾಜ್ಯ ಸರ್ಕಾರ ಸೂಚಿಸಿದ್ದು ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ. ಇಂದು ಅವರ ಅಂತ್ಯಕ್ರಿಯೆ ಆಗಲಿದೆ.
ಸ್ನೇಹಿತರು,ಅಭಿಮಾನಿಗಳಿಂದ ನಾಯಕನ ನೆನಪು., ಮದುವೆ ಆಮಂತ್ರಣ ವೈರಲ್..!
ಅಗಲಿದ ನಾಯಕನ,ಸ್ನೇಹಿತನೊಂದಿಗಿನ ಅಪರೂಪದ ಕ್ಷಣಗಳನ್ನು ನೆನೆಯುತ್ತಿರುವ ಅಭಿಮಾನಿಗಳು ಎಸ್ ಎಂ ಕೆ ಬರೆದ ಪತ್ರ,ಅವರ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಿಕೊಂಡು ಅಗಲಿದ ಸ್ನೇಹಿತನಿಗೆ ಶ್ರದ್ಧಾಂಜಲಿ ಕೋರುತ್ತಿದ್ದಾರೆ.
ಹೇಗಿದೆ ಎಸ್ ಎಂ ಕೆ ಮದುವೆ ಆಮಂತ್ರಣ ಪತ್ರಿಕೆ..!!?
ಸೋಮನಹಳ್ಳಿ ಶ್ರೀ ಎಸ್. ಸಿ. ಮಲ್ಲಯ್ಯನವರ ಕುಟುಂಬ ಮತ್ತು ಬಂಧು ವರ್ಗದವರು
ತಾ|| 29-4-1966 ನೇ ಶುಕ್ರವಾರ ಶಿವಮೊಗ್ಗ ರ್ಟೌ ನ್ಯಾಷನಲ್ ಹೈಸ್ಕೂಲಿನಲ್ಲಿ ನಡೆಯುವ ವಿವಾಹ
ಚಿರಂಜೀವಿ ಎಸ್. ಎಂ. ಕೃಷ್ಣ. [ ದಿವಂಗತ ಎಸ್. ಸಿ. ಮಲ್ಲಯ್ಯನವರ ಪುತ್ರ ]
ಮತ್ತ ಸೌಭಾಗ್ಯವತಿ ಪ್ರೇಮ. ( ತೀರ್ಥಹಳ್ಳಿ ತಾ|| ಕುಡುಮಲ್ಲಿಗೆಯ ಶ್ರೀ ಕೆ. ಆರ್. ಚನ್ನಪ್ಪಗೌಡರ ಪುತ್ರಿ) ಇವರುಗಳ ವಿವಾಹಕ್ಕೆ ತಾವು ದಯಮಾಡಿಸಿ ವಧೂವರರನ್ನು ಆಶೀತ್ವದಿಸಬೇಕಾಗಿ ಆಹ್ವಾನಿಸುತ್ತಾರೆ.
ಮುಹೂರ್ತ: ಬೆಳಿಗ್ಗೆ 8 ರಿಂದ 10
ಆರತಕ್ಷತೆ: ಸಂಜೆ 6 ರಿಂದ 8