ಜೆಸಿಐ ತೀರ್ಥಹಳ್ಳಿ ಪದವಿ ಪ್ರದಾನ ಸಮಾರಂಭ – 2025
– ಡಿ. 14ಕ್ಕೆ ಟಿ.ಎಸ್.ಟಿ ಕನ್ವೆನ್ಸನ್ ಹಾಲಲ್ಲಿ ಕಾರ್ಯಕ್ರಮ
– ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಪ್ರಮಾಣವಚನ
– ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ ಜೆಸಿಐ
NAMMUR EXPRESS NEWS
ತೀರ್ಥಹಳ್ಳಿ: ಜೆಸಿಐ ತೀರ್ಥಹಳ್ಳಿ ಪದವಿ ಪ್ರದಾನ ಸಮಾರಂಭ – 2025 ಡಿ.14 ಶನಿವಾರದಂದು ಟಿ.ಎಸ್.ಟಿ ಕನ್ವೆನ್ಸನ್ ಹಾಲ್ ಕುವೆಂಪು ಬಡಾವಣೆ – ಕೆ.ಸಿ.ರಸ್ತೆ, ತೀರ್ಥಹಳ್ಳಿಯಲ್ಲಿ ಸಂಜೆ 6-30ಕ್ಕೆ ನೆರವೇರಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಹರೀಶ್ ಸರ್ಜಾ ಅಧ್ಯಕ್ಷರು 2024, ಜೆಸಿಐ ತೀರ್ಥಹಳ್ಳಿ ಹಾಗೂ ಜೆಸಿ ಅರುಣ್ ಕುಮಾರ್ ಕೆ.ಸಿ.ನಿಯೋಜಿತ ಅಧ್ಯಕ್ಷರು 2025, ಜೆಸಿಐ ತೀರ್ಥಹಳ್ಳಿ, ಇವರು ವಹಿಸಲಿದ್ದಾರೆ. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಜೆಎಫ್ಪಿ ಡಾ. ಭೀಮೇಶ್ವರ ಜೋಷಿ, ಧರ್ಮದರ್ಶಿಗಳು,ಶ್ರೀ ಆದಿಶಸ್ತ್ರಾತ್ಯಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಹೊರನಾಡು ಪೂರ್ವ ಜೆಸಿ ರಾಜ್ಯ ಉಪಾಧ್ಯಕ್ಷರು, ಜೆಸಿಐ ತೀರ್ಥಹಳ್ಳಿಯ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನವನ್ನ ಜೆಸಿಐ ಸೆನೆಟರ್ ಸಿಎ. ಗೌರೀಶ್ ಭಾರ್ಗವ ಕೆ.ವಿ.ನಿಯೋಜಿತ ವಲಯ ಅಧ್ಯಕ್ಷರು 2025, ವಲಯ-24, ಜೆಸಿಐ ಇಂಡಿಯಾ ನೂತನ ಸದಸ್ಯರಿಗೆ ಪ್ರಮಾಣ ವಚನವನ್ನ ಜೆಎಫ್ಡಿ ಸಿಎ. ಮಧುಸೂದನ್ ನಾವಡ ನಿಯೋಜಿತ ವಲಯ ಉಪಾಧ್ಯಕ್ಷರು 2025. ಪ್ರಾಂತ್ಯ ಎ. ವಲಯ-24, ಜೆಸಿಐ ಇಂಡಿಯಾ ಇವರು ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಎಲ್ಲರಿಗೂ ಕೂಡ ಆತ್ಮೀಯವಾದ ಸ್ವಾಗತವನ್ನು ಕೋರಿದ್ದಾರೆ. ಈ ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಕೂಡ ಇರುತ್ತದೆ.