ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪತ್ರಕರ್ತ ಮುರುಘರಾಜ್ ಪುತ್ರಿ!
– ಕೋಣಂದೂರು ಮುರುಘರಾಜ್ ಪುತ್ರಿ ಸಿಂಚನ, ದರ್ಶನ್ ವಿವಾಹ
– ಕುವೆಂಪು ಹುಟ್ಟೂರಲ್ಲಿ ಮಂತ್ರ ಮಾಂಗಲ್ಯ ಮದುವೆ
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ಅವರ ಸರಳ ಮದುವೆ ಕಲ್ಪನೆಯ ಮಂತ್ರ ಮಾಂಗಲ್ಯದ ಮೂಲಕ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಇತ್ತೀಚಿಗೆ ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೋಣಂದೂರು ಮುರುಘರಾಜ್ ಹಾಗೂ ತೀರ್ಥಹಳ್ಳಿ ಟಿಎಪಿಸಿಎಂಎಸ್ ನಿರ್ದೇಶಕಿ ನಾಗರತ್ನ ಅವರ ಪ್ರಥಮ ಪುತ್ರಿ ಸಿಂಚನ ಅವರ ಶುಭ ವಿವಾಹ ನಡೆಯಿತು. ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಮತ್ತು ಉಪನ್ಯಾಸಕ ನಾಗೇಶ್ ಬಿದರಗೋಡು ಮಂತ್ರ ಮಾಂಗಲ್ಯ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಗಾಯಕ ಮುನ್ನೂರು ಮೋಹನ್ ಕುವೆಂಪು ಗೀತೆ ಹಾಡಿದರು. ಮುರುಘರಾಜ್ ದ್ವಿತೀಯ ಪುತ್ರಿ ಪ್ರಾರ್ಥನಾ ಹಾಗೂ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನೂತನ ವಧುವರರಿಗೆ ಹಾರ್ದಿಕ ಶುಭಾಶಯಗಳು.
ಮಂತ್ರ ಮಾಂಗಲ್ಯದ ಮಹತ್ವ ಸಾರಿದ ಮಾಷ್ಟ್ರು!
ಪತ್ರಕರ್ತ ಕೋಣಂದೂರು ಮುರುಘರಾಜ್ ಮತ್ತು ನಾಗರತ್ನ ದಂಪತಿಗಳ ಮಗಳು ಸಿಂಚನ ಹಾಗೂ ಬೆಂಗಳೂರಿನ ವಿ.ಬೋರೆಗೌಡ ಮತ್ತು ಸರೋಜ ದಂಪತಿಗಳ ಪುತ್ರ ದರ್ಶನ ಅವರು ಮಂತ್ರ ಮಾಂಗಲ್ಯದ ಮೂಲಕ ಭವಿಷ್ಯದ ಬಾಳನ್ನು ಹಂಚಿಕೊಳ್ಳುವ ಜೊತೆಗಾರರಾದರು. ಎರಡೂ ಕುಟುಂಬದವರು, ನೂರಾರು ಹಿತೈಷಿಗಳು ಮಂತ್ರ ಮಾಂಗಲ್ಯ ವಿವಾಹಕ್ಕೆ ಸಂಭ್ರಮದಿಂದ ಸಾಕ್ಷಿಯಾದರು. ಸರಳವಾದ ವಿವರಣೆ ಮೂಲಕ ಮಂತ್ರ ಮಾಂಗಲ್ಯ ಆಶಯವನ್ನು ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಉತ್ತುಂಗ ಸರಳವಾಗಿ ಮನಮುಟ್ಟುವಂತೆ ವಿವರಿಸಿದರೆ ಉಪನ್ಯಾಸಕ ಬಿದರಗೋಡು ನಾಗೇಶ್ ಅದಕ್ಕೆ ಪೂರಕವಾದ ನಿರೂಪಣೆಯೊಂದಿಗೆ ಸಹಕರಿಸಿದರು. ಮಂತ್ರಮಾಂಗಲ್ಯವೆಂದರೆ ಈಗಿನ ಪೀಳಿಗೆ ಬಯಸುವ ಯಾವುದೇ ಅಬ್ಬರವಿಲ್ಲ. ಅದು ನೀರಸ ಎಂಬ ರೂಡಿಗತ ನಂಬಿಕೆಯನ್ನು ತೊಡೆದು ಹಾಕುವಂತೆ ಮಂತ್ರ ಮಾಂಗಲ್ಯ ವೇದ, ಉಪನಿಷತ್ತುಗಳ ಅರ್ಥಪೂರ್ಣ ಮಂತ್ರಗಳು ಹಾಗೂ ಗಂಡು ಹೆಣ್ಣು ಯಾವುದೇ ಭೇದ ಭಾವವಿಲ್ಲದೆ ಬದುಕಿನಲ್ಲಿ ಸಹಪಯಣಿಗರು ಆಗಿರಬೇಕು ಎಂಬ ಮಹಾನ್ ಆಶಯವನ್ನು ಹೊಂದಿದೆ ಎಂಬುದನ್ನು ಆಹ್ವಾನಿತರ ಎದುರು ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಯಿತು.
ಸರಳ ಮದುವೆ…ಮಾದರಿ ಮದುವೆ…!
ಸರಳ ಮದುವೆ ಮಂತ್ರ ಮಾಂಗಲ್ಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳಿಗೆ ಕುಟುಂಬದವರು, ಗಣ್ಯರು ಶುಭಾಶಯ ಕೋರಿದರು.