ಉಡುಪಿ ಸಿದ್ದಾಂತ ಫೌಂಡೇಶನ್ ಪ್ರೇರಣಾ ಕಾರ್ಯಕ್ರಮ ಸೂಪರ್
– ಸಾವಿರಾರು ಮಕ್ಕಳಿಗೆ ಪರೀಕ್ಷಾ ಪೂರ್ವ ತರಬೇತಿ: ಗಣ್ಯರು ಹಾಜರ್
– ತೀರ್ಥಹಳ್ಳಿ ಸಾಧಕ ಮಕ್ಕಳಿಗೆ ಮಂಜುನಾಥ ಗೌಡ ನಗದು ಘೋಷಣೆ
NAMMUR EXPRESS NEWS
ತೀರ್ಥಹಳ್ಳಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 625/625ಕ್ಕೆ ಅಂಕಗಳಿಸುವ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿ ವಿದ್ಯಾರ್ಥಿಗೂ 25 ಸಾವಿರ ನಗದು ಘೋಷಣೆ ಹಾಗೂ 600 ಕ್ಕಿಂತ ಹೆಚ್ಚು ಅಂಕ ಗಳಿಸುವ ಪ್ರತಿ ಮಗುವಿಗೂ ಸನ್ಮಾನಿಸಿ ಗೌರವಿಸುತ್ತೇನೆ ಎಂದು ಸಹಕಾರ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಶಾಂತವೇರಿ ಗೋಪಾಲಗೌಡ ರಂಗಮಂದಿರ ದಲ್ಲಿ ತಾಲ್ಲೂಕಿನ ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ ಉಡುಪಿಯ ಸಿದ್ದಾಂತ ಫೌಂಡೇಶನ್ ಮುಖ್ಯಸ್ಥರಾದ ಗೋಪಾಲಕೃಷ್ಣ ಭಟ್ ಮತ್ತು ತಂಡದ ಸಹಕಾರದಲ್ಲಿ ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ನಡೆದ ಎಸ್ ಎಸ್ ಎಲ್ ಸಿ ಮಕ್ಕಳಿ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ವಿಶೇಷ ಕಾರ್ಯಗಾರ ಪ್ರೇರಣಾ ಕಾರ್ಯಾಗಾರದಲ್ಲಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಉಡುಪಿಯ ಸಿದ್ದಾಂತ ಫೌಂಡೇಶನ್ ಅವರ ಶೈಕ್ಷಣಿಕ ಕಾಳಜಿಗೆ ಹಾಗೂ ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಹಾಗೂ ಎಲ್ಲಾ ಸಹ ಶಿಕ್ಷಕರ, ಮುಖ್ಯ ಶಿಕ್ಷಕರ, ಮಕ್ಕಳು ಪೋಷಕರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಂಡಕ್ಕೆ ಡಾ.ಆರ್. ಎಂ ಮಂಜುನಾಥ್ ಗೌಡ ಅವರು ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದ ಆರಂಭಕ್ಕೂ ಮುಂಚೆ ಎಸ್ ಎಂ ಕೃಷ್ಣ ಅವರ ಅಕಾಲಿಕ ಮರಣವನ್ನು ಶೋಕ ಆಚರಣೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತಿರುವುದು ಖುಷಿಯ ಜೊತೆಗೆ ಹೆಮ್ಮೆ ಅನಿಸಿದೆ. ಅವರ ಶಾಲೆಗೂ, ಶಿಕ್ಷಕರಿಗೂ ಮತ್ತು ಪೋಷಕರಿಗೂ ತಾಲೂಕು ಶಿಕ್ಷಣ ಇಲಾಖೆಗೂ ನನ್ನ ವೈಯಕ್ತಿಕ ಅಭಿನಂದನೆಗಳನ್ನು ಮಂಜುನಾಥ ಗೌಡ ಸಲ್ಲಿಸಿದರು.
ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಿಂದಲೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಭರವಸೆಯನ್ನು ನೀಡಿದರು ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರಾದ ಗೀತಾ ರಮೇಶ್ ಮಾತನಾಡಿದರು.
ಸಿದ್ಧಾಂತ ಫೌಂಡೇಶನ್ ಮುಖ್ಯಸ್ಥರಾದ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಮಕ್ಕಳಲ್ಲಿ ಪರೀಕ್ಷಾ ಸಂಬಂಧ ಇರುವಂತಹ ಗೊಂದಲಗಳನ್ನು ತೊಡೆದುಹಾಕಿ ಪರೀಕ್ಷೆಗೆ ಹೊಸ ಭರವಸೆಯೊಂದಿಗೆ ಮತ್ತು ಧೈರ್ಯದೊಂದಿಗೆ ಪರೀಕ್ಷೆಯನ್ನು ಎದುರಿಸುವ ಹೊಸ ಪ್ರಯತ್ನಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಅಭಿಪ್ರಾಯಪಟ್ಟರು,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ ಮಾತನಾಡಿ, ಕಳೆದ ವರ್ಷದಿಂದ ಸಿದ್ಧಾಂತ ಫೌಂಡೇಶನ್ ಸಹಕಾರದಲ್ಲಿ ಮಾಡುತ್ತಿರುವಂತಹ ಈ ಪ್ರೇರಣಾ ಕಾರ್ಯಗಾರವು ಮಕ್ಕಳಲ್ಲಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಗಿದೆ. ಕಳೆದ ವರ್ಷ ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಲ್ಲಿ ಅನೇಕ ಅಂಶಗಳ ಜೊತೆಗೆ ಈ ಕಾರ್ಯಗಾರವು ಸಹ ಕಾರಣವಾಗಿದೆ, ಜೊತೆಗೆ ಪ್ರೌಢಶಾಲೆಯ ಎಲ್ಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಎಲ್ಲಾ ವಿಶೇಷ ಶಿಕ್ಷಕರ ಹೊಂದಾಣಿಕೆಯ ಅಂಶವೇ ತಾಲೂಕಿನ ಶೈಕ್ಷಣಿಕ ಸಮಗ್ರ ಪ್ರಗತಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು
ತೀರ್ಥಹಳ್ಳಿ ತಾಲೂಕು ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕರಾದ ಪ್ರವೀಣ್ ಎಂ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರಿರಾಜ್ ಜಿ,ಕೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮು ಬಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಕೆ, ವಿ, ಎಸ್ ಎಸ್ ಎಲ್ ಸಿ ಪರೀಕ್ಷಾ ತಾಲೂಕು ನೋಡಲ್ ಅಧಿಕಾರಿಯಾದ ಗಣೇಶ್ ಕೆ, ಡಿ ಹಾಗೂ ಶಿಕ್ಷಣ ಸಂಯೋಜಕರಾದ ನಾಗರಾಜ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಮುರಳೀಧರ್ ಕಿರಣ್ ಕೆರೆ ಹಾಗೂ ರಾಘವೇಂದ್ರ ಭಟ್, ಹಾಗೂ ತಾಲೂಕಿನ ಹಲವು ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, 750ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದರು ..
ಸಿದ್ದಾಂತ ಪೌಂಡೇಷನ್ ವತಿಯಿಂದ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಎಲ್ಲಾ ಮಕ್ಕಳಿಗೂ ಮಾಡಲಾಗಿತ್ತು. ರಂಜಿತ್ ನಿರೂಪಿಸಿ ಆದ್ಯ ಪ್ರಾರ್ಥನೆ ಮಾಡಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ ಪ್ರಾಸ್ತಾವಿಸಿದರು, ಮಂಜು ಬಾಬು ಹೆಚ್ ಪಿ ವಂದಿಸಿದರು..