ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿ ದೀಪೋತ್ಸವಕ್ಕೆ ಸಜ್ಜು!
– ಡಿ. 14ರ ಸಂಜೆಯಿಂದ 32ನೇ ವರ್ಷದ ದೀಪೋತ್ಸವ
– ಡಿ. 15ರಂದು ಮಂದಾರ್ತಿ ಮಾದೇವಿ ನೃತ್ಯ ರೂಪಕ
– ಸಮಸ್ತ ಭಕ್ತರಿಗೆ ಸ್ವಾಗತ ಕೋರಿದ ದೇವಸ್ಥಾನ ಸಮಿತಿ
NAMMUR EXPRESS NEWS
ತೀರ್ಥಹಳ್ಳಿ: ಬೆಟ್ಟದ ಮೇಲಿರುವ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಬಾಳೇಬೈಲು ಇವರ ಆಶ್ರಯದಲ್ಲಿ ಡಿಸೆಂಬರ್ 14ರ ಶನಿವಾರ ಸಂಜೆ 6-30ಕ್ಕೆ ದೀಪೋತ್ಸವ ನಡೆಯಲಿದೆ. ಸದ್ಭಕ್ತರ ಶ್ರೇಯಸ್ಸಿಗಾಗಿ, ಆರೋಗ್ಯ, ವಿದ್ಯೆ, ಐಶ್ವರ್ಯಾದಿ ಕಾಮನೆಯ ಪ್ರಾಪ್ತಿಗಾಗಿ ಶ್ರೀ ಸಂಧ್ಯಾ ಮಂಟಪ ಸಿದ್ದೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ 32ನೇ ವರ್ಷದ ದೀಪೋತ್ಸವ ಹಾಗೂ ಪೂಜಾ ಕೈಂಕರ್ಯಗಳು ಹಾಗೂ ರಾತ್ರಿ 7-30ಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯ ಕ್ರಮಗಳು ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತನು- ಮನ-ಧನ ಸಹಕಾರ ನೀಡಿ ಪ್ರಸಾದವನ್ನು ಸ್ವೀಕರಿಸಿ, ನಿಸರ್ಗ ಮಾತೆಯ ಮಡಿಲಿನಲ್ಲಿರುವ ಶ್ರೀ ದೇವರ ದೀಪೋತ್ಸವ ವೀಕ್ಷಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ ವಿನಂತಿಸಿದೆ.
ಡಿ. 15ರಂದು ಮಂದಾರ್ತಿ ಮಾದೇವಿ ನೃತ್ಯ ರೂಪಕ
ದಿನಾಂಕ: 15-12-2024ರ ಶನಿವಾರ ರಾತ್ರಿ 8 ಗಂಟೆಗೆ ಉದಯೋನ್ಮುಖ ಕಲಾವಿದ ರಾಘವೇಂದ್ರ ಮತ್ತು ಗುರುಪ್ರಸಾದ್ ತಂಡದವರಿಂದ ಕೊಳಲು ಮತ್ತು ಪ್ಯಾಕ್ರೋಫೋನ್ ವಾದನ. ದಿನಾಂಕ: 15-12-2024ರ ಭಾನುವಾರ ಸಂಜೆ 6-30ರಿಂದ ಮಂದಾರ್ತಿ ಮಾದೇವಿ’ ನೃತ್ಯ ರೂಪಕ ಕಾರ್ಯಕ್ರಮ ಇರುತ್ತದೆ. ಸರ್ವರನ್ನು ಎಲ್ಲಾ ಕಾರ್ಯಕ್ರಮಕ್ಕೂ ಸ್ವಾಗತಿಸಲಾಗಿದೆ.