ದತ್ತ ಪೀಠದಲ್ಲಿ ಧಾರ್ಮಿಕ ಪೂಜೆ: ಭಕ್ತರ ಸಮಾಗಮ
– ಮಾತಾ ಅನುಸೂಯಾ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ
– ದತ್ತಪೀಠದಲ್ಲಿ ಹೋಮ,ಪೂಜಾ ಕೈಂಕರ್ಯ ನೆರವೇರಿಸಿದ ಮಹಿಳೆಯರು
NAMMUR EXPRESS NEWS
ಚಿಕ್ಕಮಗಳೂರು: ದತ್ತಜಯಂತಿ ಆಂಗವಾಗಿ ಅಕ್ಕಪಕ್ಕದ ಜಿಲ್ಲೆಗಳು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ದತ್ತ ಮಾಲಾ ಅಭಿಯಾನ,ಶೋಭಾಯಾತ್ರೆ,ಧಾರ್ಮಿಕ ಸಭೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಗುರುವಾರದಿಂದ ದತ್ತಪೀಠದಲ್ಲಿ ದತ್ತಜಯಂತಿ ಅಂಗವಾಗಿ ವಿಶೇಷ ಧಾರ್ಮಿಕ ಪೂಜಿ ವಿಧಿವಿಧಾನಗಳು ಶುರುವಾಗಿದೆ. ಮಾತಾ ಅನೂಸೂಯಾ ಜಯಂತಿ ಅಂಗವಾಗಿ ಸಾವಿರಾರು ಮಹಿಳೆಯರಿಂದ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ನಂತರ ದತ್ತಪೀಠಕ್ಕೆ ತೆರಳಿ ಪೂಜಾ ಕಾರ್ಯ ನೆರವೇರಿಸಿ ದರ್ಶನ ಪಡೆದರು. ಪೀಠದ ಅರ್ಚಕ ವರ್ಗದಿಂದ ವಿಶೇಷ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು ದತ್ತಪೀಠದಲ್ಲಿ ಗಣಪತಿ ಹೋಮ, ದುರ್ಗಾ ಹೋಮ, ನವಗ್ರಹ ಹೊಮ, ವಾಸ್ತು ಹೋಮ, ಸುದರ್ಶನ ಹೊಮ, ದುರ್ಗಾ ದೀಪ ನಮಸ್ಕಾರಗಳು ನೆರವೇರಿತು. ಪೂಜಾಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷದ್ ಭಜರಂಗದಳದ ಪ್ರಮುಖರು,ಸಮಿತಿಯ ಪ್ರಮುಖರು,ಮಹಿಳೆಯರು ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ
ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆದಿದ್ದು, ಚಕ್ರವರ್ತಿ ಸೂಲಿಬೆಲೆ ಭಾಗಿಯಾಗಿದ್ದಾರೆ. ನಗರದೆಲ್ಲೆಡೆ ಖಾಕಿ ಫುಲ್ ಅಲರ್ಟ್ ಆಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಪೋಲೀಸರ ನಿಯೋಜನೆಯಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.