- ಸ್ಥಳೀಯರಿಗೆ ಹರಾಜು ನೀಡಲು ಹೋರಾಟಕ್ಕೆ ಸಜ್ಜು
- ಉದ್ಯೋಗ, ಉದ್ಯಮ ಕೈ ತಪ್ಪಿದರೆ ಅಪಾಯದ ಭೀತಿ
- ಏನೇ ಆಗಲಿ, ಕುರುವಳ್ಳಿ ಬಂಡೆ ಕೆಜಿಎಫ್ ಆಗದಿರಲಿ..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಕುರುವಳ್ಳಿ ಬಂಡೆ ಇದೀಗ ಹರಾಜು ಮಾಡಲು ಸರಕಾರ ಸಿದ್ಧತೆ ನಡೆಸಿದೆ. ಆದರೆ ಇಲ್ಲಿನ ಸ್ಥಳೀಯರ ಉದ್ಯೋಗ, ಉದ್ಯಮ, ಬದುಕು ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಸ್ಥಳೀಯರಿಗೆ ಅವಕಾಶ ನೀಡಬೇಕು, ನೈಸರ್ಗಿಕವಾಗಿ ಹಲವು ದಶಕಗಳಿಂದ ಬಂಡೆ ನಡೆಸಿದವರಿಗೆ ಆಧ್ಯತೆ ಮೇರೆಗೆ ಬಂಡೆ ನಡೆಸಲು ಅವಕಾಶ ಆಗಬೇಕು ಎಂಬ ಒತ್ತಾಯ ಸ್ಥಳೀಯವಾಗಿ ಕೇಳಿ ಬಂದಿದ್ದು ಇದೇ ಅಗ್ರಹ ಗೃಹ ಮಂತ್ರಿಯವರಿಗೂ ತಲುಪಿದೆ.
ಗಣಿ ಇಲಾಖೆ ಮೇ 25ರಂದು ಟೆಂಡರ್ ಕರೆದಿದ್ದು ಈ ಟೆಂಡರ್ ಬಾರಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಸುಮಾರು 10 ದಶಕಗಳಿಂದ ಸ್ಥಳೀಯ ಕುರುವಳ್ಳಿಯ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದ್ರಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಾವಿರಾರು ಕೂಲಿ ಕಾರ್ಮಿಕರ ಬದುಕು ಇದೆ. ಜತೆಗೆ ಕಲ್ಲು ಬಂಡೆ ನಂಬಿದ ಲೋಡರ್ಸ್, ಹೋಟೆಲ್, ಲಾರಿ ಮಾಲೀಕರು, ಕಲ್ಲು ಒಡೆಯುವರು, ಏಜೆಂಟ್ಸ್, ಕಟ್ಟಡ ಕಾರ್ಮಿಕರು, ರೈತರು ಎಲ್ಲರೂ ಇದರ ಅವಲಂಭಿತರು.
ಜೊತೆಗೆ ಬಂಡೆಗಳ ಮಾಲೀಕರು ಕೂಡ ನೈಸರ್ಗಿಕ ವಾದಂತಹ ಬಂಡೆಯ ಪ್ರಕ್ರಿಯೆಗಳನ್ನು ಮಾಡಿ, ಇಲ್ಲಿಯ ಸ್ಥಳೀಯವಾಗಿ ಕಲ್ಲನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಕೆಲವರು ಇದನ್ನು ಇದೀಗ ದಂಧೆಯಾಗಿ ಮಾಡಿಕೊಡುತ್ತಿದ್ದು ಸರ್ಕಾರದ ಟೆಂಡರ್ ಪ್ರಕ್ರಿಯೆ ತಾಲೂಕಿಗೆ ಮುಳ್ಳಾಗುವ ಸಾಧ್ಯತೆ ಇದೆ.
ತೀರ್ಥಹಳ್ಳಿ ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುರುವಳ್ಳಿ ಬಂಡೆ ಸುಮಾರು ವರ್ಷಗಳಿಂದ ಹರಾಜು ಮತ್ತು ಸ್ಥಳೀಯ ಆಡಳಿತದ ಹಾಗೂ ಗಣಿ ಇಲಾಖೆಯ ಸರಹದ್ದಿನಲ್ಲಿದ್ದು ಸ್ಥಳೀಯವಾಗಿ ಯಾರಿಗೂ ತೊಂದರೆಯಾಗದಂತೆ ಬಂಡೆ ನಡೆದುಕೊಂಡು ಬಂದಿದೆ. ಆದರೆ ಸರ್ಕಾರದ ಈಗಿನ ಹರಾಜು ಪ್ರಕ್ರಿಯೆ ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.
ಬಂಡೆಯಲ್ಲಿ ಹಣದ ವಹಿವಾಟು ಜೊತೆಗೆ ಈ ಟೆಂಡರ್ ಅಕ್ರಮಕ್ಕೆ ಆಸ್ಪದವಾಗುವ ಸಾಧ್ಯತೆ ಇದೆ, ಈಗಾಗಲೇ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಸಭೆಯಲ್ಲಿ ಈಗಾಗಲೇ ಸ್ಥಳೀಯವಾಗಿ ಉದ್ಯೋಗ ಕೊಡುವಂತ ವರಿಗೆ ಈಗಾಗಲೇ ಬಂಡೆಯ ಬಗ್ಗೆ ಆರೀತಿರುವಂತವಗೆ ಹರಾಜು ಸಿಕ್ಕಲ್ಲಿ ಸ್ಥಳೀಯವಾಗಿ ಅನುಕೂಲವಾಗುತ್ತದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ. ಕುರುವಳ್ಳಿ ಬಂಡೆ ಸುತ್ತಮುತ್ತ ಸುಮಾರು 2000 ಕಾರ್ಮಿಕರಿದ್ದು ಅವರು ಭಯದಲ್ಲಿ ಕುಳಿತಿದ್ದಾರೆ.
ಸ್ಥಳೀಯರಿಗೆ ಟೆಂಡರ್ ನೀಡಲು ಪಟ್ಟು!
ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು. ಜೊತೆಗೆ ಈಗಾಗಲೇ ನೈಸರ್ಗಿಕವಾಗಿ ಯಾರು ಕಲ್ಲು ಬಂಡೆಯನ್ನು ಮಾಡಿಕೊಂಡು ಬಂದಿದ್ದಾರೆ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕೆಂಬ ಒತ್ತಡವು ಕೇಳಿಬಂದಿದೆ. ಈ ನಡುವೆ ಶಾಸಕ ಆರಗ ಅವರು ಕುರುವಳ್ಳಿ ಬಂಡೆಯ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸದಿರುವುದು ಆತಂಕ ಸೃಷ್ಟಿ ಮಾಡಿದೆ.
ಒಟ್ಟಿನಲ್ಲಿ ಕುರುವಳ್ಳಿ ಬಂಡೆ ತೀರ್ಥಹಳ್ಳಿ ವಾತಾವರಣಕ್ಕೆ ಸೀಮಿತವಾಗಿ ತೀರ್ಥಹಳ್ಳಿತಾಲೂಕಿನ ಸುತ್ತಮುತ್ತಲಿನ ರೈತರಿಗೆ,ಬಡವರಿಗೆ, ಆಶ್ರಯ ಯೋಜನೆಯಂತಹ ಮನೆಕಟ್ಟಿಕೊಳ್ಳುವವರಿಗೆ ಅನುಕೂಲವಾಗಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಗಬೇಕು ಎಂಬ ಒತ್ತಡ ಹೆಚ್ಚಿದೆ.
ಹೆಚ್ಚುತ್ತಾ ಕಲ್ಲಿನ ಬೆಲೆ..?
ಹರಾಜು ಬೇಡಿಕೆ ಹೆಚ್ಚಿದ್ದಂತೆ ಕಲ್ಲಿನ ಬೆಲೆ ಏರಿಕೆಯಾಗುವ ಅಪಾಯ ಇದೆ. ಹೀಗಾಗಿ ಸ್ಥಳೀಯವಾಗಿ ಟೆಂಡರ್ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಹರಾಜಿನಲ್ಲಿ ಗೋಲ್ಮಾಲ್!?
ಮೇ 24ರಂದು 12ರಿಂದ 3ರವರೆಗೆ ಬಿಡ್ ನಡೆಯಲಿದೆ. ಈಗಾಗಲೇ ಬಿಡ್ ಒಳಗಡೆ ಬುಕ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನೆಸ್ಟ್ ಹೋಂ ಸ್ಟೇಯಲ್ಲಿ ಒಂದು ಟೀಮ್ ಮಾತುಕತೆ ಮಾಡಲಾಗಿದೆ. ಶಿವಮೊಗ್ಗದ ಒಂದು ಟೀಮ್ ಹರಾಜಿನಲ್ಲಿ ಪಡೆದು ಸ್ಥಳೀಯರಿಗೆ 4 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆಗಳಿವೆ. ಇದರ ಪರಿಣಾಮ ಕಲ್ಲಿನ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ.
ಇನ್ನು ಇಡೀ ಕಲ್ಲಿನ ಬಂಡೆ ಒಡೆಯುವ, ಸಾಗಣೆ ಮಾಡುವ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳೂ ಕೂಡ ಸದ್ದು ಮಾಡಿವೆ. ನಮ್ಮೂರ್ ಎಕ್ಸ್ ಪ್ರೆಸ್ ಇಂತಹ ಎಲ್ಲಾ ಅಕ್ರಮಗಳ ಮೇಲೆ ಕಣ್ಣಿಡಲಿದೆ.
ಸರ್ಕಾರದ ತೆರಿಗೆ, ಸಾರ್ವಜನಿಕರ ಸ್ವತ್ತು, ಜನತೆಗೆ ಅನ್ಯಾಯ, ಬೆಲೆ ಸಹಜತೆ ಬಗ್ಗೆ ಕಾನೂನು ಹೋರಾಟಕ್ಕೂ ವೇದಿಕೆ ಸಿದ್ಧಮಾಡಿಕೊಂಡಿದೆ.