- ಸರಿಯಾಗುವವರೆಗೆ ಎಲ್ಲೆಲ್ಲಿ ಹೋಗಬಹುದು?
- ಪದೇ ಪದೇ ಕುಸಿತ: ಶಾಶ್ವತ ಪರಿಹಾರ ಇಲ್ವಾ?
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿದ್ದು, ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರಬಿದ್ದಿದೆ. ಇದರಿಂದ ಘಾಟಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಘಾಟಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈಗಾಗಲೇ ತಿರುವಿನಲ್ಲಿ ಹೋದವರು ವಾಪಸ್ ಆಗುತ್ತಿದ್ದಾರೆ. ಇನ್ನೂ ಘಾಟಿ ಕೆಳಗೆ ಸೋಮೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ. ಮೇಲ್ಬಾಗ ಆಗುಂಬೆ ಘಾಟಿ ಚೆಕ್ಪೋಸ್ಟ್ ಬಳಿಯೇ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಪದೇ ಪದೇ ಗುಡ್ಡ ಕುಸಿತ!: ಆಗುಂಬೆ ಘಾಟಿಯಲ್ಲಿ ಪದೇ ಪದೇ ಗುಡ್ಡ ಕುಸಿತ ಸಂಭವಿಸಿದ್ದು ಈ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಮನೆ ಕುಸಿದಿದೆ. ಅನಾಹುತ ಸಾಧ್ಯತೆ ಇದೆ. ಕಳೆದ ವರ್ಷ ನೂರಾರು ಕಡೆ ಗುಡ್ಡ ಕುಸಿದಿದ್ದು ಇನ್ನು ಈ ಬಾರಿಯೂ ಗುಡ್ಡ ಕುಸಿಯುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗ ಹೇಗೆ? ಶಿವಮೊಗ್ಗ, ತೀರ್ಥಹಳ್ಳಿಯಿಂದ ಹೋಗುವರು ಶೃಂಗೇರಿ- ಕೆರೆಕಟ್ಟೆ, ಸಂಪೆಕಟ್ಟೆ ಮಾರ್ಗದಲ್ಲಿ ಹೋಗಬಹುದು. ಕೆಲವೇ ಗಂಟೆಗಳಲ್ಲಿ ದುರಸ್ತಿ ಮಾಡಲಾಗುವುದು ಎಂದು ತಿಳಿದು ಬಂದಿದೆ.