ಶ್ರೀಶಾರದಾ ಪೀಠದಲ್ಲಿ “ಸ್ತೋತ್ರ ತ್ರಿವೇಣಿಯ ಮಹಾ ಸಂಗಮ”..!!
– ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳ ಸಂಭ್ರಮ
– ಸುಮಾರು 50000 ಕ್ಕೂ ಅಧಿಕ ಭಕ್ತಾಧಿಗಳಿಂದ ಏಕಕಾಲದಲ್ಲಿ ಸ್ತೋತ್ರ ಪಠಣ
– ಶೃಂಗೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಬೃಹತ್ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ಶ್ರೀಶಾರದಾ ಪೀಠ ಶೃಂಗೇರಿಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕರಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆ” ಎಂಬ ಐತಿಹಾಸಿಕ ಸ್ತೋತ್ರ ಪಠಣ ಕಾರ್ಯಕ್ರಮವು ಜನವರಿ 11 ನೇ ತಾರೀಖಿನ ಶನಿವಾರದಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀಮಠದ ಭಕ್ತರ ಸಭೆ ನಡೆಸಿದ ಶ್ರೀಮಠದ ಆಡಳಿತ ಮಂಡಳಿ ಹಲವು ಸಿದ್ಧತಾ ಕಾರ್ಯಗಳ ಬಗ್ಗೆ ಚರ್ಚಿಸಿ,ಮಾಹಿತಿ ನೀಡಿ,ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು,ಮಹಿಳೆಯರು, ಸೇರಿದಂತೆ ಸುಮಾರು 50,000 ಕ್ಕೂ ಅಧಿಕ ಜನ ಭಕ್ತರು ಸ್ತೋತ್ರ ಪಠಣೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಭಕ್ತರ ಆಗಮನಕ್ಕಾಗಿ ವಿವಿಧ ತಾಲೂಕಿನಿಂದ ಸುಮಾರು 700 ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಮಠದ ಸಭೆಯಲ್ಲಿ ಮಾಹಿತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಆಸ್ತಿಕ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಶಾರದಾ ಚಂದ್ರಮೌಳೇಶ್ವರರು ಹಾಗೂ ಉಭಯ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗುವಂತೆ ಶೃಂಗೇರಿ ಶ್ರೀಶಾರದಾ ಪೀಠದ ಹಿರಿಯ ಅಧಿಕಾರಿಗಳು ಆಹ್ವಾನಿಸಿದ್ದಾರೆ.