ನ್ಯಾಷನಲ್ ಸಂಸ್ಥೆಯ ಕಾರ್ಯಕ್ರಮಕ್ಕೆ ಗ್ರಾಹಕರ ಮೆಚ್ಚುಗೆ!
– ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ವಾರ್ಷಿಕ ಡ್ರಾ ಸಂಭ್ರಮ
– 1000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟ ಹೆಮ್ಮೆ: ಹೈದರ್
– ಯಾರು ಯಾರಿಗೆ ಡ್ರಾ ಬಹುಮಾನ? ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ತೀರ್ಥಹಳ್ಳಿ: ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ 16ನೇ ವರ್ಷದ ವಾರ್ಷಿಕಾಚರಣೆ ಸಮಾರಂಭ ತೀರ್ಥಹಳ್ಳಿ ಪಟ್ಟಣದ ಹೊರ ವಲಯದ ಬಾಳೇಬೈಲು ಮತ್ತು ಶಿವರಾಜುಪುರದ ನಡುವೆ ಅತ್ಯಾಧುನಿಕವಾಗಿ ಮತ್ತು ಸುಸಜ್ಜಿತವಾಗಿ ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಕ್ಲಬ್ ಅಲ್ಲಿ ನಡೆಯಿತು.
ಡಿ.25ರ ಸಂಜೆ ತೀರ್ಥಹಳ್ಳಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿದ್ದು ಸಾವಿರಾರು ಗ್ರಾಹಕರಿಗೆ ಮನೋರಂಜನೆ ಜತೆಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಖ್ಯಾತ ಕಲಾವಿದರ ಸಂಗೀತ ಸುಧೆ, ನಿರೂಪಣೆ ಗಮನ ಸೆಳೆಯಿತು.
3 ಜನ ಸಿಬ್ಬಂದಿಯಿಂದ 1000 ಮಂದಿಗೆ ಉದ್ಯೋಗ
ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ಪಾಲುದಾರರಲ್ಲಿ ಒಬ್ಬರಾದ ಯೂಸೂಫ್ ಹೈದರ್ ಅವರು, ನ್ಯಾಷನಲ್ ಸಂಸ್ಥೆಯ ಸಂಸ್ಥೆಯು ಉದ್ಯಮದ ಜತೆ ಜತೆಗೆ ತನ್ನ ಲಾಭದಲ್ಲಿ ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಮಾಡುತ್ತಾ ಬಂದಿದೆ. 2008ರ ಡಿ.25ರಂದು ನ್ಯಾಷನಲ್ ಗೋಲ್ಡ್ ಪ್ಯಾಲೇಸ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ಆರಂಭಗೊಂಡಾಗ ಸುಲಭದ ಹಾದಿಯಾಗಿರಲಿಲ್ಲ. ಕೇವಲ 3 ಜನ ಸಿಬ್ಬಂದಿಗಳಿಂದ ಈ ಸಂಸ್ಥೆ ಆರಂಭವಾಗಿತ್ತು. ಇಂದು 55 ಜನ ಸಿಬ್ಬಂದಿಗಳಿದ್ದಾರೆ. ನ್ಯಾಷನಲ್ ನ ಎಲ್ಲಾ ಸಂಸ್ಥೆಗಳಿಂದ ಸೇರಿದರೆ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದ ಸಂತೋಷವಿದೆ. ತೀರ್ಥಹಳ್ಳಿ ಜನತೆ ನಮಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದರು. ಬಂಗಾರದ ಉದ್ಯಮದಲ್ಲಿ ತಮ್ಮ ಸಂಸ್ಥೆಯು ಕರ್ನಾಟಕದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ತೀರ್ಥಹಳ್ಳಿ ಹಾಗೂ ಮಲೆನಾಡಿನ ಜನತೆ ನಮ್ಮನ್ನು ಎಂದೂ ಕೈಬಿಟ್ಟಿಲ್ಲ. ಬಂಗಾರದ ಜೊತೆಗೆ ವಜ್ರದ ಉದ್ಯಮವನ್ನೂ ಆರಂಭಿಸಿದ್ದರಿಂದ ಒಂದು ಕಾಲದಲ್ಲಿ ಗಗನ ಕುಸುಮ ವೆನಿಸಿದ್ದ ವಜ್ರಗಳು ( ಡೈಮಂಡ್ಸ್) ಕೂಡ ಈ ಭಾಗದ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿದ ಹೆಮ್ಮೆ ನಮ್ಮದು ಎಂದರು.ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ನಿಂದ ವಾರ್ಷಿಕೋತ್ಸವದ ಅಂಗವಾಗಿ ಈ ಹಿಂದೆ ಬಂಪರ್ ಬಹುಮಾನವಾಗಿ ಕಾರುಗಳನ್ನು ಕೊಡುತ್ತಿದ್ದೆವು. ಒಟ್ಟು 11 ಕಾರುಗಳನ್ನು ಕೊಟ್ಟಿದ್ದೇವೆ. ಅನಂತರ ಸಂಸ್ಥೆಯಿಂದ ಕಾರುಗಳ ಬದಲಿಗೆ ಬಂಗಾರವನ್ನು ಕೊಡಲು ಆರಂಭಿಸಿದ್ದು. ಪ್ರಸ್ತುತ ವರ್ಷ 25 ಲಕ್ಷ ರೂ.ಗಳ ಬಹುಮಾನ ನೀಡಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಡಿಜಿಎಮ್ ದೇವರಾಜ್ ಅವರು, ನ್ಯಾಷನಲ್ ಸಂಸ್ಥೆಗಳ ಎಲ್ಲರೂ 916 ಕ್ಯಾರೆಟ್ ಬಂಗಾರದಂತೆಯೆ ಸರಳ ಸಜ್ಜನರಾಗಿವುದರಿಂದಲೇ ಸಂಸ್ಥೆಯು ಈ ಮಟ್ಟದ ಏಳಿಗೆ ಸಾಧಿಸಿದೆ. ಇನ್ನೂ ನೂರಾರು ವರ್ಷ ಇದು ಇಲ್ಲಿರುತ್ತದೆ ಎಂದು ಶುಭ ಹಾರೈಸಿದರು. ನ್ಯಾಷನಲ್ ಸಂಸ್ಥೆಯ ಅಬ್ದುಲ್ ರೆಹಮಾನ್ ಅವರು ಮಾತನಾಡಿ, 1952 ರಲ್ಲಿ ತಮ್ಮ ತಂದೆ ಹಾಜಿ ಶೇಖ್ ಅಹಮದ್ ಸಾಹೇಬ್ ಅವರು ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದಾಗ ಅತ್ಯಂತ ಕಷ್ಟದ ದಿನಗಳಾಗಿದ್ದವು. ಆ ದಿನಗಳು ಇಂದಿನಂತೆ ಹೂವಿನ ಹಾಸಿಗೆಯಾಗಿರಲಿಲ್ಲ. ಆದರೆ ಆ ಕಾಲದಲ್ಲಿ ನಾವು ರಂಜದಕಟ್ಟೆಯಲ್ಲಿದ್ದಾಗ ನಮ್ಮ ಚಿಕ್ಕಪ್ಪ ಕೂಡ ತಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡಿದ್ದರು ಎಂದು ನಡೆದು ಬಂದ ಹಳೆಯ ದಿನಗಳ ಮೆಲುಕು ಹಾಕಿದರು. ಸಮಾರಂಭದಲ್ಲಿ ನ್ಯಾಷನಲ್ ಸಂಸ್ಥೆಯ ಇಬ್ರಾಹಿಂ ಷರೀಪ್, ಕೆನರಾ ಬ್ಯಾಂಕ್ ತೀರ್ಥಹಳ್ಳಿ ಶಾಖೆ ಮ್ಯಾನೇಜರ್ ಮಹಮ್ಮದ್ ಸಾಹಿಲ್, ನ್ಯಾಷನಲ್ ನ ಅಬ್ದುಲ್ ಕಲಾಮ್ ಆಜಾದ್, ಮೊಯ್ದಿನ್ ಕಬೀರ್, ಎಂ.ಎಸ್. ಅಬ್ದುಲ್ ರಹಿಮಾನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಮ್ಮದ್ ನಜೀರ್, ಸಾಹಿಲ್, ಸಲ್ಮಾನ್, ಅಕಿಲ್, ಅರ್ಮಾನ್, ಮಂಜುನಾಥ ಮಲ್ಯ ಮುಂತಾದವರಿದ್ದರು.
ಬುಲೆಟ್ ಬೈಕ್, ಸ್ಕೂಟಿ ಬಹುಮಾನ ಕೊಟ್ಟ ಸಂಸ್ಥೆ!
ತೀರ್ಥಹಳ್ಳಿಯಲ್ಲಿ ನೂತನವಾಗಿ ಶುಭಾರಂಭಗೊಂಡ ನ್ಯಾಷನಲ್ ಸಂಸ್ಥೆ ಯ ನ್ಯಾಷನಲ್ ವಾಚಸ್ & ಸಿಲ್ವರ್ ಸಂಸ್ಥೆಯ ಉದ್ಘಾಟನೆ ಅಂಗವಾಗಿ ಬಂಪರ್ ಡ್ರಾ ಬಹುಮಾನ ಬುಲೆಟ್ ಬೈಕ್, ಸ್ಕೂಟಿ ಸೇರಿ ಹತ್ತಾರು ಬಹುಮಾನ ನೀಡಲಾಯಿತು.