ಟಾಪ್ ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ
– ಸಾಗರ : ಸಾಗರ ಭಾಗದಲ್ಲಿ ಆನೆಗಳು ಪ್ರತ್ಯಕ್ಷ!
– ರಿಪ್ಪನ್ಪೇಟೆ : ಟ್ರ್ಯಾಕ್ಟರ್ ಸರ್ವಿಸ್ ಸಮಸ್ಯೆಯಿಂದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಂಚಿಕೊಳ್ಳಲು ಮುಂದಾದ ರೈತ
– ರಿಪ್ಪನ್ಪೇಟೆ : ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಬಲಿ
NAMMUR EXPRESS NEWS
ಶಿವಮೊಗ್ಗ : ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದು, ಆತನಿಗಾಗಿ ಶೋಧಕಾರ್ಯ ನಡೆದಿದೆ. ಶೋಧಕಾರ್ಯದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ನಾಲ್ವರು ಬಾಲಕರು ಬಾವಿಯಲ್ಲಿ ಈಜಲು ಸಂಜೆಯ ಹೊತ್ತಿಗೆ ತೆರಳಿದ್ದರು. ಈ ಸಂದರ್ಭ 8 ನೇ ತರಗತಿ ಓದುತ್ತಿದ್ದ ಆಪ್ನಾನ್ ನೀರು ಪಾಲಾಗಿದ್ದನು. ನೀರು ಪಾಲಾಗಿದ್ದ ಬಾಲಕನಿಗಾಗಿ ಶೋಧಕಾರ್ಯ ನಡೆದಿದೆ. ರಾತ್ರಿ 8-30 ರ ವೇಳೆಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾವಿ ಬಳಿ ಬಾಲಕನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಟ ನಡೆಸಿದರು. ಅಪ್ನಾನ್ ಡಿವಿಎಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
– ಸಾಗರ : ಸಾಗರ ಭಾಗದಲ್ಲಿ ಆನೆಗಳು ಪ್ರತ್ಯಕ್ಷ !
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಲಕ್ಕವಳ್ಳಿ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾಗಿದೆ. ಲಕ್ಕವಳ್ಳಿ ಸಮೀಪ ಆನೆಯೊಂದು ಮರಿಯಾನೆ ಜೊತೆಗೆ ಕಾಣಿಸಿಕೊಂಡಿದೆ. ಕೂಡಲೆ ಗ್ರಾಮಸ್ಥರು ಜೋರಾಗಿ ಕೂಗಿ ಆನೆಗಳನ್ನು ಓಡಿಸಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಮೂಡಹಗಲು ಲಕ್ಷ್ಮಣಪ್ಪ ಎಂಬುವರ ತೋಟಕ್ಕೆ ನೀರು ಬಿಡಲು ಹೋದಾಗ ಆನೆಗಳು ಕಾಣಿಸಿಕೊಂಡಿದ್ದು ಭಯದಿಂದ ಮನೆಗೆ ಓಡಿ ಬಂದ, ಮನೆಯವರಲ್ಲಿ ವಿಚಾರ ತಿಳಿಸಿದ್ದು ತಕ್ಷಣ ಮನೆಯವರು ಕೂಗಿ ಗಲಾಟೆ ಮಾಡಿದ ಬಳಿಕ ತೋಟದಿಂದ ಕಾಡಾನೆಗಳು ಹೊರ ಹೋಗಿವೆ. ಈ ಗ್ರಾಮದ ಅಡಿಕೆ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಕಳೆದ 15 – 20 ದಿನಗಳಿಂದ ಈ ಭಾಗದ ರೈತರು ಕಾಡಾನೆ ದಾಳಿಯಿಂದ ಆತಂಕದಲ್ಲಿದ್ದಾರೆ. ಮೂಡಾಗಲು ಗ್ರಾಮದ ಲಕ್ಷ್ಮಣಪ್ಪ ಎಂಬುವರ ಮನೆಯ ಹತ್ತಿರ ಕಾಡಾನೆಗಳು ಬಂದಿದ್ದು ಮನೆಯವರು ಭಯ ಭೀತರಾಗಿದ್ದಾರೆ. ಅಲ್ಲಿನ ರೈತರು ಆನೆಗಳನ್ನು ಓಡಿಸಲು ಧಾವಿಸಿದ್ದು ಲಕ್ಕವಳ್ಳಿ ಗ್ರಾಮದ ತೋಟಗಳ ಮೂಲಕ ಹಾದು ಹೋಗಿವೆ. ಇಷ್ಟು ದಿನಗಳ ಕಾಲ ಕಾಡಿನ ಅಂಚಿನಲ್ಲೇ ಸಂಚರಿಸುತ್ತಿದ್ದಂತಹ ಆನೆಗಳು ಮನೆಯ ಅಂಗಳಕ್ಕೆ ಬರಲು ಆರಂಭಿಸಿವೆ. ಆನೆಗಳು ಗ್ರಾಮಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಚೋರಡಿ ವಲಯ ಅರಣ್ಯಾಧಿಕಾರಿ ರವಿ ನಾಯಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಆನೆಗಳ ಹುಡುಕಾಟವನ್ನು ಪ್ರಾರಂಭಿಸಿದ್ದು ಬೇರೆಡೆ ಓಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
– ರಿಪ್ಪನ್ಪೇಟೆ : ಟ್ರ್ಯಾಕ್ಟರ್ ಸರ್ವಿಸ್ ಸಮಸ್ಯೆಯಿಂದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಂಚಿಕೊಳ್ಳಲು ಮುಂದಾದ ರೈತ
ರಿಪ್ಪನ್ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಜಾನ್ ಡೀರ್ ಟ್ರ್ಯಾಕ್ಟರ್ ಷೋ ರೂಂ ನಲ್ಲಿ ಸರ್ವಿಸ್ ನಲ್ಲಿ ಲೋಪವೆಸಗಿದ್ದು ಈ ಬಗ್ಗೆ ವಿಚಾರಿಸಿದರೆ ಷೋರೂಂ ಮಾಲೀಕ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿ ರೈತರು ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಟ್ರ್ಯಾಕ್ಟರ್ ಚಾಲಕ ವಾಹನಕ್ಕೆ ಹಾಗೂ ತನ್ನ ಮೈ ಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಾರಗಡಿ ಸಮೀಪದ ಮಂಡ್ರೊಳ್ಳಿಯ ಲಕ್ಷ್ಮಿನಾರಾಯಣ ಎಂಬ ರೈತರೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಗೆ ಐದು ವರ್ಷ ಗ್ಯಾರಂಟಿ ಇದೆ ಎಂದು ಹೇಳಲಾಗಿದ್ದರೂ ಈಗ ಗ್ಯಾರಂಟಿಯಿರುವ ಬಿಡಿಬಾಗಕ್ಕೆ 40 ಸಾವಿರ ರೂ ಹಣ ಕೇಳುತಿದ್ದಾರೆ ಎಂದು ಆರೋಪಿಸಿ ಹಲವಾರು ರೈತರು ಹಾಗೂ ಕರ್ನಾಟಕ ಕಾರ್ಮಿಕ ಪರಿಷತ್ ವತಿಯಿಂದ ಷೋರೂಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಕಾರಗಡಿ ಸಮೀಪದ ಲಕ್ಷ್ಮಿನಾರಾಯಣ ಎಂಬುವವರು ಎರಡು ವರ್ಷಗಳ ಹಿಂದೆ ಲೋಕೆಶ್ವರ್ ರಾವ್ ಎಂಬುವವರ ಮಾಲೀಕತ್ವದ ಕಾಳೆ ಅಗ್ರಿಟೆಕ್ ನಲ್ಲಿ ಜಾನ್ ಡೀರ್ ಟ್ರ್ಯಾಕ್ಟರ ಖರೀದಿಸಿದ್ದು ಮಾರನೇ ದಿನವೇ ಮುಂಭಾಗದ ವೀಲ್ ಬಳಿ ಸಮಸ್ಯೆ ಎದುರಾಗಿತ್ತು ಕೂಡಲೇ ಮಾಲೀಕರಿಗೆ ತಿಳಿಸಿದ್ದರು ಏನೂ ಆಗುವುದಿಲ್ಲ ಓಡಿಸಿಕೊಂಡು ಇರಿ ಅದಕ್ಕೆ ಐದು ವರ್ಷ ವಾರಂಟಿ ಇದೆ ಏನಾದರೂ ಆದರೆ ನಮ್ಮ ಸಂಸ್ಥೆಯ ಜವಬ್ದಾರಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದು ಅವತ್ತಿನಿಂದ ಪದೇ ಪದೇ ವಾಹನ ಕೈಕೊಡುತಿದ್ದು ಈಗ ವಾಹನ ಓಡಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ ರಿಪ್ಪನ್ಪೇಟೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋರೂಂ ಗೆ ಸರ್ವಿಸ್ ಗೆ ಬಿಡಲಾಗಿತ್ತು ಆದರೆ ಈಗ ಎಪ್ಪತ್ತು ಸಾವಿರ ಕಟ್ಟಬೇಕು ಇಲ್ಲದಿದ್ದಲಿ ಸರಿ ಮಾಡಲು ಆಗುವುದಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವು ಅದಕ್ಕೆ ಸ್ಪಂದಿಸದೇ ಇದ್ದ ಹಿನ್ನಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ್ದೆವೆ ಎಂದು ಟ್ರ್ಯಾಕ್ಟರ್ ಮಾಲೀಕ್ ತನ ನೋವನ್ನು ಹಂಚಿಕೊಂಡರು. ಪಟ್ಟಣದ ಟ್ರ್ಯಾಕ್ಟರ್ ಷೋರೂಂ ಮುಂಭಾಗದಲ್ಲಿ ಕಾರ್ಮಿಕ ಪರಿಷತ್ ಹಾಗೂ ರೈತರು ಪ್ರತಿಭಟನೆ ನಡೆಸುತಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದೇ ಸ್ಥಳಕ್ಕೆ ಬರಲು ಒಪ್ಪದ ಮಾಲೀಕನ ನಡೆಯನ್ನು ಖಂಡಿಸಿ ಟ್ರ್ಯಾಕ್ಟರ್ ಚಾಲಕ ವಾಹನದಲ್ಲಿದ್ದ ಡಿಸೇಲ್ ನ್ನು ಟ್ರ್ಯಾಕ್ಟರ್ ಮೇಲೆ ಹಾಗೂ ತನ್ನ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಡೆಯಿತು ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದವರು ಆತನನ್ನು ತಡೆದು ಮುಂದಾಗುವ ಭಾರಿ ಆನಾಹುತ ತಪ್ಪಿಸಿದ್ದಾರೆ.
– ರಿಪ್ಪನ್ಪೇಟೆ : ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಬಲಿ.
ರಿಪ್ಪನ್ಪೇಟೆ : ಇಲ್ಲಿನ ಗವಟೂರು ಬಳಿಯಲ್ಲಿ ಬೆಳ್ಳಂಬೆಳ್ಳಗ್ಗೆ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಗವಟೂರು ಸಮೀಪದ ಬಿಳಿಕಿ ನಿವಾಸಿ ಸಂಜೀವ್ ಪೂಜಾರಿ (65) ಮೃತ ದುರ್ಧೈವಿಯಾಗಿದ್ದಾರೆ. ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಂದು ಬೆಳಿಗ್ಗೆ ಮನೆಯಿಂದ ರಿಪ್ಪನ್ಪೇಟೆ ಹೊರಡುತಿದ್ದಾಗ ಗವಟೂರು ಸರ್ಕಾರಿ ಶಾಲೆಯ ಸಮೀಪದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿತ್ತು. ಈ ಸಂಧರ್ಭದಲ್ಲಿ ಬೆಳಿಗ್ಗಿನ ರೌಂಡ್ಸ್ ನಲ್ಲಿದ್ದ ಪಟ್ಟಣದ ಪಿಎಸ್ಐ ಅದೇ ಮಾರ್ಗವಾಗಿ ಬರುತಿದ್ದಾಗ ಗಾಯಾಳುವನ್ನು ಗಮನಿಸಿ ತನ್ನ ಖಾಸಗಿ ವಾಹನದಲ್ಲಿ ಗಾಯಾಳುವನ್ನು ರಿಪ್ಪನ್ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಗೆ ಶಿಫ್ಟ್ ಮಾಡುವಾಗ ಗಾಯಾಳುವಿನ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತ ಸಂಜೀವ್ ಪೂಜಾರಿ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.