- ಹಗಲು ಬಿಸಿಲು, ರಾತ್ರಿ ಮಳೆ: ಹೆಚ್ಚಿದ ಅನಾರೋಗ್ಯ
- ಶೀತ ಜ್ವರ, ಮಳೆ ಬಿಸಿಲು: ಆರೋಗ್ಯ ಹುಷಾರು
NAMMUR EXPRESS NEWS
ತೀರ್ಥಹಳ್ಳಿ: ಮಳೆಗಾಲದಲ್ಲಿ ಬೇಸಿಗೆಯಂತಹ ವಾತಾವರಣ ಬುಧವಾರ ಕಂಡು ಬಂದಿದ್ದು ಸಂಜೆ ಮಳೆ ಹೆಚ್ಚಾಗಿತ್ತು. ಇದರಿಂದ ಮಳೆ ಬಿಸಿಲಿನ ಆಟ ಕಂಡು ಬಂದಿತು.
ತೀರ್ಥಹಳ್ಳಿಯಲ್ಲಿ ಮಳೆ ಬಿಸಿಲು ಜನರಿಗೆ ಹೆಚ್ಚು ಆರೋಗ್ಯ ಸಮಸ್ಯೆ ಕಾಣುವ ಭೀತಿ ಎದುರಾಗಿದೆ.
ಈಗಾಗಲೇ ಶೀತ, ಜ್ವರ, ಗಂಟಲು ನೋವು,ಮೈ ಕೈ ನೋವು ಹೆಚ್ಚಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್ ಮುಂದೆ ಜನರ ಸಂಖ್ಯೆ ಹೆಚ್ಚಿದೆ.
ಕೊಂಚ ಬಿಸಿಲು ಅಡಿಕೆಗೆ ಔಷಧಿ ಹೊಡೆಯೋದು ಚುರುಕು
ಕೊಂಚ ಬಿಸಿಲು ಕಾರಣ ಅಡಿಕೆಗೆ ಔಷಧಿ ಹೊಡೆಯುವ ಕೆಲಸ ನಡೆಯುತ್ತಿದೆ. ಇನ್ನು ಬುಧವಾರ ಸಂಜೆ ಹಲವೆಡೆ ಗುಡುಗು ಸಿಡಿಲಿನ ಮಳೆಯಾಗಿದೆ. 15 ದಿನಗಳ ನಿರಂತರ ಮಳೆಯಿಂದ ಜನ ಹೈರಾಣರಾಗಿದ್ದರು.