ಖಾಸಾಯಿಕಾನೆಗೆ ಅಕ್ರಮ ಗೋಸಾಗಾಟ ತಡೆದ ಸ್ಥಳೀಯರು..
– ಸಾಗರದ ಕಸಾಯಿಖಾನೆಯೊಂದಕ್ಕೆ ಸಾಗಾಟ
– ಏಜೆಂಟ್ ಮುಖಾಂತರ ಸಾಗಾಟ ಆರೋಪ
– ಗೋವುಗಳ ರಕ್ಷಣೆ,ವಾಹನ,ಇಬ್ಬರು ಅರೆಸ್ಟ್
NAMMUR EXPRESS NEWS
ಶೃಂಗೇರಿ: ತಾಲೂಕಿನ ಬೇಗಾರಿನ ಸರ್ಕಲ್ನಲ್ಲಿ ಸಾಗರದ ಕಸಾಯಿಖಾನೆಯೊಂದಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಸ್ಥಳೀಯರು ಹಾಗೂ ಬಜರಂಗದಳ ಕಾರ್ಯಕರ್ತರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ತಡೆದು ಗೋವುಗಳನ್ನು ರಕ್ಷಿಸಿದ್ದಾರೆ. ಏಜೆಂಟ್ ಒಬ್ಬನ ಮುಖಾಂತರ ಸಾಗರಕ್ಕೆ ಗೋವುಗಳನ್ನು ಬೇಗಾರಿನ ಹರಾವರಿ ಎಂಬ ಗ್ರಾಮದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಶೃಂಗೇರಿ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡು,ವಾಹನ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.