- ಮಲೆನಾಡಲ್ಲಿ ಆಮ್ ಆದ್ಮಿ ಸಂಘಟನೆ ಜೋರು
- ಸಾಲೂರು ಶಿವಕುಮಾರ್ ಗೌಡ, ದಿವಾಕರ್ ಉಪಸ್ಥಿತಿ
- ಸರ್ವರನ್ನು ಸ್ವಾಗತಿಸಿದ ಅಧ್ಯಕ್ಷ ಗಣೇಶ್ ಸೋಗೋಡು
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ನೂತನ ಕಾರ್ಯಾಲಯ ಜುಲೈ 31ರಂದು ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಪಕ್ಷದ ಸಂಘಟನೆ ಚುರುಕುಗೊಂಡಿದ್ದು ತೀರ್ಥಹಳ್ಳಿ ತಾಲೂಕಲ್ಲಿ ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ ಗೌಡ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಗೊಂಡಿದೆ. ಇನ್ನು ಹೊಸನಗರದಲ್ಲಿ ಗಣೇಶ್ ಸೋಗೋಡು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದಾರೆ.
ಹೊಸ ನಗರದ ಸಂತೆ ಮಾರುಕಟ್ಟೆ ಮುಂಭಾಗ ನೂತನ ಕಚೇರಿ ಉದ್ಘಾಟನೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು, ಪಕ್ಷದ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ. ಸಮಸ್ತ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ಅಧ್ಯಕ್ಷರಾದ ಗಣೇಶ್ ಸೋಗೊಡು ಮನವಿ ಮಾಡಿದ್ದಾರೆ.
ಸಾಗರದ ಆಪ್ ಅಭ್ಯರ್ಥಿ ದಿವಾಕರ್ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಭಾಗಿಯಾಗಲಿದ್ದಾರೆ.