- ರಾಜ್ಯದಲ್ಲಿ ಹೆಚ್ಚಿದ ಪತ್ರಕರ್ತರ ಮೇಲಿನ ಹಲ್ಲೆ
- ಶಿವಮೊಗ್ಗದಲ್ಲೂ ಗೃಹ ಸಚಿವರಿಗೆ ಮನವಿ
NAMMUR EXPRESS NEWS
ತೀರ್ಥಹಳ್ಳಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವರದಿ ಮಾಡಲು ಹೋಗಿದ್ದ ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕ ವರದಿಗಾರರ ಮೇಲೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಶಾಖೆ ತೀವ್ರವಾಗಿ ಖಂಡಿಸಿದೆ.
ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ರಮೇಶ್ ಕುಮಾರ್ ಅವರು ತಮ್ಮ ಸ್ಥಾನದ ಜವಾಬ್ದಾರಿ ಮರೆತು ಪತ್ರಕರ್ತರಿಬ್ಬರ ಮೇಲೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅದ್ದರಿಂದ ಕೂಡಲೆ ಅವರು ಕ್ಷಮೆಯಾಚಿಸಬೇಕು.ಪತ್ರಕರ್ತರ ಮೇಲಿನ ಇಂತಹ ಹಲ್ಲೆ ಮತ್ತು ದೌರ್ಜನ್ಯಗಳನ್ನು ಸಂಘವು ಸಹಿಸುವುದಿಲ್ಲ. ಕೂಡಲೇ ರಮೇಶ್ ಕುಮಾರ್ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆಯ ಅಧ್ಯಕ್ಷರಾದ ಡಾನ್ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾದ ಮುನ್ನೂರ್ ಮೋಹನ್ ಶೆಟ್ಟಿ,
ಜಿಲ್ಲಾ ಸಂಘದ ಪ್ರತಿನಿಧಿ ಟಿ ಜೆ ಅನಿಲ್, ಕಾರ್ಯದರ್ಶಿಯಾದ ಮುರುಘರಾಜ್, ಖಜಾಂಚಿ ಶ್ರೀಕಾಂತ್. ವಿ. ನಾಯಕ್, ಸಹ ಕಾರ್ಯದರ್ಶಿ ಮನುಕುಮಾರ್ ಸೇರಿ ಸಂಘದ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲೂ ಗೃಹ ಸಚಿವರಿಗೆ ಮನವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂ ಜೆ) ಶಿವಮೊಗ್ಗ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ. . ರಾಜ್ಯಸಮಿತಿ ನಿರ್ದೆಶಕ ಎನ್.ರವಿಕುಮಾರ್ ಸೇರಿ ಸದಸ್ಯರಿದ್ದರು.