- ಮಂಜುನಾಥ ಗೌಡರದ್ದು ವಯುಕ್ತಿಕ ಪಾದಯಾತ್ರೆ
- ಆರಗ ಹೆದರುಪುಕುಲ : ಕಿಮ್ಮನೆ ಲೇವಡಿ
NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಭಾಗದ ಜ್ವಲಂತ ಸಮಸ್ಯೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇದೀಗ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕಿಮ್ಮನೆ ರತ್ನಾಕರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಕೆಪಿಸಿಸಿ ಆದೇಶದಂತೆ ಆ.1ರಿಂದ 10ರವರೆಗೆ ಎಲ್ಲಾ ಕಡೆ ಪಾದಯಾತ್ರೆ ನಡೆಸಬೇಕು. ಹೀಗಾಗಿ ಆಗಸ್ಟ್ 8ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿಯವರೆಗೆ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನ ಸಭೆ ನಡೆಸುವುದಾಗಿ ಹೇಳಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷರ ಮೇರೆಗೆ ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದ ಹಾನಿ ಉಂಟಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ, ರೈತರಿಗೆ ಈ ವರ್ಷದಲ್ಲಿ ಅತಿವೃಷ್ಟಿ ಅನಾವೃಷ್ಟಿಯಿಂದ ತುಂಬಾ ಹಾನಿ ಉಂಟಾಗಿದೆ, ಹಾಗೂ ಕಸ್ತೂರಿ ರಂಗನ್ ವರದಿ, ರೈತ ವಿರೋಧಿ ನಿಯಮ, ರಸ ಗೊಬ್ಬರ ಬೆಲೆ ಏರಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನೇರ ಹಣ ಬಿಡುಗಡೆ ಮಾಡದೆ ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಾಧ್ಯಕ್ಷರ ಹಾಗೂ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವುದನ್ನು ಖಂಡಿಸಿ ಈ ಪಾದಯಾತ್ರೆ ನಡೆಯಲಿದೆ ಎಂದು ಕಿಮ್ಮನೆ ರತ್ನಾಕರ್ ತಿಳಿಸಿದರು.
ವಿಶ್ವನಾಥ ಶೆಟ್ಟಿ, ಕೆಸ್ತೂರು ಮಂಜುನಾಥ್., ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಬನಮ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಹಾಗೂ ಬಾಳೆಹಳ್ಳಿ ಪ್ರಭಾಕರ್. ಅಮರ್ ನಾಥ್ ಶೆಟ್ಟಿ. ಜೈಕರ್ ಶೆಟ್ಟಿ ಹಾಗೂ ಇನ್ನಿತರರು ಇದ್ದರು.
ಆರಗ ಎಲ್ಲಿಗೆ ಗೃಹ ಮಂತ್ರಿ?!
ರಾಜ್ಯದಲ್ಲಿ ಕೊಲೆ, ಗಲಭೆ ಹೆಚ್ಚಾಗಿದೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಗೃಹ ಮಂತ್ರಿಯಾಗಿದ್ದಾರೆ ಎಂದು ಕಿಮ್ಮನೆ ಕುಟುಕಿದ್ದಾರೆ.
ಆರಗ ಅವರಿಗೆ ಹೆದರಿಕೆ. ಮೊನ್ನೆ ಮಂಗಳೂರಿಗೆ ಸಿಎಂ ಬಂದಾಗ ಅವರ ಜತೆ ಕಾಣಿಸಿಕೊಂಡು ಮತ್ತೆ ಸೀದಾ ತೀರ್ಥಹಳ್ಳಿಗೆ ಬಂದಿದ್ದಾರೆ. ಪಟಾಕಿ ಹೊಡೆದಾಗ ಮಕ್ಕಳು ತಾಯಿ ಸೆರಗು ಹಿಡಿಯುವಂತೆ ಆರಗ ಸಿಎಂ ಹಿಂದೆ ಕದ್ದು ಕೂರುತ್ತಾರೆ ಎಂದು ಕಿಮ್ಮನೆ ಲೇವಡಿ ಮಾಡಿದರು.
ಮಂಜುನಾಥ ಗೌಡ ವಯುಕ್ತಿಕ ಪಾದಯಾತ್ರೆ!
ಮಂಜುನಾಥ ಗೌಡ ನಡೆಸಿದ್ದು ವಯುಕ್ತಿಕ ಪಾದಯಾತ್ರೆ. ಅದು ಪಕ್ಷದ ಪಾದಯಾತ್ರೆಯಲ್ಲ. ಮಂಜುನಾಥ ಗೌಡ ನನಗೆ ಆಹ್ವಾನ ನೀಡಿಲ್ಲ.