- ಮಲೆನಾಡಿನಲ್ಲಿ ಆಮ್ ಆದ್ಮಿ ಸಂಘಟನೆ ಜೋರು
- ತೀರ್ಥಹಳ್ಳಿ, ಸಾಗರ ಅಭ್ಯರ್ಥಿಗಳ ಹೆಸರು ಅಂತಿಮ
NAMMUR EXPRESS NEWS
ಹೊಸನಗರ /ತೀರ್ಥಹಳ್ಳಿ: ಮಲೆನಾಡಿನಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಜೋರಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಪ್ ಪಕ್ಷ ತನ್ನ ಚಟುವಟಿಕೆ ಹಾಗೂ ಸಂಘಟನೆ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಹೊಸನಗರದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟನೆ ಮಾಡಿದೆ. ಸಾಗರ ಅಭ್ಯರ್ಥಿ,ಹೈಕೋರ್ಟ್ ವಕೀಲ ದಿವಾಕರ್, ತೀರ್ಥಹಳ್ಳಿ ಅಭ್ಯರ್ಥಿ, ಆಪ್ ವಕ್ತಾರ ಸುಪ್ರೀಂ ಕೋರ್ಟ್ ವಕೀಲ ಸಾಲೂರು ಶಿವಕುಮಾರ್ ಉದ್ಘಾಟನೆ ಮಾಡಿದರು. ಈ ವೇಳೆ ಜಿಲ್ಲಾ ಸಂಚಾಲಕರಾದ ನವಿಲೇಶ್, ಹೊಸನಗರ ಅಧ್ಯಕ್ಷ ಗಣೇಶ್ ಸೋಗೋಡು, ತೀರ್ಥಹಳ್ಳಿ ಅಧ್ಯಕ್ಷ ಮದನ್ ತನಿಕಲ್, ಸಾಗರ ಅಧ್ಯಕ್ಷ ಅಮೃತ್ ರೋಸ್, ಸೊರಬ ಪ್ರಮುಖರಾದ ದಾನಪ್ಪ ನಾಯಕ, ಮುಖಂಡರಾದ ಮೋಹನ್, ಎಲ್ಲಾ ತಾಲೂಕಿನ ಮುಖಂಡರು, ಕಾರ್ಯಕರ್ತರು ಇದ್ದರು.
ತೀರ್ಥಹಳ್ಳಿಯಲ್ಲಿ ಶೀಘ್ರದಲ್ಲಿ ಹೊಸ ಕಚೇರಿ!
ತೀರ್ಥಹಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನ ನಡೆಯುತ್ತಿದ್ದು ಮಳೆಗಾಲದ ಬಳಿಕ ಹೊಸ ಕಚೇರಿ ಉದ್ಘಾಟನೆಗೊಳ್ಳಲಿದೆ.
ಖ್ಯಾತ ವಕೀಲರು, ಸಂಘಟಕರೂ ಆದ ಶಿವಕುಮಾರ್ ಸಾಲೂರು ನೇತೃತ್ವದಲ್ಲಿ ಪಕ್ಷ ಸಂಘಟನೆ ಶುರುವಾಗಿದೆ.
ಸಾಗರಕ್ಕೆ ದಿವಾಕರ್, ತೀರ್ಥಹಳ್ಳಿಗೆ ಶಿವಕುಮಾರ್
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಹಾಗೂ ತೀರ್ಥಹಳ್ಳಿಯ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು ಇದೀಗ ಹೊಸನಗರ ಕಚೇರಿ ಉದ್ಘಾಟನೆ ಮಲೆನಾಡಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹೊಸ ಭರವಸೆ ನೀಡಿದೆ. ಸಾಗರದಿಂದ ಹೈಕೋರ್ಟ್ ವಕೀಲರಾದ ದಿವಾಕರ್, ತೀರ್ಥಹಳ್ಳಿಯಿಂದ ಸುಪ್ರೀಂ ಕೋರ್ಟ್ ವಕೀಲರು, ಬಿಜೆಪಿ ಕಾನೂನು ಪ್ರಕೋಷ್ಠದ ಪ್ರಮುಖರಾಗಿದ್ದ ಯುವ ನಾಯಕ ಸಾಲೂರು ಶಿವಕುಮಾರ್ ಅಭ್ಯರ್ಥಿಯಾಗಿ ಕೆಲಸ ಮಾಡುತ್ತಿದ್ದಾರೆ.