- ನೋಯ್ಡಾದ ಅಕ್ರಮ ಅವಳಿ ಕಟ್ಟಡ ನೆಲಸಮ
- ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯಾಚರಣೆ
- ಅಕ್ರಮ ಕಟ್ಟಡ ಕಟ್ಟುವವರೇ ನೋಡಿ ಹುಷಾರ್!
NAMMUR EXPRESS NEWS
ಹೊಸದಿಲ್ಲಿ: ದೆಹಲಿ ಹೊರವಲಯದ ಉತ್ತರ ಪ್ರದೇಶದ ನೋಯ್ಡಾದಲ್ಲೂ ಭಾನುವಾರ ನಡೆದ ‘ಅವಳಿ ಕಟ್ಟಡ’ಗಳ ಧ್ವಂಸ ಕಾರ್ಯಾಚರಣೆ ಒಂದು ದೊಡ್ಡ ಪಾಠವಾಗಿದೆ. ಇದರೊಂದಿಗೆ 9 ವರ್ಷದ ಕಾನೂನು ಹೋರಾಟ ಕೊನೆಗೊಂಡಿದೆ.
ಹೊಸದಿಲ್ಲಿ, ಮುಂಬಯಿ, ಚೆನ್ನೈ, ಬೆಂಗಳೂರು, ಭೋಪಾಲ್ ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ಭೂ ಒತ್ತುವರಿ ಮಾಡಿ ಕಟ್ಟಿದ ಕಟ್ಟಡಗಳು ಇದೀಗ ಆತಂಕದಲ್ಲಿವೆ.
ನೊಯ್ಡಾದ ಸೆಕ್ಟರ್ ’93 ಎ’ನಲ್ಲಿ ನಿರ್ಮಿಸಿದ ಅಕ್ರಮ ಅವಳಿ ಕಟ್ಟಡ ಪ್ರಕರಣ ಇದಕ್ಕೆ ಅಪವಾದದಂತಿದೆ.
ಉದ್ಯಾನ ನಿರ್ಮಿಸಬೇಕಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು, 14 ಮಹಡಿಗಳಿಗೆ ಅನುಮತಿ ಸಿಕ್ಕಿದ್ದರೂ 40 ಮಹಡಿಯ ಕಟ್ಟಡ ನಿರ್ಮಿಸಿದ್ದ ಸೂಪರ್ ಟೆಕ್ ಕಂಪನಿಯು ಇದನ್ನು ಉಳಿಸಿಕೊಳ್ಳಲು 9 ವರ್ಷ ಕಾನೂನು ಹೋರಾಟ ನಡೆಸಿದರೂ ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು – ‘ವಾಟರ್ಫಾಲ್ ಇಂಫ್ಲೋಷನ್’ ತಂತ್ರಜ್ಞಾನದ ಮೂಲಕ ಅತ್ಯಂತ ಯೋಜನಾಬದ್ಧವಾಗಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ನೆಲಕ್ಕರುಳಿಸಲಾಗಿದೆ. ಈ ಪ್ರಕರಣದ ಮೂಲಕ ಸುಪ್ರೀಂ ಕೋರ್ಟ್, ಇನ್ನು ಮುಂದೆ ಮನಬಂದಂತೆ ಮಾಡಿ ಭೂ ದಾಖಲೆಗಳಲ್ಲಿ ಗೋಲ್ಮಾಲ್ ಅಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಬೇಕೆಂಬ – ಬಿಲ್ಡರ್ ಗಳು, ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿದೆ.