- ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಹಿತಿ
- ಮಲೆನಾಡಲ್ಲಿ ಭತ್ತದ ನೆಟ್ಟಿ ಮುಕ್ತಾಯ
- ಮಳೆ, ಬಿಸಿಲು ಹೆಚ್ಚಿದ ಕೊಳೆ ರೋಗ
NAMMUR EXPRESS NEWS
ಪಂಜಾಬ್ ಮತ್ತು ಹರಿಯಾಣದಿಂದ ವರದಿಯಾಗಿರುವ ಭತ್ತದ ಸಸಿಗಳು ಕುಬ್ಜವಾಗಲು ಸದರ್ನ್ ರೈಸ್ ಬ್ಲ್ಯಾಕ್ ಸ್ಟೈಕ್ ಡ್ವಾರ್ಫ್ ವೈರಸ್ (ಎಸ್ಆರ್ಬಿಎಸ್ಡಿಎ) ಎಂಬ ನಿಗೂಢ ಕಾಯಿಲೆ ಕಾರಣ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಧೃಡಪಡಿಸಿದೆ.
ಸದರ್ನ್ ರೈಸ್ ಬ್ಲ್ಯಾಕ್ ಸ್ಟೈಕ್ ಡ್ವಾರ್ಫ್ ವೈರಸ್ ಡಬಲ್ ಸ್ಟ್ಯಾಂಡರ್ಡ್ ಆರ್ನ್ ವೈರಸ್ ಆಗಿದೆ, ಇದು ಮೊದಲು 2001 ರಲ್ಲಿ ದಕ್ಷಿಣ ಚೀನಾದಲ್ಲಿ ಪತ್ತೆಯಾಗಿತ್ತು. ಅಕ್ಕಿಯಲ್ಲಿ ಕಂಡುಬಂದ ಗುಣಲಕ್ಷಣಗಳು ಮತ್ತು ಈ ವೈರಸ್ನ ಜೀನೋಮ್ ರಚನೆಯು ಅಕ್ಕಿ ಕಪ್ಪು ಗೆರೆಗಳ ಕುಬ್ಜ ವೈರಸ್ ನಂತೆ ಇರುತ್ತವೆ.
ಅಕ್ಕಿಯ ಹೊರತಾಗಿ, ಎಸ್ಆರ್ಬಿಎಸ್ಡಿವಿ ವಿವಿಧ ಕಳೆ ಪ್ರಭೇದಗಳನ್ನೂ ಇದು ಸೋಂಕಿತಗೊಳಿಸುತ್ತದೆ. ಈ ವೈರಸ್ ಮೊದಲು ದಕ್ಷಿಣ ಚೀನಾದಲ್ಲಿ ಕಂಡುಬಂದ ಕಾರಣ, ಇದನ್ನು ಸದರ್ನ್ ರೈಸ್ ಬ್ಲ್ಯಾಕ್ ಎಂದು ಹೆಸರಿಸಲಾಯಿತು.
ಆರ್ ಎನ್ಎ ಪ್ರತ್ಯೇಕಿಸಲಾದ ಸೋಂಕಿತ ಸಸ್ಯಗಳು ಮತ್ತು ವೆಕ್ಟರ್ ಕೀಟಗಳ ದೇಹ ಇವೆರಡರಲ್ಲೂ ವೈರಸ್ ಇರುವುದು ಪತ್ತೆಯಾಗಿದೆ. ಆದರೆ ಸೋಂಕಿತ ಸಸ್ಯಗಳಿಂದ ಸಂಗ್ರಹಿಸಿದ ಬೀಜಗಳಲ್ಲಿ ವೈರಸ್ ಕಂಡುಬಂದಿಲ್ಲ.
ಕೇಂದ್ರ ಕೃಷಿ ಸಚಿವಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಬಾಧಿತ ಸಸ್ಯಗಳ ಬೆಳವಣಿಗೆ ಬಹಳ ಕಡಿಮೆ ಇದೆ. ಇವು ಕುಬ್ಬವಾಗಿವೆ ಎಂದು IARI ಹೇಳಿದೆ. ಅವುಗಳ ಬೇರು ಕಳಪೆಯಾಗಿ ಬೆಳೆದು ಕಂದು ಬಣ್ಣಕ್ಕೆ ತಿರುಗಿವೆ. ವೈರಸ್ ಸೋಂಕಿತ ಸಸ್ಯಗಳನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕಬಹುದು.
ಮಲೆನಾಡಲ್ಲಿ ಭತ್ತದ ನಾಟಿ ಮುಕ್ತಾಯ: ಮಲೆನಾಡಲ್ಲಿ ಭತ್ತದ ನಾಟಿ ಕೆಲಸ ಮುಗಿಯುತ್ತಾ ಬಂದಿದೆ. ಎಲ್ಲಾ ಕಡೆ ಗದ್ದೆ ನಾಟಿ ಆಗಿ ಸಸಿ ಬೇರು ಒಡೆದಿದೆ.
ಅಡಿಕೆಗೆ ಕೊಳೆ: ಮಲೆನಾಡಿನಲ್ಲಿ ಮಳೆ ಬಿಸಿಲು ಕಾರಣ ಅಡಿಕೆಗೆ ಕೊಳೆ ರೋಗ ಬಂದಿದೆ. ತೀರ್ಥಹಳ್ಳಿ, ಹೊಸನಗರ, ಕೊಪ್ಪ, ಶೃಂಗೇರಿ ಸೇರಿ ಹಲವೆಡೆ ಕೊಳೆ ರೋಗ ಬಂದಿದೆ. ಔಷಧ ಹೊಡೆಯುವ ಕೆಲಸ ನಡೆಯುತ್ತಿದೆ.