- ಕೂದಲೆಳೆ ಅಂತರದಲ್ಲಿ ಪಾರಾದ ಸವದಿ
- ವಿಜಯಪುರದಲ್ಲಿ ಅಅಪಘಾತಕ್ಕೆ ಮೂವರು ಬಲಿ
- ಕಲಬುರಗಿಯ ಚಿಂಚೋಳಿಯಲ್ಲಿ ಭೂಕಂಪನ
NAMMUR EXPRESS NEWS
ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಕ್ಷ್ಮಣ್ ಸವದಿ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರುಗೇರಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಅಥಣಿಯಿಂದ ಗೋಕಾಕ ಕಡೆಗೆ ಹೋಗುವಾಗ ಈ ಕಾರು ಅಪಘಾತ ನಡೆದಿದೆ. ಲಕ್ಷ್ಮಣ ಸವದಿ ಅವರ ಜತೆಗೆ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು.
ಕಿಯಾ ಕಂಪನಿಯ ಕಾರ್ನಿವಾಲ್ ಲಿಮೋಸಿನ್ ಹೆಸರಿನ ಐಶಾರಾಮಿ ಕಾರು ಇದಾಗಿದ್ದು ಏರ್ ಬ್ಯಾಗ್ ಇದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಅಪಘಾತಗೊಂಡು ಕಾರು ಪಲ್ಟಿಯಾದ ಬಳಿಕ ಸನ್ ರೂಪ್ ಮೂಲಕ ಲಕ್ಷ್ಮಣ ಸವದಿ ಹೊರ ಬಂದಿದ್ದಾರೆ. ವಾಹನದಲ್ಲಿ ಇದ್ದ ಲಕ್ಷ್ಮಣ ಸವದಿ,ಆಪ್ತ ಸಹಾಯಕ ಮತ್ತು ಚಾಲಕ ಸೇರಿದಂತೆ ಮೂರು ಜನ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಅಪಘಾತದ ಬಳಕ ಲಕ್ಷ್ಮಣ ಸವದಿ ಅವರನ್ನು ಹಾರೂಗೇರಿ ಪಟ್ಟಣದ ಮಲ್ಲಿಕಾರ್ಜುನ ನಾರಗೊಂಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅಪಘಾತದಲ್ಲಿ ಎದೆ ಭಾಗಕ್ಕೆ ಪೆಟ್ಟು ಬಿದ್ದ ಸಂಶಯದ ಹಿನ್ನಲೆಯಲ್ಲಿ ಎಕ್ಸ್ ರೇ ಪರೀಕ್ಷೆ ನಡೆಸಲಾಯಿತು. ಆ ಬಳಿಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಅಪಘಾತಕ್ಕೆ ಮೂವರು ಬಲಿ!: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಅಪಘಾತ ಸಂಭವಿಸಿದ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ.
ಕಲಬುರಗಿ ಮೂಲದ ಕಿಯಾ ಕಾರಿನಲ್ಲಿದ್ದ 7 ಜನರ ಪೈಕಿ ಇಬ್ಬರು ಮಹಿಳೆಯರು, ಓರ್ವ ಮಗು ಸಾವನ್ನಪ್ಪಿದೆ. ಮತ್ತೊಂದು ಬಲೇನೋ ಕಾರಿನಲ್ಲಿದ್ದ ವಿಜಯಪುರ ಮೂಲದವರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಲಘು ಭೂಕಂಪನ: ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಿದೆ. ಚಿಂಚೋಳಿ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಭಾರೀ ಶಬ್ಧದೊಂದಿಗೆ ಲಘು ಭೂ ಕಂಪನದ ಅನುಭವವಾಗಿದೆ. ಭಯಭೀತರಾಗಿ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಬುಧವಾರ ರಾತ್ರಿ 11 ಸುಮಾರಿಗೆ ಭೂಕಂಪಿಸಿದೆ. ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೋಸಳ್ಳಿ ಹಾಗೂ ಸುಲೇಪೆಟ್ನಲ್ಲಿ ಕಂಪನದ ಅನುಭವವಾಗಿದೆ.