- 4000 ಮಂದಿಯನ್ನು ಕೆಲಸದಿಂದ ತೆಗೆದ ಮಸ್ಕ್
NAMMUR EXPRESS NEWS
ಪ್ರಾನ್ಸಿಸ್ಕೊ: ನೌಕರರ ವಿರೋಧದ ನಡುವೆ ತನ್ನ ಶೇ.50 ರಷ್ಟು ಸಿಬ್ಬಂದಿಯನ್ನು ಅರ್ಥಾತ್ ಸುಮಾರು 4 ಸಾವಿರ ಸಿಬ್ಬಂದಿಗಳನ್ನು ಚುಟುಕು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಶುಕ್ರವಾರ ಕೆಲಸದಿಂದ ವಜಾ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಟ್ವಿಟರ್ ನೂತನ ಮಾಲೀಕ ಎಲಾನ್ ಮಾಸ್ಕ್ ಕಂಪನಿ ದಿನಕ್ಕೆ 40 ಲಕ್ಷ ಡಾಲರ್ ನಷ್ಟು ನಷ್ಟ ಅನುಭವಿಸುತ್ತಿದೆ. ಹಾಗಾಗಿ ವಜಾ ಮಾಡದೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ. ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವ ಉದ್ದೇಶದಿಂದ 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವ ತಮ್ಮ ಯೋಜನೆ ಬಗ್ಗೆ ಕೇವಲ ಒಂದು ವಾರದ ಹಿಂದೆ ಮಾಸ್ಕ್ ಘೋಷಿಸಿದ್ದರು. ಈ ಬಗ್ಗೆ ವಜಗೊಂಡ ಉದ್ಯೋಗಿಗಳು ಅಸಮಾಧಾನ ಹೊರಹಾಕಿದ್ದು, ಇದು ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮಾರ್ಗ, ಮಾಸ್ಕ್ ಎಲ್ಲಾ ಕಡೆಯಿಂದಲೂ ಲಾಭಗಳಿಸುವ ಯೋಚನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ .
ಈ ನಡುವೆ ಟ್ವಿಟರ್ ನ ಹಿಂದಿನ ಮುಖ್ಯಸ್ಥ ಜಾಕ್ ಡೋರ್ಸಿ ಅವರು ಮಜಗೊಂಡ ಉದ್ಯೋಗಿಗಳಲ್ಲಿ ಕ್ಷಮೆ ಯೋಚಿಸಿದ್ದಾರೆ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ ನೌಕರರ ವಜಾ ಸಾಧ್ಯತೆ
- ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ
NAMMUR EXPRESS NEWS
ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇದರ ಮಾತೃ ಸಂಸ್ಥೆಯಾಗಿದೆ ಮೆಟಾ ಫ್ಲಾಟ್ಫಾರ್ಮ್ಸ್. ಈ ವಾರ ದೊಡ್ಡ ಮಟ್ಟದ ಲೇ- ಆಫ್(ಉದ್ಯೋಗಿಗಳನ್ನು ವಜಾ ಮಾಡುವುದು) ನಡೆಸಲಿದೆ ಎನ್ನಲಾಗಿದೆ.
ಸಂಸ್ಥೆಯ ಈ ಕ್ರಮದಿಂದ ಸಾವಿರಾರು ಉದ್ಯೋಗಿಗಳು ಬಾಧಿತರಾಗುವ ನಿರೀಕ್ಷೆಯಿದೆ. ಬುಧವಾರ ಈ ಲೇ-ಆಫ್ಗಳು ನಡೆಯಬಹುದೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ಈ ಕುರಿತು ಮೆಟಾ ಪ್ರತಿಕ್ರಿಯಿಸಲು ನಿರಾಕರಿಸಿದೆ.
ತ್ರೈಮಾಸಿಕದ ಆದಾಯ ನಿರೀಕ್ಷಿತ ಮಟ್ಟದಲ್ಲಿಲ್ಲದೇ ಇರುವುದು ಹಾಗೂ ಮೆಟಾ ಸ್ಟಾಕ್ ಮೌಲ್ಯ ಸುಮಾರು 67 ಬಿಲಿಯನ್ ಡಾಲರಷ್ಟು ಕಡಿಮೆಯಾಗಿರುವುದು ಸಂಸ್ಥೆಯ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡಿದೆಯೆನ್ನಲಾಗಿದೆ.
ಜೊತೆಗೆ ಜಾಗತಿಕ ಆರ್ಥಿಕ ನಿಧಾನಗತಿ, ಟಿಕ್ ಟಾಕ್, ಆಪಲ್ ಮುಂತಾದ ಕಂಪೆನಿಗಳಿಂದ ಸ್ಪರ್ಧೆ ಹಾಗೂ ಮೆಟಾವಸ್ರ್ಗೆ ವ್ಯಯಿಸಿದ ದೊಡ್ಡ ಮೊತ್ತ ಸಂಸ್ಥೆಗೆ ಹೊರೆಯಾಗಿದೆ ಎಂದೇ ತಿಳಿಯಲಾಗಿದೆ.
ಮೆಟಾವರ್ಸ್ ಮೇಲೆ ಮಾಡಲಾಗಿರುವ ಹೂಡಿಕೆಗಳು ಫಲ ನೀಡಲು ಒಂದು ದಶಕ ಬೇಕಾದೀತೆಂದು ಮೆಟಾ ಮುಖ್ಯಸ್ಥ ಮಾರ್ಕ್ ಝುಕೆರ್ಬಗ್ ಈಗಾಗಲೇ ಹೇಳಿದ್ದಾರೆ.ಜೂನ್ ತಿಂಗಳಿನಿಂದಲೇ ಹೊಸ ಇಂಜಿನಿಯರ್ ನೇಮಕಾತಿಯನ್ನು ಸಂಸ್ಥೆ ಶೇ 30 ರಷ್ಟು ಕಡಿತಗೊಳಿಸಿತ್ತು.