- ಬುಧವಾರದಿಂದ ಗ್ಯಾಸ್ ಬೆಲೆ 50 ರೂ ಹೆಚ್ಚಳ
- 2023ರಲ್ಲಿ ಸಿಲಿಂಡರ್ ಬೆಲೆ ಎರಡನೇ ಬಾರಿಗೆ ಏರಿಕೆ
NAMMUR EXPRESS NEWS
ನವದೆಹಲಿ: ದೇಶಾದ್ಯಂತ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸಿಲಿಂಡರ್ ಬೆಲೆ 350 ರೂಪಾಯಿ ಏರಿಕೆಯಾಗಿದೆ.
ಪೆಟ್ರೋಲಿಯಂ ಮತ್ತು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ದೇಶಾದ್ಯಂತ ಬುಧವಾರದಿಂದ ಹೊಸ ದರಗಳು ಜಾರಿಯಾಗಿದೆ. ದೆಹಲಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 1,103 ರೂಪಾಯಿ, ವಾಣಿಜ್ಯ ಸಿಲಿಂಡರ್ ಬೆಲೆ 2,119 ರೂಪಾಯಿ ನಿಗದಿಯಾಗಿದೆ.
2023ರಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಎರಡನೇ ಬಾರಿಗೆ ಏರಿಕೆಯಾಗಿದೆ. ಜನವರಿ 1ರಂದು ಸಿಲಿಂಡರ್ ಬೆಲೆಯನ್ನ 25 ರೂಪಾಯಿಯಷ್ಟು ಏರಿಕೆ ಮಾಡಲಾಗಿತ್ತು. ಇದೀಗ ತೈಲ ಕಂಪನಿಗಳಿಂದ ಮತ್ತೊಮ್ಮೆ ಸಿಲಿಂಡರ್ ಬೆಲೆ ಪರಿಷ್ಕರಣೆ ಆಗಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದ್ದು ಗೃಹಿಣಿಯರಿಗೆ ಶಾಕಿಂಗ್ ಸುದ್ದಿಯಾಗಿದೆ.