- ಮೂರೇ ಗಂಟೆಯಲ್ಲಿ ಪಾಸ್ಪೋರ್ಟ್ ದೃಢೀಕರಣ: ಅಮಿತ್ ಶಾ ಭರವಸೆ
- ಬೆಂಗಳೂರಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್ ಕಮಾಂಡ್ ಸೆಂಟರ್ ಉದ್ಘಾಟನೆ
NAMMUR EXPRESS NEWS
ಬೆಂಗಳೂರು: ವಾಹನ ಕಳುವಾದರೆ ಎರಡು ನಿಮಿಷದಲ್ಲಿ ಪತ್ತೆ, ಕೇವಲ 3 ಗಂಟೆಯಲ್ಲಿ ಪಾಸ್ಪೋರ್ಟ್ ಪರಿಶೀಲನೆ ಮುಗಿಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಪರಾಧ ಮಾಡಿರುವ ಎಲ್ಲಾ ಅಪರಾಧಿಗಳ ಫಿಂಗರ್ ಪ್ರಿಂಟ್ ಲಭ್ಯವಿದ್ದು, ಆ ಮೂಲಕ ಅಪರಾಧಿ ಪತ್ತೆ ಹಚ್ಚಿ ಬಂಧನ ಮಾಡಬಹುದು. ಕರ್ನಾಟಕ ಕೂಡ ಫಿಂಗರ್ ಪ್ರಿಂಟ್ ಮೂಲಕ 1800ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿದೆ. ಒಟ್ಟಿಗೆ ಕೆಲಸ ಮಾಡುವುದರಿಂದ ವೇಗವಾಗಿ ಫಲಿತಾಂಶ ಲಭ್ಯವಾಗುತ್ತಿದೆ ಎಂದು ಹೇಳಿದರು.
ICJS ಮೂಲಕ ವಿದೇಶಿ ಪ್ರಕರಣ ಲಭ್ಯವಾಗಲಿದೆ. ಇದರ ಪ್ರಯೋಗ ಕೂಡ ಮಾಡಲಾಗಿದೆ. ಈಶನ್ಯ ರಾಜ್ಯದಲ್ಲಿ ಫಲಿತಾಂಶ ಕೂಡ ಕಂಡಿದ್ದೇವೆ. ICJS ಎರಡನೇ ಪ್ರಯೋಗ ಕೂಡ ನಡೆಯುತ್ತಿದೆ. ಡೇಟಾ ಎಂಟ್ರಿ, ಡೆಟಾ ಟ್ರಾನ್ಸ್ಫರ್ 3,500ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ
ಚೆನೈ, ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್ ಮಾಡಲಾಗಿದೆ. 275 ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮೈಸೂರು ತಲುಪಲಿದೆ. ಸ್ಪೇಸ್ ಸೆಕ್ಟರ್ನಲ್ಲಿ 25ರಷ್ಟು ಕೆಲಸ ನಡೆಯುತ್ತಿದೆ. ಇದೆಲ್ಲದರ ಲಾಭ ಬೆಂಗಳೂರಿಗೆ ಆಗುತ್ತಿದೆ. ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ. ಬೆಂಗಳೂರಿನ ಬಳಿ ಹೆಚ್.ಎ.ಎಲ್ ಹೆಲಿಕಾಪ್ಟರ್ ಕಾರ್ಖಾನೆ ಮೋದಿ ಉದ್ಘಾಟನೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಒಂದೇ ಒಂದು ಪರ್ಸೆಂಟ್ ಕೂಡ ವಿದೇಶಿ ವಸ್ತು ಬಳಸುತ್ತಿಲ್ಲ. ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಮಿತ್ ಶಾ ಹೇಳಿದರು.