- ಕರಾವಳಿಯಲ್ಲಿ ಮಳೆ: ಮಲೆನಾಡಲ್ಲಿ ಮೋಡ
- ರಾಜ್ಯದ ಹಲವೆಡೆ ಮಳೆ ನಿಧಾನಕ್ಕೆ ಶುರು
NAMMUR EXPRESS NEWS
ನವ ದೆಹಲಿ: ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನ ಸ್ವಲ್ಪ ವಿಳಂಬವಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.ಸಾಮಾನ್ಯವಾಗಿ ಮಾನ್ಸುನ್ ಆರಂಭದ ದಿನಾಂಕ ಜೂನ್ 1 ಆಗಿದ್ದರೂ ಈ ಬಾರಿ ಜೂನ್ 4ರಂದು ಮಲಬಾರ್ ಕರಾವಳಿಯನ್ನು ತಲುಪಬಹುದು ಎಂದು ಹವಾಮಾನ ಸಂಸ್ಥೆ ಹೇಳಿದೆ. ಆದರೆ, ಐಎಂಡಿ ವಿಜ್ಞಾನಿಗಳು ಇನ್ನೂ ಮೂರು ದಿನ ವಿಳಂಬವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇರಳಕ್ಕೆ ಮಾನ್ಸೂನ್ ಜೂನ್ 5ರಿಂದ 7ರ ನಡುವೆ ಕಾಲಿಡಲಿದೆ. 2019 ರಲ್ಲಿ ಮಾನ್ಸೂನ್ ಆಗಮನ ವಿಳಂಬವಾಗಿತ್ತು. ಜೂನ್ 6 ರ ಬದಲಿಗೆ ಜೂನ್ 8 ರಂದು ಕೇರಳ ತಲುಪಿತ್ತು.
24 ಗಂಟೆಗಳಲ್ಲಿ ಮೀನುಗಾರರು ಕಡಲಿಗಿಳಿಯದಂತೆ ಮುನ್ಸೂಚನೆ: ಉಡುಪಿ ಸಹಿತ ಕರಾವಳಿ ಕರ್ನಾಟಕದ ಅಲ್ಲಲ್ಲಿ ಗಾಳಿ, ಮಿಂಚು, ಗುಡುಗು, ಸಿಡಿಲು ಸಾಧಾರಣ ಮಳೆ ಜೂ.3ರಿಂದ 7ರ ತನಕ ಬೀಳಲಿದೆ. ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 40ರಿಂದ 45 ಕಿ. ಮೀ., ಗರಿಷ್ಠ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಕಡಲಿಗಿಳಿಯದಂತೆ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು: ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದ್ದು, ಮಿಂಚು, ಗುಡುಗು ಸಹಿತ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ. ಗಾಳಿಯ ವೇಗವೂ ಹೆಚ್ಚಿರುವ ಸಾಧ್ಯತೆ ಇದೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ಬಿಸಿಲು ಮತ್ತು ಉರಿಸೆಕೆಯಿಂದ ಕೂಡಿತ್ತು. ಬೆಳಗ್ಗೆ ಮೋಡ ಕವಿದ ವಾತಾವರಣವೂ ಇತ್ತು. ಮಂಗಳೂರಿನಲ್ಲಿ 35 ಡಿ.ಸೆ. ಗರಿಷ್ಠ ಮತ್ತು 26.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು
ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ
ಕಲ್ಲಿಕೋಟೆ: ವಿದ್ಯಾರ್ಥಿನಿಯನ್ನು ಮಾದಕ ದ್ರವ್ಯ ನೀಡಿ, ಅತ್ಯಾಚಾರ ಎಸಗಿರುವ ಘಟನೆ ಕೇರಳ ಕಲ್ಲಿಕೋಟೆ ಜಿಲ್ಲೆಯಲ್ಲಿ ನಡೆದಿದೆ. ಅನಂತರ ಯುವತಿಯನ್ನು ಬೆಟ್ಟದ ತಿರುವಿನಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಪದವಿಯ ಮೊದಲನೇ ವರ್ಷದಲ್ಲಿ ಓದುತ್ತಿರುವ ಯುವತಿ, ಕಲ್ಲಿಕೋಟೆ ಜಿಲ್ಲೆಯ ತಾಮರಸ್ಸರಿ ಪಟ್ಟಣದಲ್ಲಿ ಕಾಲೇಜಿನ ಸಮೀಪದ ಪೇಯಿಂಗ್ ಗೆಸ್ಟ್ ಹೌಸ್ ನಲ್ಲಿ ವಾಸವಿದ್ದಳು. ಮೇ 30ರಂದು ತಡವಾದರೂ ಹೋಗದ ರುವುದರಿಂದ ಗಾಬರಿಗೊಂಡ ಯುವತಿಯ ಪೋಷಕರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಲೇಜು ಯುವತಿಯನ್ನು ಪರಿಚಿತನೊಬ್ಬ ಕರೆದುಕೊಂಡು ಹೋಗಿದ್ದಾನೆ. ಅನಂತರ ಆಕೆಯ ಅರಿವಿಗೆ ಬಾರದಂತೆ ಮಾದಕದ್ರವ್ಯ ನೀಡಿ, ಅತ್ಯಚಾರ ಎಸಗಲಾಗಿದೆ. ಬಳಿಕ ತಾಮರಸ್ಸರಿ ಚುರಂ ಬೆಟ್ಟದ ತಿರುವಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಯುವತಿ ಪೋಷಕರನ್ನು ಸಂಪರ್ಕಿಸಿದ್ದು, ಆಕೆಯನ್ನು ಅಲ್ಲಿಂದ ಕರೆತರಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿದೆ. ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಕೂಡ ವಿಚಾರಣೆ ನಡೆಸ ಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು
ಕಡಬ: ಮಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ. ಕಡಬ ತಾಲೂಕಿನ ರೆಂಜಲಾಡಿಯ ಯುವತಿ ಅನಾರೋಗ್ಯದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ರಂಜಲಾಡಿ ಗ್ರಾಮದ ನಿಣ್ಣೀರು ನಿವಾಸಿ ರವೀಂದ್ರ ಎಂಬವರ ಪುತ್ರಿ ರಶ್ಮಿಕಾ(18) ಮೃತ ಯುವತಿ.ಅವರಿಗೆ ಆರಂಭದಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಹಬ್ಬ ಚಿಕಿತ್ಸೆ ನೀಡಲಾಗುತ್ತಿತ್ತು. ಆ ವೇಳೆ ಯಾವುದೇ ಸಮಸ್ಯೆ ನನ್ನು ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ. ಕಳೆದ ಶನಿವಾರ ಪೋಷಕರು ಆಕೆಯನ್ನು ಮನೆಗೆ ಕಾಸರ ಕರೆದುಕೊಂಡು ಹೋಗಿ ಸ್ಥಳೀಯವಾಗಿ ಚಿಕಿತ್ಸೆ ಸುಧಾ ನೀಡುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದ ರಶ್ಮಿಕಾ ಗುರುವಾರ ರಾತ್ರಿ 10.30ಕ್ಕೆ ಹಠಾತ್ ಕುಸಿದು ಶುಕ್ರವ ಬಿದ್ದು ಮೃತಪಟ್ಟಿದ್ದಾರೆ. ರಶ್ಮಿತಾ ಸಾವಿನ ಹಿನ್ನೆಲೆಯಲ್ಲಿ ಕಾಲೇಜಿನ ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಶ್ಮಿತಾ ಬ್ಯಾಚಿನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು