ನಿಧಾನಕ್ಕೆ ಸೆಟ್ ಆಗುತ್ತಿದೆ ಮುಂಗಾರು!
– ಕರಾವಳಿಯಲ್ಲಿ 2 ದಿನ ಭಾರೀ ಮಳೆ!
– ಆರೆಂಜ್ ಅಲರ್ಟ್ ಘೋಷಣೆ
– ರಾಜ್ಯದ ಹಲವೆಡೆ ಮಳೆ ಶುರು
NAMMUR EXPRESS NEWS
ಕರಾವಳಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದ್ದು ಮುಂದಿನ ದಿನಗಳಲ್ಲಿ ವರುಣನ ಆರ್ಭಟ ಜೋರಾಗಲಿದ್ದು, ಆರೆಂಜ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.
ಉತ್ತರ ಒಳನಾಡಿನಲ್ಲಿ ವರುಣನ ಆಗಮನವಿಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟ ಜೋರಾಗಿದ್ದು, ಮುಂದಿನ ಐದು ದಿನಗಳ ಕಾಲ ಮಳೆರಾಯನ ಆರ್ಭಟ ಇನ್ನಷ್ಟು ಜೋರಾಗಲಿದೆ.
ವಾಡಿಕೆಯಂತೆ ಈ ಬಾರೀ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭದಲ್ಲಿ ವಿಳಂಬವಾಗಿದ್ದರೂ, ಈಗ ರಾಜ್ಯದಲ್ಲಿ ಚುರುಗೊಂಡಿರುತ್ತದೆ. ಹೀಗಾಗಿ ಕರಾವಳಿ ಭಾಗಗಳಲ್ಲಿ ಮಳೆ ವಿಳಂಬದಿಂದಾಗಿ ಕೃಷಿ ಚಟುವಟಿಕೆಗಳು ತಡವಾಗಿ ಆರಂಭಗೊಂಡಿದೆ. ಆದರೆ ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನ ಜಿಲ್ಲೆಗಳಿಗೆ ಮಳೆಯ ಅವಶ್ಯಕತೆ ತುಂಬಾ ಇರುತ್ತದೆ.
ಜೂನ್ 24 ರಿಂದ ಜೂನ್ 28ರವರೆಗೂ ಕರಾವಳಿಯ ಉತ್ತರ ಕನ್ನಡ ಜಿಲ್ಲೆಗೆ ಎರಡು ದಿನ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ದಿನ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ದಿನಗಳು ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮುಂದಿನ ಎರಡು ದಿನ ದಕ್ಷಿನ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ರಾಮನಗರ, ಮೈಸೂರು, ಚಿತ್ರದು, ವಿಜಯಪುರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023