ರೇಷನ್ ಕಾರ್ಡ್ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ.?
– ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
– ಗೃಹ ಲಕ್ಷ್ಮೀ ಯೋಜನೆಗೆ ಯಜಮಾನಿ ನಮೂದು ಕಡ್ಡಾಯ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರ ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ರೂ. ನೀಡಲಿದ್ದು, ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯರು ಮನೆಯ ಯಜಮಾನಿ ಎಂದು ದಾಖಲಾಗಿರಬೇಕು.
ರಾಜ್ಯದಲ್ಲಿ 1.53 ಕೋಟಿ ಮಂದಿ ಪಡಿತರ ಚೀಟಿ ಹೊಂದಿದ್ದಾರೆ. ಅವರಲ್ಲಿ 1.22 ಕೋಟಿ ಪಡಿತರ ಚೀಟಿಯಲ್ಲಿ ಮಾತ್ರ ಮಹಿಳಾ ಮುಖ್ಯಸ್ಥರು ಇದ್ದಾರೆ. ಇವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಪಡಿತರ ಚೀಟಿಗಳಲ್ಲಿ ಪುರುಷರು ಮುಖ್ಯಸ್ಥರಾಗಿರುವುದರಿಂದ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ನಮೂದಿಸಲು ಅವಕಾಶ ನೀಡಲಾಗಿದೆ. ಕೂಡಲೇ ನೀವು ಕೂಡ ಇದನ್ನು ಸದುಪಯೋಗ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ಲ್ಲಿ ಮುಖ್ಯಸ್ಥರ ಹೆಸರು ಬದಲಾವಣೆಗೆ ಏನು ಮಾಡಬೇಕು ಇಲ್ಲಿದೆ ಡೀಟೇಲ್ಸ್
- ನಿಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.
- ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದಕ್ಕೆ ಅರ್ಜಿಯನ್ನು ಭರ್ತಿ ಮಾಡಿ.
- ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
- ಬಯೋಮೆಟ್ರಿಕ್ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ.
- ಪಡಿತರ ಸೇವಾ ಕೇಂದ್ರದಲ್ಲಿ ಮಾಹಿತಿಯನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಲಾಗುತ್ತದೆ.
ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ಜಾಗ್ರತೆಯಿಂದ ಸಂರಕ್ಷಿಸಿ ಇಟ್ಟುಕೊಂಡಿರಿ. - ಅರ್ಜಿ ಸಲ್ಲಿಕೆ ನಂತರ, ಆಹಾರ ಕಚೇರಿಯಿಂದ ನಿಮಗೆ ಎಸ್ಎಂಎಸ್ ಬರಲಿದೆ
- ಎಸ್ಎಂಎಸ್ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರವನ್ನು ನೀಡಿ ಹೊಸ (ಮನೆ ಯಜಮಾನಿಯನ್ನು ಬದಲಿಸಿದ) ಪಡಿತರ ಚೀಟಿ ಪಡೆಯಬಹುದು.
ಆನ್ಲೈನ್ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಹೇಗೆ.?
- https://ahara.kar.nic.in/ ಲಾಗ್
ಇನ್ ಆಗಿ ಮೇನ್ ಪೇಜ್ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ - (https://ahara.kar.nic.in/lpg/)
ತೆರೆದುಕೊಳ್ಳಲಿದೆ. - ಬಳಿಕ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್ ಮಾಡಿರಿ. ಈಗ ಹೊಸ ಪೇಜ್ ತೆರೆಯಲಿದೆ.
- ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ.
- ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿರಿ.
- ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ
- ಈ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಟ್ರಾಕ್ ಮಾಡಬಹುದು.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023